
ಮಾಸ್ಕೋ (ರಷ್ಯಾ) – ರಷ್ಯಾ ದೇಶವು ತಾಲಿಬಾನ್ ಜೊತೆಗೆ ಮಿಲಿಟರಿ ಸಹಕಾರ ಹೆಚ್ಚಿಸುವ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಮಾಸ್ಕೋದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಭದ್ರತಾ ವೇದಿಕೆಯಲ್ಲಿ ರಷ್ಯಾ ಸರಕಾರವು ಅಫ್ಘಾನಿಸ್ತಾನದೊಂದಿಗಿನ ಈ ಒಪ್ಪಂದಕ್ಕೆ ಅನುಮೋದನೆ ನೀಡಿತು. ಈ ಕಾರ್ಯಕ್ರಮದಲ್ಲಿ ತಾಲಿಬಾನ್ ನ ರಕ್ಷಣಾ ಸಚಿವರು ಉಪಸ್ಥಿತರಿದ್ದರು. ತಾಲಿಬಾನ್ ಸರಕಾರಕ್ಕೆ ಅಧಿಕೃತ ಮಾನ್ಯತೆ ನೀಡಿದ ನಂತರ, ರಷ್ಯಾ ಸರಕಾರವು ತಾಲಿಬಾನ್ ಜೊತೆಗೆ ಇಷ್ಟೊಂದು ಉನ್ನತ ಮಟ್ಟದ ರಕ್ಷಣಾ ಸಹಕಾರವನ್ನು ಸ್ಥಾಪಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
🚨 Russia and the Taliban regime sign a military cooperation agreement!
For years, Pakistan has accused India of using Afghanistan for anti-Pakistan activities.
Now, with Moscow engaging directly with Kabul, Islamabad may have fresh reasons for concern.
Pakistan should… pic.twitter.com/8SuVF4Vjz3
— Sanatan Prabhat (@SanatanPrabhat) May 29, 2026
ಈ ಒಪ್ಪಂದದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲದಿದ್ದರೂ, ವರದಿಯೊಂದರ ಪ್ರಕಾರ ತಾಲಿಬಾನ್ ರಕ್ಷಣಾ ಸಚಿವರು ರಷ್ಯಾ ಬಳಿ ಆಧುನಿಕ ವಾಯು ರಕ್ಷಣಾ ವ್ಯವಸ್ಥೆ ನೀಡುವಂತೆ ಆಗ್ರಹಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪಾಕಿಸ್ತಾನ ನಿರಂತರವಾಗಿ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸುತ್ತಿದೆ. ಪಾಕಿಸ್ತಾನದ ಮಿಲಿಟರಿ ಶಕ್ತಿಯ ಮುಂದೆ ಅಫ್ಘಾನಿಸ್ತಾನದ ಶಕ್ತಿ ಕಡಿಮೆಯಿದೆ. ಇದೇ ಕಾರಣಕ್ಕಾಗಿ ತಾಲಿಬಾನ್ ತನ್ನ ಮಿಲಿಟರಿ ಶಕ್ತಿಯನ್ನು ವೃದ್ಧಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಿದೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman