ಸೂರತ (ಗುಜರಾತ) ನಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ

ಸೂರತ (ಗುಜರಾತ) – ನಗರದ ಓರ್ವ ಸಂತ್ರಸ್ತೆಯಾದ ಹಿಂದೂ ಮಹಿಳಾ ನ್ಯಾಯವಾದಿಯು ತನ್ನದೇ ಸಹೋದ್ಯೋಗಿ ನ್ಯಾಯವಾದಿಯ ಮೇಲೆ ಗುರುತನ್ನು ಮರೆಮಾಚಿ ಪ್ರೇಮಸಂಬಂಧ ಬೆಳೆಸುವುದು, ಮದುವೆಯ ಆಮಿಷ ತೋರಿಸುವುದು ಮತ್ತು ಶಾರೀರಿಕ ಶೋಷಣೆ ಮಾಡುವುದು ಇತ್ಯಾದಿ ಆರೋಪಗಳನ್ನು ಮಾಡಿದ್ದಾರೆ. ಸಂತ್ರಸ್ತೆಯು ಆರೋಪಿಯು ತನ್ನ ಹೆಸರನ್ನು ‘ರೋಹನ್’ ಎಂದು ಸುಳ್ಳು ಹೇಳಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
೧. ಸಂತ್ರಸ್ತೆಯ ಹೇಳುವಂತೆ, ಆರೋಪಿಯು ಹಿಂದೂ ಧರ್ಮದ ಕುರಿತು ತನಗಿರುವ ಗಾಢ ಶ್ರದ್ಧೆಯನ್ನು ತೋರಿಸಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದನು. ಇದರಿಂದಾಗಿ ಅವಳಿಗೆ ಅವನ ಮೇಲೆ ಪೂರ್ಣ ವಿಶ್ವಾಸ ಮೂಡಿತ್ತು.
೨. ಇದೇ ವಿಶ್ವಾಸದ ಬಲದ ಮೇಲೆ ಆರೋಪಿಯು ಮದುವೆಯ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಬಂಧ ಇಟ್ಟಿದ್ದಾಗಿ ಮಹಿಳಾ ನ್ಯಾಯವಾದಿಯು ಆರೋಪಿಸಿದ್ದಾರೆ.
೩. ಸಂತ್ರಸ್ತೆಯು ಮದುವೆಗಾಗಿ ಒತ್ತಾಯಿಸಿದಾಗ, ಆರೋಪಿಯು ಹಠಾತ್ತನೆ ನಿರಾಕರಿಸಿದನು ಮತ್ತು ಸತ್ಯವು ಹೊರಬಂದಿತು.
೪. ಸಂತ್ರಸ್ತೆಯು ಆರೋಪಿಯನ್ನು ವಿರೋಧಿಸಿ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ, ಅವನು ಅವಳಿಗೆ ಹೊಡೆದು ಬಡಿದು, ಜಾತಿ ನಿಂದನೆ ಮಾಡಿ ಅವಮಾನಿಸಿದನು.
೫. ಆರೋಪಿಗೆ ಈಗಾಗಲೇ ಮತ್ತೊಬ್ಬ ಮಹಿಳೆಯೊಂದಿಗೆ ಮದುವೆಯಾಗಿತ್ತು. ಈ ಮಾಹಿತಿ ದೊರೆತ ನಂತರ ಸಂತ್ರಸ್ತೆಗೆ ತನ್ನೊಂದಿಗೆ ವಂಚನೆ ಮತ್ತು ಶೋಷಣೆಯಾಗಿರುವುದು ಗಮನಕ್ಕೆ ಬಂದಿತು. ಆನಂತರ ಮಹಿಳೆಯು ಸೂರತ್ ನ ಚೌಕ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders