ವಾಹನವನ್ನೂ ಧ್ವಂಸಗೊಳಿಸಿದರು
(ಇಡಿ ಎಂದರೆ ಎನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್, ಅಂದರೆ ಜಾರಿ ನಿರ್ದೇಶನಾಲಯ)

ತಿರುವನಂತಪುರಂ (ಕೇರಳಮ್) – ಜಾರಿ ನಿರ್ದೇಶನಾಲಯವು ಕೇರಳಮ್‌ದ ಮಾಜಿ ಮುಖ್ಯಮಂತ್ರಿ ಮತ್ತು ಸದ್ಯದ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ರವರ ನಿವಾಸ ಸೇರಿದಂತೆ 10 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಗಳು ಅವರ ಮಗಳ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ ಸಂಸ್ಥೆಗೆ ಸಂಬಂಧಿಸಿದ ಕೋಟ್ಯಂತರ ರೂಪಾಯಿಗಳ ಆರ್ಥಿಕ ಅಕ್ರಮಗಳ ಪ್ರಕರಣದಲ್ಲಿ ನಡೆದಿವೆ. ಈ ಹಿಂದೆ ಕೇರಳಮ್ ಉಚ್ಚನ್ಯಾಯಾಲಯವು ಈ ಪ್ರಕರಣದ ತನಿಖೆಯನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಪ್ರಕರಣದಲ್ಲಿ 2024 ರ ವರ್ಷದಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ದಾಳಿಯ ನಂತರ ಅಧಿಕಾರಿಗಳು ವಿಜಯನ್ ರವರ ಮನೆಯಿಂದ ಹೊರಬರುತ್ತಿದ್ದಾಗ, ವಿಜಯನ್ ರವರ ಬೆಂಬಲಿಗರು ಅವರ ಮೇಲೆ ದಾಳಿ ಮಾಡಿ, ಅವರನ್ನು ಥಳಿಸಿದರು.
ಪೊಲೀಸರು ಅಧಿಕಾರಿಗಳನ್ನು ವಾಹನದಲ್ಲಿ ಕೂರಿಸಿದ ನಂತರ, ಬೆಂಬಲಿಗರು ವಾಹನವನ್ನು ಬೆನ್ನಟ್ಟಿ ಕಲ್ಲು ಮತ್ತು ಇಟ್ಟಿಗೆಗಳಿಂದ ಧ್ವಂಸಗೊಳಿಸಿದರು. ವಾಹನದ ಎಲ್ಲ ಗಾಜುಗಳನ್ನು ಒಡೆದವು. ಅದೃಷ್ಟವಶಾತ್ ಇದರಲ್ಲಿ ಅಧಿಕಾರಿಗಳಿಗೆ ಯಾವುದೇ ಗಾಯಗಳಾಗಿಲ್ಲ; ಆದರೆ ಒಬ್ಬ ಪೊಲೀಸ್ ಪೇದೆಯು ಗಾಯಗೊಂಡಿದ್ದಾನೆ. ಈ ದಾಳಿಯ ಕುರಿತು ವಿಜಯನ್ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. (ಇದರರ್ಥ ಇಂತಹ ದಾಳಿಗಳು ನಡೆಯಬೇಕೆಂದು ಅವರು ಬಯಸಿದ್ದರು ಅಥವಾ ಅವರೇ ಬೆಂಬಲಿಗರಿಗೆ ದಾಳಿ ಮಾಡಲು ಆದೇಶ ನೀಡಿದ್ದರು ಎಂದೇ ಯಾರಿಗಾದರೂ ಅನಿಸಬಹುದು ! – ಸಂಪಾದಕರು)
ರಾಹುಲ ಗಾಂಧಿಯವರಿಗೆ ತುಂಬಾ ತೃಪ್ತಿಯಾಗಲಿದೆ! – ಪಿಣರಾಯಿ ವಿಜಯನ್

ದಾಳಿಯ ಕುರಿತು ಪ್ರತಿಕ್ರಿಯಿಸುತ್ತಾ ವಿಜಯನ್ ರವರು, ಇಡಿಯು ಬಹಳ ದಿನಗಳಿಂದ ನನ್ನ ಮನೆಯ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಿತ್ತು. ಈ ದಾಳಿಯಿಂದ ಕೆಲವು ಜನರಿಗೆ, ವಿಶೇಷವಾಗಿ ರಾಹುಲ ಗಾಂಧಿಯವರಂತಹ ವ್ಯಕ್ತಿಗೆ ತುಂಬಾ ತೃಪ್ತಿಯಾಗಲಿದೆ ಎಂದು ನಾನು ಭಾವಿಸುತ್ತೇನೆ. ತಮ್ಮ ಸ್ವಂತ ಪಕ್ಷದ ಹೊರತಾಗಿ ಇತರ ಪಕ್ಷಗಳ ವಿರುದ್ಧ ಇಡಿಯ ಹಸ್ತಕ್ಷೇಪ ಮುಂದುವರಿಯಬೇಕು ಎಂಬುದು ಕಾಂಗ್ರೆಸ್ಸಿನ ನಿಲುವಾಗಿದೆ ಎಂದರು.
ರಾಹುಲ ಗಾಂಧಿಯವರು, ‘ಪಿಣರಾಯಿ ವಿಜಯನ್ ರವರ ಮನೆಯ ಮೇಲೆ ಏಕೆ ದಾಳಿ ನಡೆಸುತ್ತಿಲ್ಲ ಮತ್ತು ಅವರನ್ನು ಏಕೆ ಬಂಧಿಸುತ್ತಿಲ್ಲ?’, ಎಂಬ ಪ್ರಶ್ನೆಯನ್ನು ಎತ್ತಿದ್ದರು.
ವಿಜಯನ್ ರವರು ಭಾಜಪವನ್ನು ಟೀಕಿಸುತ್ತಾ, ಕೇಂದ್ರದ ಭಾಜಪ ಸರಕಾರವು ದೇಶದಲ್ಲಿ ವಿರೋಧ ಪಕ್ಷದ ನಾಯಕರ ಮೇಲೆ ಯಾವಾಗಲೂ ಉದ್ದೇಶಪೂರ್ವಕವಾಗಿ ಆಕ್ರಮಣಗಳನ್ನು ಮಾಡುತ್ತಿದೆ. ಇದರ ವಿರುದ್ಧ ಇಡೀ ದೇಶದಲ್ಲಿ ತೀವ್ರ ಪ್ರತಿಭಟನಾ ಆಂದೋಲನ ನಡೆದಿದೆ ಎಂದು ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ