
ವಾಶಿಂಗ್ಟನ್ (ಅಮೆರಿಕ) – ಅಮೆರಿಕದೊಂದಿಗೆ ನಡೆಯುತ್ತಿರುವ ಶಾಂತಿ ಚರ್ಚೆಯ ಒಂದು ಭಾಗವಾಗಿ ಇರಾನ್ ತನ್ನ ಬಳಿಯಿರುವ ಅತ್ಯಂತ ಘಾತಕವಾದ ‘ಸಂವರ್ಧಿತ (ಎನ್ರಿಚ್ಡ್) ಯುರೇನಿಯಂ’ನ ದಾಸ್ತಾನನ್ನು ಬಿಟ್ಟುಕೊಡಲು ತತ್ತ್ವಶಃ ಸಿದ್ಧವಾಗಿದೆ. ‘ದ ನ್ಯೂಯಾರ್ಕ್ ಟೈಮ್ಸ್’ ಅಮೆರಿಕದ ೨ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ಈ ವರದಿ ನೀಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಜನ್ಯ ಪರಿಸ್ಥಿತಿಯನ್ನು ಕೊನೆಗೊಳಿಸಲು ಹಾಗೂ ಹಾರ್ಮುಜ್ ಜಲಸಂಧಿ ಎಂಬ ಸಾಗರ ಮಾರ್ಗವನ್ನು ವ್ಯಾಪಾರಕ್ಕಾಗಿ ಮತ್ತೆ ತೆರೆಯಲು ಒಂದು ದೊಡ್ಡ ಒಪ್ಪಂದವು ಅಂತಿಮ ಹಂತದಲ್ಲಿದೆ ಎಂದು ಘೋಷಿಸಿದ್ದರು. ಈ ಘೋಷಣೆಯ ನಂತರ ಕೂಡಲೇ ಇರಾನ್ ಪರಮಾಣು ಶಸ್ತ್ರಾಸ್ತ್ರಗಳಿಗಾಗಿ ಬಳಸಬಹುದಾದ ಯುರೇನಿಯಂ ಬಿಟ್ಟುಕೊಡಲು ಸಿದ್ಧವಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಇರಾನ್ ಯುರೇನಿಯಂ ನೀಡುವ ಸೂತ್ರವನ್ನು ತಳ್ಳಿಹಾಕಿತು !
ಇರಾನ್ ತನ್ನ ಸಂವರ್ಧಿತ ಯುರೇನಿಯಂನ ದಾಸ್ತಾನನ್ನು ಅಮೆರಿಕಕ್ಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸದ್ಯದ ಪ್ರಾಥಮಿಕ ಒಪ್ಪಂದದಲ್ಲಿ ಅಣುವಿಷಯದ ಸಮಾವೇಶವಿಲ್ಲ ಎಂದು ಓರ್ವ ಹಿರಿಯ ಇರಾನಿ ಅಧಿಕಾರಿ ಹೇಳಿದರು.
ಇರಾನ್ ಬಳಿ ನಿಖರವಾಗಿ ಎಷ್ಟು ಯುರೇನಿಯಂ ಇದೆ ?
‘ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ’ಯ ವರದಿಗನುಸಾರ ಇರಾನ್ ಬಳಿ ಸದ್ಯ ಸುಮಾರು ೪೦೦ ಕಿಲೋಗ್ರಾಂ ನಷ್ಟು ಶೇಕಡಾ ೬೦ ರಷ್ಟು ಶುದ್ಧತೆಯ ಯುರೇನಿಯಂ ಇದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಈ ಯುರೇನಿಯಂ ಅತ್ಯಂತ ಪೂರಕವಾಗಿದೆ ಎಂದು ಪರಿಗಣಿಸಲಾಗುತ್ತದೆ. ಇಸ್ರೇಲ್ ನ ಪ್ರಕಾರ, ಇರಾನ್ ಈ ದಾಸ್ತಾನಿನಿಂದ ಒಂದಕ್ಕಿಂತ ಹೆಚ್ಚು ಅಣುಬಾಂಬ್ ಗಳನ್ನು ಸುಲಭವಾಗಿ ತಯಾರಿಸಬಹುದು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !