ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆ ವಿರೋಧಿಸಲು ಅಭಿಯಾನ ಆರಂಭ

ನವದೆಹಲಿ – ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ಕೆಲವು ದಿನಗಳ ಹಿಂದೆ ನಿರುದ್ಯೋಗಿ ಯುವಕರನ್ನು ‘ಕಾಕ್ರೋಚ್’ (ಜಿರಳೆ) ಎಂದು ಕರೆದಿದ್ದಾರೆಂಬುದನ್ನು ಕೆಲವರು ಬಂಡವಾಳ ಮಾಡಿಕೊಂಡು ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಹೆಚ್ಚುತ್ತಿರುವ ವಿರೋಧವನ್ನು ನೋಡಿ, ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟೀಕರಣ ನೀಡಿ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದರು. ಆದಾಗ್ಯೂ ಅವರ ಹೇಳಿಕೆಯನ್ನು ಖಂಡಿಸಲು ವಿದೇಶದಲ್ಲಿ ವಾಸಿಸುವ ಅಭಿಜೀತ್ ದೀಪಕ್ ಎಂಬ ವ್ಯಕ್ತಿ ಎಕ್ಸ್ ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಹೆಸರಿನ ಖಾತೆಯನ್ನು ತೆರೆದಿದ್ದನು. ಈ ಮೂಲಕ ಭಾಜಪ ಸರಕಾರ, ಭಾರತೀಯ ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆ ಮುಂತಾದವುಗಳ ಮೇಲೆ ವ್ಯಂಗ್ಯಭರಿತ ಟೀಕೆ ಮಾಡಿದ್ದನು. ಕೇವಲ ೬ ದಿನಗಳಲ್ಲಿ ಈ ಖಾತೆಗೆ ೧ ಲಕ್ಷದ ೯೩ ಸಾವಿರ ಅನುಯಾಯಿಗಳು ಸಿಕ್ಕಿದ್ದರು. ಈಗ ಈ ಖಾತೆಯನ್ನು ನಿಷೇಧಿಸಲಾಗಿದೆ.
‘ಎಕ್ಸ್’ ಸಂಸ್ಥೆಯು ಈ ಕ್ರಮದ ಕುರಿತು ಪ್ರತಿಕ್ರಿಯಿಸಿ, ಭಾರತದ ಸ್ಥಳೀಯ ನಿಯಮಗಳು, ನ್ಯಾಯಾಲಯದ ಆದೇಶ ಮತ್ತು ಕಾನೂನುಬದ್ಧ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ‘ಜಾತ್ಯತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ, ಆಲಸಿ’ ಎಂಬುದು ‘ಕಾಕ್ರೋಚ್ ಜನತಾ ಪಕ್ಷ’ದ ಧ್ಯೇಯ ವಾಕ್ಯವಾಗಿತ್ತು ಮತ್ತು ಹೊಸ ಲಾಂಛನವನ್ನು (ಲೋಗೋ) ಸಹ ಸಿದ್ಧಪಡಿಸಲಾಗಿತ್ತು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !