ಕ್ರೈಸ್ತನಾದರೆ ಸರಕಾರಿ ಉದ್ಯೋಗ ಕೊಡುವೆ, ಸುಂದರ ಹುಡುಗಿಯೊಂದಿಗೆ ಮದುವೆ ಮಾಡಿಸುವೆ, ಎಂದು ನೀಡುತ್ತಿದ್ದ ಆಮಿಷ !

ಪೀಲಿಭೀತ್ (ಉತ್ತರಪ್ರದೇಶ) – ಇಲ್ಲಿ ಆಮಿಷವೊಡ್ಡಿ ಕ್ರೈಸ್ತನಾಗಲು ಒತ್ತಡ ಹೇರುತ್ತಿದ್ದ ಅನೋಖೇಲಾಲ್ ಎಂಬ ಮತಾಂತರಗೊಂಡ ಮಿಷನರಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವನು ಗ್ರಾಮಸ್ಥರಿಗೆ ಸರಕಾರಿ ಉದ್ಯೋಗ ಮತ್ತು ಸುಂದರ ಹುಡುಗಿಯೊಂದಿಗೆ ಮದುವೆ ಮಾಡಿಸುವ ಆಮಿಷವೊಡ್ಡಿ ಕ್ರೈಸ್ತ ಪಂಥವನ್ನು ಸ್ವೀಕರಿಸಲು ಒತ್ತಡ ಹೇರುತ್ತಿದ್ದನು. ಗ್ರಾಮಸ್ಥರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಈ ಪ್ರಚಾರಕ್ಕಾಗಿ ಅವನಿಗೆ ನಿಧಿ ಎಲ್ಲಿಂದ ಸಿಗುತ್ತಿತ್ತು ಮತ್ತು ಅವನು ಯಾವ ವಿಭಾಗಕ್ಕಾಗಿ ಕೆಲಸ ಮಾಡುತ್ತಿದ್ದನು, ಎಂಬುದರ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ.
ಯೇಸುವು ದುಷ್ಟ ಆತ್ಮದಿಂದ ಮುಕ್ತಗೊಳಿಸಿದ್ದರಿಂದ ಮತಾಂತರಗೊಂಡಿದ್ದಾಗಿ ದಾವೆ
ಅನೋಖೇಲಾಲ್ ತಾನು ೨೦ ವರ್ಷಗಳಿಂದ ಕ್ರೈಸ್ತ ಪಂಥದ ಪ್ರಚಾರ ಮಾಡುತ್ತಿರುವುದಾಗಿ ಮತ್ತು ತಾನು ಈ ಕೆಲಸವನ್ನು ‘ಒಳ್ಳೆಯ ಕೆಲಸ’ ಎಂದು ಪರಿಗಣಿಸುವುದಾಗಿ ಹೇಳಿದನು. ತನ್ನ ಹಿಂದೆ ಒಂದು ದುಷ್ಟ ಆತ್ಮ ಬಿದ್ದಿತ್ತು. ಅದು ಅವನನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿತ್ತು ಎಂದು ಅವನು ದಾವೆ ಮಾಡಿದನು. ಅವನು ದೆಹಲಿಯಲ್ಲಿ ಓರ್ವ ವ್ಯಕ್ತಿಯನ್ನು ಭೇಟಿಯಾದನು. ಅವನು ಇವನಿಗೆ ಬೈಬಲ್ ಓದಲು ಸಲಹೆ ನೀಡಿದನು. ಇದರ ನಂತರ ಯೇಸು ಕ್ರಿಸ್ತನು ಅವನನ್ನು ಆ ದುಷ್ಟ ಆತ್ಮದಿಂದ ಮುಕ್ತಗೊಳಿಸಿದನು. (ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದಿದ್ದರಿಂದ ಇಂತಹ ಇತರ ಧರ್ಮೀಯರ ಮೂಢನಂಬಿಕೆಗಳಿಗೆ ಬಲಿಯಾಗಿ ಹಿಂದೂಗಳು ಆತ್ಮಾಹುತಿ ಮತ್ತು ರಾಷ್ಟ್ರಘಾತ ಮಾಡುತ್ತಿದ್ದಾರೆ ! ಇದನ್ನು ತಡೆಯಲು ಹಿಂದೂ ಸಂಘಟನೆಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು ! – ಸಂಪಾದಕರು) ಅದರ ನಂತರ ಅವನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡನು. ಅಂದಿನಿಂದ ಅವನು ಹಳ್ಳಿಹಳ್ಳಿಗೆ ಹೋಗಿ ಕ್ರೈಸ್ತ ಪಂಥದ ಪ್ರಚಾರ ಮಾಡುತ್ತಿದ್ದಾನೆ. (ಮತಾಂತರಗೊಂಡವರು ಹೆಚ್ಚು ಕಟ್ಟರಾಗಿರುತ್ತಾರೆ, ಎಂಬುದು ಇದರಿಂದಲೇ ಕಂಡುಬರುತ್ತದೆ ! – ಸಂಪಾದಕರು)
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!