ಪಾಕ್ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರಿಗೆ ಲಷ್ಕರ್-ಎ-ತೊಯ್ಬಾ ಬಹಿರಂಗ ಬೆದರಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಯಾವುದೇ ಪಾಕಿಸ್ತಾನಿ ನಾಯಕ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಲು ಪ್ರಯತ್ನಿಸಿದರೆ, ಆತನನ್ನು ಹತ್ಯೆ ಮಾಡಲಾಗುವುದು, ಮುಗಿಸಲಾಗುವುದು ಮತ್ತು ಧ್ವಂಸಗೊಳಿಸಲಾಗುವುದು ಎಂದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಉಪಮುಖ್ಯಸ್ಥ ಸೈಫುಲ್ಲಾ ಕಸೂರಿ ಬೆದರಿಕೆ ಹಾಕಿದ್ದಾನೆ. ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಅಬ್ರಹಾಂ ಅಕಾರ್ಡ್ಸ್’ (ಇಸ್ಲಾಮಿಕ್ ದೇಶಗಳು ಇಸ್ರೇಲ್ ಅನ್ನು ಒಂದು ‘ರಾಷ್ಟ್ರ’ ಎಂದು ಮಾನ್ಯ ಮಾಡುವುದು) ಪ್ರಸ್ತಾಪವನ್ನು ಪಾಕಿಸ್ತಾನ ತಿರಸ್ಕರಿಸಿತು. ಇದಾದ ನಂತರ ಕಸೂರಿ ಈ ಮೇಲಿನ ಬೆದರಿಕೆ ಹಾಕಿರುವ ವಿಡಿಯೋ ಬೆಳಕಿಗೆ ಬಂದಿದೆ.
ಕಸೂರಿಯ ಈ ಬೆದರಿಕೆಯಿಂದಾಗಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕಟ್ಟರವಾದಿ ಸಂಘಟನೆಗಳು ದೇಶದ ರಾಜಕೀಯ ಮತ್ತು ಮಿಲಿಟರಿ ಮುಖ್ಯಸ್ಥರ ಮೇಲೆ ಒತ್ತಡ ಹೇರುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತವಾಗುತ್ತಿದೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ