
ಕೊಲಕಾತಾ (ಬಂಗಾಳ) – ಬಂಗಾಳದಲ್ಲಿನ ಅಧಿಕಾರ ಬದಲಾವಣೆಯಿಂದಾಗಿ ಕೋಲಕಾತಾಗೆ ಮರಳುವ ನನ್ನ ಆಸೆಗಳು ಮತ್ತೆ ಚಿಗುರಿವೆ. ನವೆಂಬರ್ ೨೦೦೭ ರಲ್ಲಿ ನನ್ನನ್ನು ಇದೇ ನಗರದಿಂದ ಹೊರಹಾಕಲಾಗಿತ್ತು. ಅಂದಿನಿಂದ ಈ ನಗರಕ್ಕೆ ಮರಳಲು ಅನುಮತಿ ಸಿಕ್ಕಿಲ್ಲ. ಪರಿಸ್ಥಿತಿ ಈಗ ಬದಲಾಗಬಹುದು ಎಂದು ನಾನು ಭಾವಿಸುತ್ತೇನೆ. ನನಗೆ ಯಾವಾಗಲೂ ಕೋಲಕಾತಾಗೆ ಮರಳಬೇಕೆಂಬ ಆಸೆ ಇತ್ತು; ಆದರೆ ನನ್ನ ಈ ಆಸೆ ಅಪೂರ್ಣವಾಗಿಯೇ ಉಳಿಯಿತು; ಏಕೆಂದರೆ ಎಡಪಂಥಿ ಸರಕಾರವಾಗಲಿ ಅಥವಾ ತೃಣಮೂಲ ಸರಕಾರವಾಗಲಿ ನನಗೆ ಇದಕ್ಕೆ ಅನುಮತಿ ನೀಡಲಿಲ್ಲ. ಈ ಹಿಂದೆ ನಾನು ಬರೆದಿದ್ದ ದೂರದರ್ಶನದ ಧಾರಾವಾಹಿಯೊಂದನ್ನು ಕೂಡ ತೃಣಮೂಲ ಸರಕಾರದ ಆದೇಶದ ನಂತರ ನಿಲ್ಲಿಸಬೇಕಾಗಿ ಬಂದಿತ್ತು. ಒಂದು ವೇಳೆ ನನಗೆ ಕೋಲಕಾತಾದಲ್ಲಿ ವಾಸಿಸಲು ಸಾಧ್ಯವಾದರೆ, ನಾನು ಖಂಡಿತವಾಗಿಯೂ ಅಲ್ಲಿಯೇ ಇರುತ್ತೇನೆ, ಎಂದು ಬಾಂಗ್ಲಾದೇಶದಿಂದ ಗಡಿಪಾರು ಮಾಡಲ್ಪಟ್ಟಿರುವ ಲೇಖಕಿ ತಸ್ಲಿಮಾ ನಸ್ರೀನ್ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಅವರು ದೆಹಲಿಯಲ್ಲಿ ನಿರಾಶ್ರಿತರಾಗಿ ಜೀವನ ನಡೆಸುತ್ತಿದ್ದಾರೆ.
ತಸ್ಲಿಮಾ ಅವರು…,
೧. ಆಗಸ್ಟ್ ೧೯೯೪ ರಲ್ಲಿ ಬಾಂಗ್ಲಾದೇಶದಿಂದ ಗಡಿಪಾರು ಮಾಡಿದ ನಂತರ ಕೋಲಕಾತಾ ನನ್ನ ಮನೆಯಾಗಿತ್ತು; ಏಕೆಂದರೆ ಅಲ್ಲಿ ನನಗೆ ಅದೇ ಬಂಗಾಳಿ ಸಂಸ್ಕೃತಿಯನ್ನು ಅನುಭವಿಸುವ ಅವಕಾಶ ಸಿಕ್ಕಿತ್ತು, ಅದಕ್ಕಾಗಿಯೇ ನಾನು ಯುರೋಪ್ ತೊರೆದು ಕೋಲಕಾತಾಗೆ ಬಂದಿದ್ದೆ.
೨. ನಾನು ಕೋಲಕಾತಾಗೆ ಹೋಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಯಸುತ್ತೇನೆ; ಏಕೆಂದರೆ ಅದನ್ನು ಭಾರತದ ಸಾಂಸ್ಕೃತಿಕ ರಾಜಧಾನಿ ಎಂದು ಪರಿಗಣಿಸಲಾಗಿದೆ. ನನಗೆ ಕೋಲಕಾತಾ ಅಂತರರಾಷ್ಟ್ರೀಯ ಪುಸ್ತಕ ಮೇಳದಲ್ಲೂ ಭಾಗವಹಿಸುವ ಇಚ್ಛೆಯಿದೆ. ಭಾರತದ ಅನೇಕ ಭಾಗಗಳಿಗೆ ಪ್ರಯಾಣಿಸಿದ್ದೇನೆ ಮತ್ತು ಇತ್ತೀಚೆಗಷ್ಟೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೇರಳಕ್ಕೂ ಹೋಗಿದ್ದೆ.
೩. ಒಂದು ವೇಳೆ ರಾಜ್ಯ ಸರಕಾರವು ನನಗೆ ಕೋಲಕಾತಾಗೆ ಬರಲು ಅನುಮತಿ ನೀಡಿದರೆ, ನಾನು ಅವರಿಗೆ ತುಂಬಾ ಕೃತಜ್ಞಳಾಗಿರುತ್ತೇನೆ. ಕಳೆದ ೨ ದಶಕಗಳಿಂದ ನಾನು ಕೋಲಕಾತಾದಲ್ಲಿ ನೆಲೆಸುವ ಕನಸು ಕಾಣುತ್ತಿದ್ದೇನೆ ಮತ್ತು ಈಗ ನಾನು ಅಲ್ಲಿಗೆ ಹೋಗಿ ವಾಸಿಸಲು ಸಂಪೂರ್ಣವಾಗಿ ಸಿದ್ಧಳಾಗಿದ್ದೇನೆ. ರಾಜ್ಯ ಸರಕಾರವು ನನಗೆ ಸಹಾಯ ಮಾಡಿದರೆ, ನಾನು ಅಲ್ಲಿಯೇ ಇರುತ್ತೇನೆ.
೪. ಅನೇಕ ಸಂಘಟನೆಗಳು ಕೋಲಕಾತಾಗೆ ಬರುವ ಕುರಿತು ನನ್ನನ್ನು ಸಂಪರ್ಕಿಸಿವೆ; ಆದರೆ ವಾಸ್ತವದಲ್ಲಿ ನಾನು ಈ ನಗರಕ್ಕೆ ಯಾವಾಗ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂಬ ಬಗ್ಗೆ ಇನ್ನೂ ಕಲ್ಪನೆಯಿಲ್ಲ.
ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿದ್ದ ವಿಷಯ !
ಭಾಜಪ ಸಂಸದ ಮತ್ತು ಬಂಗಾಳದ ಭಾಜಪ ರಾಜ್ಯಾಧ್ಯಕ್ಷ ಸಮಿಕ ಭಟ್ಟಾಚಾರ್ಯ ಅವರು ಕಳೆದ ವರ್ಷ ರಾಜ್ಯಸಭೆಯಲ್ಲಿ ತಸ್ಲಿಮಾ ನಸ್ರೀನ್ ಅವರ ವಿಷಯವನ್ನು ಪ್ರಸ್ತಾಪಿಸಿದ್ದರು ಮತ್ತು ಗೃಹ ಸಚಿವಾಲಯಕ್ಕೆ ಕೋಲಕಾತಾದಲ್ಲಿ ಅವರ ನಿವಾಸಕ್ಕೆ ವ್ಯವಸ್ಥೆ ಮಾಡುವಂತೆ ವಿನಂತಿಸಿದ್ದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”