
ಕೊಲಕಾತಾ (ಬಂಗಾಲ) – ಬಂಗಾಲದ ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು ಭಾರತ-ಬಾಂಗ್ಲಾದೇಶ ಗಡಿಯಲ್ಲಿನ ೨೭ ಕಿಲೋಮೀಟರ್ ಭೂಮಿಯನ್ನು ಗಡಿ ಭದ್ರತಾ ಪಡೆಗೆ ಒಪ್ಪಿಸಿದರು. ಇದರ ಮೇಲೆ ಈಗ ಬೇಲಿ ಮತ್ತು ಭದ್ರತಾ ವ್ಯವಸ್ಥೆಯನ್ನು ನಿರ್ಮಿಸುವರು.
ಗಡಿ ಭದ್ರತಾ ಪಡೆ, ಪೊಲೀಸ್ ಮತ್ತು ಆಡಳಿತ ಇವುಗಳ ಸಮನ್ವಯ ಸಭೆಗಳು ಮತ್ತೆ ಪ್ರಾರಂಭವಾಗಲಿವೆ !
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು, ‘ಇದು ಕೇವಲ ಪ್ರಾರಂಭವಾಗಿದೆ. ಮುಂದೆ ಗಡಿ ಭದ್ರತೆಗಾಗಿ ಎಲ್ಲಿ ಭೂಮಿಯ ಅವಶ್ಯಕತೆಯಿರುತ್ತದೆಯೋ, ರಾಜ್ಯ ಸರಕಾರವು ಅದನ್ನು ಗಡಿ ಭದ್ರತಾ ಪಡೆಗೆ ಲಭ್ಯ ಮಾಡಿಕೊಡುವುದು. ಗಡಿ ಭದ್ರತೆಯನ್ನು ಬಲಪಡಿಸಲು ಬೇಲಿಯ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸುವುದು ಅವಶ್ಯಕವಾಗಿದೆ. ಹಿಂದಿನ ತೃಣಮೂಲ ಕಾಂಗ್ರೆಸ್ ಸರಕಾರವು ಮತಬ್ಯಾಂಕಿನ ರಾಜಕಾರಣ ಮತ್ತು ಓಲೈಕೆಯಿಂದಾಗಿ ಗಡಿ ಭದ್ರತಾ ಪಡೆಗೆ ಭೂಮಿಯನ್ನು ನೀಡಲಿಲ್ಲ. ಕಳೆದ ಅನೇಕ ವರ್ಷಗಳಿಂದ ಗಡಿಭಾಗದ ಜಿಲ್ಲೆಗಳಲ್ಲಿ ಗಡಿ ಭದ್ರತಾ ಪಡೆ, ರಾಜ್ಯ ಪೊಲೀಸ್ ಮತ್ತು ಜಿಲ್ಲಾಡಳಿತದ ನಡುವೆ ಸಮನ್ವಯ ಸಭೆಗಳು ನಡೆಯುತ್ತಿರಲಿಲ್ಲ. ಈಗ ಈ ಸಭೆಗಳು ಮತ್ತೆ ಪ್ರಾರಂಭವಾಗಿದ್ದು ಮುಂದೆ ಅವು ನಿಯಮಿತವಾಗಿ ನಡೆಯಲಿವೆ’ ಎಂದು ಹೇಳಿದರು.
ಈ ಸಮಯದಲ್ಲಿ ಗಡಿ ಭದ್ರತಾ ಪಡೆಯ ಅಧಿಕಾರಿಗಳು, ‘ರಾಜ್ಯದ ೨ ಸಾವಿರದ ೨೦೦ ಕಿಲೋಮೀಟರ್ ಉದ್ದದ ಅಂತರರಾಷ್ಟ್ರೀಯ ಗಡಿಯ ಪೈಕಿ ಅಂದಾಜು ೧ ಸಾವಿರದ ೬೦೦ ಕಿಲೋಮೀಟರ್ ಭಾಗದಲ್ಲಿ ಬೇಲಿ ಹಾಕಿದ್ದಾರೆ, ಹಾಗೂ ಅಂದಾಜು ೬೦೦ ಕಿಲೋಮೀಟರ್ ಗಡಿಯು ಇಂದಿಗೂ ಬೇಲಿಯಿಲ್ಲದೆ ಇದೆ’ ಎಂದು ಹೇಳಿದರು.
ಬಂಗಾಲದಲ್ಲಿ ನಾಗರಿಕತ್ವ ಸುಧಾರಣಾ ಕಾಯ್ದೆ ಜಾರಿ !ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು ಈ ಸಮಯದಲ್ಲಿ, ರಾಜ್ಯದಲ್ಲಿ ‘ಸಿಎಎ’ (ಸಿಟಿಜನ್ ಅಮೆಂಡಮೆಂಟ್ ಆಕ್ಟ್ – ನಾಗರಿಕತ್ವ ಸುಧಾರಣಾ ಕಾಯ್ದೆ) ಜಾರಿಗೊಳಿಸಿರುವುದಾಗಿ ಘೋಷಿಸಿದರು. ನುಸುಳುಕೋರರ ಪ್ರಶ್ನೆಯ ಕುರಿತು ಅವರು, ‘ಈಗ ರಾಜ್ಯ ಪೊಲೀಸರು ಹಿಡಿದ ನುಸುಳುಕೋರರನ್ನು ನೇರವಾಗಿ ಗಡಿ ಭದ್ರತಾ ಪಡೆಗೆ ಒಪ್ಪಿಸುವರು. ಇಂತಹ ಜನರನ್ನು ನಂತರ ಮರಳಿ ಬಾಂಗ್ಲಾದೇಶಕ್ಕೆ ಕಳುಹಿಸುವರು. ಕೇಂದ್ರ ಸರಕಾರವು ಕಳೆದ ವರ್ಷ ಈ ಸಂದರ್ಭದಲ್ಲಿ ರಾಜ್ಯಕ್ಕೆ ಪತ್ರವನ್ನು ಕಳುಹಿಸಿತ್ತು; ಆದರೆ ಹಿಂದಿನ ಸರಕಾರವು ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಯಾರು ‘ಸಿಎಎ’ಯ (ಸಿಟಿಜನ್ ಅಮೆಂಡಮೆಂಟ್ ಆಕ್ಟ್ – ನಾಗರಿಕತ್ವ ಸುಧಾರಣಾ ಕಾಯ್ದೆ) ವ್ಯಾಪ್ತಿಯಲ್ಲಿ ಬರುವುದಿಲ್ಲವೋ, ಅವರನ್ನು ನುಸುಳುಕೋರರು ಎಂದು ಪರಿಗಣಿಸುವರು’ ಎಂದು ಹೇಳಿದರು. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!