
ಇಸ್ಲಾಮಾಬಾದ್ (ಪಾಕಿಸ್ತಾನ) – ಕೆಲವು ದಿನಗಳ ಹಿಂದೆ ಪಾಕಿಸ್ತಾನವು ಲಾಹೋರ್‌ನಲ್ಲಿನ ಕೆಲವು ವೃತ್ತಗಳು ಮತ್ತು ರಸ್ತೆಗಳ ಹೆಸರುಗಳನ್ನು ಅವುಗಳ ಹಳೆಯ ಹಿಂದೂ ಹೆಸರುಗಳನ್ನಾಗಿ ಇಡುವುದಾಗಿ ಘೋಷಿಸಿತ್ತು. ಈ ನಿರ್ಧಾರವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಹಾಗೆಯೇ ಈ ನಿರ್ಧಾರದಿಂದಾಗಿ ಪಂಜಾಬ್ ಸರಕಾರವು ಸಾಕಷ್ಟು ಪ್ರಶಂಸೆಯನ್ನು ಪಡೆದುಕೊಂಡಿತ್ತು; ಆದರೆ ಈಗ ದೇಶದ ಕಟ್ಟರಪಂಥೀಯರ ಮುಂದೆ ಶರಣಾಗಿ ಪಂಜಾಬ್ ಮುಖ್ಯಮಂತ್ರಿ ಮರಿಯಮ್ ನವಾಜ್ ಅವರು ಹೆಸರುಗಳನ್ನು ಬದಲಾಯಿಸುವ ನಿರ್ಧಾರವನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ಪಾಕಿಸ್ತಾನದ ವಂಚನೆಯು ಜಗತ್ತಿನ ಮುಂದೆ ಬಂದಿದೆ.
೧. ಮುಖ್ಯಮಂತ್ರಿ ಮರಿಯಮ್ ನವಾಜ್ ಅವರು ಮಾರ್ಚ್ ೨೦ ರಂದು ಲಾಹೋರ್‌ನಲ್ಲಿನ ರಸ್ತೆಗಳು, ಗಲ್ಲಿಗಳು ಮತ್ತು ಐತಿಹಾಸಿಕ ಕಾಲೇಜುಗಳಿಗೆ ಹಳೆಯ ಹಿಂದೂ ಹೆಸರುಗಳನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಪಾಕಿಸ್ತಾನದ ಮೇಲಿರುವ ಕಟ್ಟರತೆಯ ಕಳಂಕವನ್ನು ಅಳಿಸಿಹಾಕಲು ಈ ಕುರಿತಾದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿಯೇ ಮಾಧ್ಯಮಗಳಿಗೆ ನೀಡಲಾಗಿತ್ತು.
೨. ಈ ನಿರ್ಧಾರದ ಪ್ರಕಾರ ಲಾಹೋರ್‌ನಲ್ಲಿನ ‘ಇಸ್ಲಾಮ್‌ಪುರ’ದ ಹೆಸರನ್ನು ‘ಕೃಷ್ಣ ನಗರ’ ಎಂದು ಬದಲಾಯಿಸಬೇಕಾಗಿತ್ತು, ಹಾಗೆಯೇ ‘ಬಾಬರಿ ಮಸೀದಿ ವೃತ್ತ’ದ ಹೆಸರನ್ನು ‘ಜೈನ ಮಂದಿರ ವೃತ್ತ’ ಎಂದು ಮಾಡಬೇಕಾಗಿತ್ತು.
೩. ಮರಿಯಮ್ ನವಾಜ್ ಅವರ ಈ ನಿರ್ಧಾರದ ವಿರುದ್ಧ ಪಾಕಿಸ್ತಾನದಲ್ಲಿ ಯಾವುದೇ ಧ್ವನಿ ಎದ್ದಿರಲಿಲ್ಲ; ಆದರೆ ಒಳಗಿನಿಂದ ವಿರೋಧ ವ್ಯಕ್ತವಾಗುತ್ತಿತ್ತು. ಕೊನೆಗೆ ವಿಷಯವು ಉಲ್ಬಣಗೊಂಡಾಗ, ಮರಿಯಮ್ ನವಾಜ್ ಅವರು ಪ್ರದೇಶದ ಹೆಸರುಗಳನ್ನು ಬದಲಾಯಿಸುವ ನಿರ್ಧಾರವನ್ನು ಮುಂದೂಡಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation