ಬಕ್ರೀದ್ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳಿಂದ ಪೊಲೀಸರಿಗೆ ರಜಾಕಾರಿ ಆದೇಶ
ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಾಣಿಗಳನ್ನು ಸಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ!

ಮುಂಬಯಿ – ಪ್ರಾಣಿಗಳನ್ನು ಸಾಗಿಸುವ ವಾಹನಗಳನ್ನು ತಡೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಹಾಗೆಯೇ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಾಣಿಗಳನ್ನು ಸಾಗಿಸಿದ ಆರೋಪದ ಮೇಲೆ ಪ್ರಾಣಿ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರವಾಗಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಮೇ ೨೮ ರಂದು ನಡೆಯಲಿರುವ ಬಕ್ರೀದ್ ಹಿನ್ನೆಲೆಯಲ್ಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ಸಮಾಜವಾದಿ ಪಕ್ಷದ ಭಿವಂಡಿ (ಪೂರ್ವ) ಶಾಸಕ ರೈಸ್ ಶೇಖ್ ಮಾಹಿತಿ ನೀಡಿದ್ದಾರೆ. ಮುಂಬಯಿನ ಅಲ್ಪಸಂಖ್ಯಾತ ಸಮುದಾಯದ ಸರ್ವಪಕ್ಷಗಳ ಶಾಸಕರು ಹಾಗೂ ರಾಜ್ಯ ಖಾಟಿಕ್ ಮಹಾಸಂಘದ ಪ್ರತಿನಿಧಿಗಳೊಂದಿಗೆ ಸಚಿವಾಲಯದಲ್ಲಿ ಆಡಳಿತ ಮತ್ತು ಪೊಲೀಸ್ ಆಡಳಿತದ ಜಂಟಿ ಸಭೆ ನಡೆಯಿತು. ಇದರ ನಂತರ ಶೇಖ್ ಮಾತನಾಡುತ್ತಿದ್ದರು.
ಬಕ್ರೀದ್ ನಿಮಿತ್ತ ದೇವನಾರ್ ಕಸಾಯಿಖಾನೆಯಲ್ಲಿ ಪ್ರಾಣಿ ವಧೆಗೆ ಇದ್ದ ೨೦೦ ರೂಪಾಯಿ ಶುಲ್ಕವನ್ನು ೨೦ ರೂಪಾಯಿಗೆ ಇಳಿಸಲಾಗಿದೆ. ಮುಂಬಯಿನಲ್ಲಿ ಪ್ರಾಣಿ ವಧೆಗಾಗಿ ಇದ್ದ ೭೦ ಸ್ಥಳಗಳನ್ನು ೧೦೯ ಕ್ಕೆ ಹೆಚ್ಚಿಸಲಾಗಿದೆ. ಕೆಲವು ವಸತಿ ಸಂಘಗಳಿಗೆ (ಹೌಸಿಂಗ್ ಸೊಸೈಟಿಗಳಿಗೆ) ಪ್ರಾಣಿ ವಧೆಗಾಗಿ ಈಗಾಗಲೇ ಅನುಮತಿ ನೀಡಲಾಗಿದೆ. ಅಂಗಡಿಯವರಿಗೂ ಸಹ ಅಂತಹದೇ ಅನುಮತಿಯನ್ನು ನೀಡಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!