ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡ ಭಾರತ
ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದ ಪಾಕಿಸ್ತಾನ

ನ್ಯೂಯಾರ್ಕ್ (ಅಮೆರಿಕ) – ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಪಾಕಿಸ್ತಾನಕ್ಕೆ ತೀಕ್ಷ್ಣ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿತು. ಮಂಡಳಿಯ ಚರ್ಚೆಯೊಂದರ ಅವಧಿಯಲ್ಲಿ ಪಾಕಿಸ್ತಾನವು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸುತ್ತಾ, ಭಾರತವು ಅದರ ಮೇಲೆ ಅನಧಿಕೃತ ನಿಯಂತ್ರಣ ಸಾಧಿಸಿದೆ ಮತ್ತು ಅಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಸಬೇಕು ಎಂದು ಹೇಳಿಕೆ ನೀಡಿದಾಗ, ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಪಾಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಾರತದ ಪ್ರತಿನಿಧಿ ಹರೀಶ ಪರ್ವತನೇನಿ ಅವರು ಮಾತನಾಡಿ, ನರಮೇಧದ ದೀರ್ಘಕಾಲದ ಕಳಂಕಿತ ಇತಿಹಾಸವಿರುವ ಪಾಕಿಸ್ತಾನವು ಭಾರತದ ಸಂಪೂರ್ಣ ಆಂತರಿಕ ವಿಷಯಗಳನ್ನು ಉಲ್ಲೇಖಿಸುವುದು ಒಂದು ದೊಡ್ಡ ವಿರೋಧಾಭಾಸವಾಗಿದ್ದು, ಅದಕ್ಕೆ ಹಾಗೆ ಮಾಡುವ ಯಾವುದೇ ಹಕ್ಕಿಲ್ಲ ಎಂದು ಹೇಳಿದರು.
ಪಾಕಿಸ್ತಾನವು ಈ ವರ್ಷದ ಆರಂಭದಲ್ಲಿ ಅಫ್ಘಾನಿಸ್ತಾನದ ಮೇಲೆ ನಡೆಸಿದ ಭೀಕರ ಆಕ್ರಮಣಗಳ ಉಲ್ಲೇಖ ನೀಡುತ್ತಾ ಪರ್ವತನೇನಿ ಅವರು ಮುಂದುವರಿದು, ರಮಜಾನ್ ನಂತಹ ಪವಿತ್ರ ತಿಂಗಳಿನಲ್ಲಿ ಪಾಕಿಸ್ತಾನವು ಕಾಬೂಲ್ ಆಸ್ಪತ್ರೆಯೊಂದರ ಮೇಲೆ ಭೀಕರ ಆಕ್ರಮಣ ನಡೆಸಿತ್ತು. ಹಿಂಸಾಚಾರದ ಈ ಅಮಾನವೀಯ ಕೃತ್ಯದಲ್ಲಿ ೨೬೯ ನಾಗರಿಕರು ಸಾವನ್ನಪ್ಪಿದ್ದರು. ಈ ಘಟನೆಯು ಯಾವುದೇ ಸೈನಿಕ ಗುರಿ ಇಲ್ಲದ ಸ್ಥಳದಲ್ಲಿ ನಡೆದಿತ್ತು. ಇದನ್ನು ಯಾವುದೇ ಪರಿಸ್ಥಿತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗಲೂ ಅಂತರರಾಷ್ಟ್ರೀಯ ಕಾನೂನಿನ ನಿಯಮಗಳ ತತ್ವಗಳ ಭಾಷೆ ಮಾತನಾಡುವುದು ಪಾಕಿಸ್ತಾನದ ಬೂಟಾಟಿಕೆಯಾಗಿದೆ ಎಂದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation