
ವಾಷಿಂಗ್ಟನ್ (ಅಮೆರಿಕ) – ಇರಾನ್‌ನ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ ಬೆಂಬಲಿತ ಉಗ್ರನೊಬ್ಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಅಮೆರಿಕದ ತನಿಖಾ ಸಂಸ್ಥೆಯಾದ ‘ಎಫ್.ಬಿ.ಐ.’ (‘ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್’ _ ಮಧ್ಯವರ್ತಿ ತನಿಖಾ ವಿಭಾಗವು) ೩೨ ವರ್ಷದ ಇರಾಕಿ ಪ್ರಜೆ ಮಹಮ್ಮದ್ ಬಾಕರ್ ಸಾದ್ ದಾವೂದ್ ಅಲ್-ಸಾದಿ ಎಂಬಾತನನ್ನು ಬಂಧಿಸಿದೆ. ಈತನ ಬಳಿ ಇವಾಂಕಾ ಮತ್ತು ಆಕೆಯ ಪತಿ ಜ್ಯಾರೆಡ್ ಕುಶ್ನರ್ ಅವರ ಫ್ಲೋರಿಡಾದಲ್ಲಿರುವ ಮನೆಯ ನಕ್ಷೆಯೂ ಪತ್ತೆಯಾಗಿದೆ.
ಅಲ್-ಸಾದಿ ‘ಕತೈಬ್ ಹಿಜ್ಬುಲ್ಲಾ’ ಎಂಬ ಉಗ್ರಗಾಮಿ ಸಂಘಟನೆಯ ಸದಸ್ಯನಾಗಿದ್ದಾನೆ. ಈತ ‘ಎಕ್ಸ್’ನಲ್ಲಿ ಬೆದರಿಕೆ ಹಾಕುತ್ತಾ, ಅಮೆರಿಕದ ಜನರು ಇದನ್ನು ಅರ್ಥಮಾಡಿಕೊಳ್ಳಬೇಕು, ಕೇವಲ ದೊಡ್ಡ ಭದ್ರತಾ ವ್ಯವಸ್ಥೆ ಮತ್ತು ‘ಸೀಕ್ರೆಟ್ ಸರ್ವಿಸ್’ನಿಂದಾಗಿ (ಅಮೆರಿಕದ ಭದ್ರತಾ ಸಂಸ್ಥೆ) ಅವರು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ನಾವು ಅವರ ಮೇಲೆ ನಿಗಾ ಇಟ್ಟಿದ್ದೇವೆ ಮತ್ತು ಸರಿಯಾದ ಸಮಯ ಬಂದಾಗ ಸೇಡು ತೀರಿಸಿಕೊಳ್ಳಲಾಗುವುದು ಎಂದು ಬರೆದಿದ್ದನು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ