‘ಕ್ರೀಮಿ ಲೇಯರ್' ಕುರಿತು ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ
(ಕ್ರೀಮಿ ಲೇಯರ್ ಎಂದರೆ ಹಿಂದುಳಿದ ವರ್ಗಗಳಲ್ಲಿ ಯಾರ ವಾರ್ಷಿಕ ಆದಾಯವು ೮ ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದೆಯೋ, ಅವರಿಗೆ ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಲಾಗುವುದಿಲ್ಲ. ಇಂತಹ ಜನರು ‘ಕ್ರೀಮಿ ಲೇಯರ್’ ಪರಿಕಲ್ಪನೆಯಡಿ ಬರುತ್ತಾರೆ.)

ನವದೆಹಲಿ – ತಂದೆ-ತಾಯಿ ಇಬ್ಬರೂ ಭಾರತೀಯ ಆಡಳಿತ ಸೇವೆಯ (ಐ.ಎ.ಎಸ್. – ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್) ಅಧಿಕಾರಿಗಳಾಗಿದ್ದರೆ, ಅವರ ಮಕ್ಕಳಿಗೆ ಮೀಸಲಾತಿ ಏಕೆ ಸಿಗಬೇಕು? ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿದೆ. ಹಿಂದುಳಿದ ವರ್ಗಗಳ ಪ್ರವರ್ಗದಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದ ಕುಟುಂಬಗಳ ಮಕ್ಕಳಿಗೆ ಮೀಸಲಾತಿಯ ಲಾಭವನ್ನು ಮುಂದುವರಿಸುವುದರ ಕುರಿತು ನ್ಯಾಯಾಲಯವು ಈ ಪ್ರಶ್ನೆಯನ್ನು ಎತ್ತಿದೆ. ಕರ್ನಾಟಕ ಹೈಕೋರ್ಟ್‌ನ ತೀರ್ಪೊಂದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠವು ನಡೆಸುತ್ತಿತ್ತು. ಆ ತೀರ್ಪಿನಲ್ಲಿ ಅರ್ಜಿದಾರರನ್ನು ‘ಕ್ರೀಮಿ ಲೇಯರ್’ ಎಂದು ಪರಿಗಣಿಸಿ ಮೀಸಲಾತಿಯ ಲಾಭವನ್ನು ನಿರಾಕರಿಸಲಾಗಿತ್ತು.
ಮಕ್ಕಳಿಗಾಗಿ ಮೀಸಲಾತಿಯನ್ನು ಕೇಳುತ್ತಲೇ ಇದ್ದರೆ, ನಾವು ಎಂದಿಗೂ ಇದರಿಂದ ಹೊರಬರಲು ಸಾಧ್ಯವಿಲ್ಲ!
ಅರ್ಜಿದಾರರ ತಂದೆ-ತಾಯಿ ಇಬ್ಬರೂ ರಾಜ್ಯ ಸರಕಾರದ ಉದ್ಯೋಗಿಗಳಾಗಿದ್ದಾರೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತು ಮಾತನಾಡಿ, “ಒಂದು ವೇಳೆ ತಂದೆ-ತಾಯಿ ಒಳ್ಳೆಯ ಉದ್ಯೋಗದಲ್ಲಿದ್ದು, ಉತ್ತಮ ಆದಾಯವನ್ನು ಗಳಿಸುತ್ತಿದ್ದರೆ, ಅವರ ಮಕ್ಕಳು ಮೀಸಲಾತಿಯಿಂದ ಹೊರಬರಬೇಕು. ಇಂತಹ ಸಮೃದ್ಧ ವರ್ಗವನ್ನು ಮೀಸಲಾತಿಯ ಲಾಭದಿಂದ ಹೊರಗಿಡುವಂತೆ ಸರಕಾರ ಈಗಾಗಲೇ ಆದೇಶಿಸಿದೆ. ಮಕ್ಕಳಿಗಾಗಿಯೂ ಮೀಸಲಾತಿಯನ್ನು ಕೇಳುತ್ತಲೇ ಹೋದರೆ, ನಾವು ಎಂದಿಗೂ ಇದರಿಂದ ಹೊರಬರಲು ಸಾಧ್ಯವಿಲ್ಲ” ಎಂದು ಹೇಳಿತು.
ಅರ್ಜಿದಾರನು ‘ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್’ (ಕೆ.ಪಿ.ಟಿ.ಸಿ.ಎಲ್.) ನಲ್ಲಿ ಮೀಸಲಾತಿ ಪ್ರವರ್ಗದ ಅಡಿಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದನು; ಆದರೆ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ಆತನನ್ನು ‘ಕ್ರೀಮಿ ಲೇಯರ್’ ವ್ಯಾಪ್ತಿಗೆ ಒಳಪಡಿಸಿತು. ಈ ಕಾರಣದಿಂದಾಗಿ ಆತನಿಗೆ ಜಾತಿ ಸಿಂಧುತ್ವ ಪ್ರಮಾಣಪತ್ರವನ್ನು ನೀಡಲಾಗಿರಲಿಲ್ಲ. ಆತನ ಪೋಷಕರ ಒಟ್ಟು ಜಂಟಿ ಆದಾಯವು ಕ್ರೀಮಿ ಲೇಯರ್ ದ ೮ ಲಕ್ಷ ರೂಪಾಯಿಗಳ ಮಿತಿಗಿಂತ ಹೆಚ್ಚಾಗಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”