ಮುಸ್ಲಿಮರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇರ ಸಲಹೆ
"ನೀವು ಸಂಭಾಷಣೆಯ ಮೂಲಕ ಕೇಳಿದರೆ, ಸಂಭಾಷಣೆಯ ಮೂಲಕ... ಇಲ್ಲದಿದ್ದರೆ..." ಎಂದು ಎಚ್ಚರಿಸಿದರು!

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಸ್ತೆಗಳು ನಡೆಯುವುದಕ್ಕಾಗಿ ಇವೆ. ರಸ್ತೆಯನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ನಿಮ್ಮ ಮನೆಯಲ್ಲಿ ವಾಸಿಸಲು ಅಥವಾ ನಮಾಜ್ ಮಾಡಲು ಜಾಗವಿಲ್ಲದಿದ್ದರೆ, ಜನಸಂಖ್ಯೆಯನ್ನು ನಿಯಂತ್ರಿಸಿ. ಸಾಮರ್ಥ್ಯವಿಲ್ಲದಿದ್ದರೆ, ಜನಸಂಖ್ಯೆಯನ್ನು ಏಕೆ ಹೆಚ್ಚಿಸುತ್ತಿದ್ದೀರಿ? ಎಂಬ ಮಾತುಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಸಲ್ಮಾನರಿಗೆ ರಸ್ತೆಯಲ್ಲಿ ನಮಾಜ್ ಮಾಡುವ ಬಗ್ಗೆ ಸಲಹೆ ನೀಡಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೀಗೆ ಹೇಳಿದರು,
೧. ಜನರು ನನ್ನನ್ನು ಕೇಳುತ್ತಾರೆ, ‘ನಿಮ್ಮ ಉತ್ತರ ಪ್ರದೇಶದಲ್ಲಿ ನಿಜಕ್ಕೂ ರಸ್ತೆಯಲ್ಲಿ ನಮಾಜ್ ಮಾಡುವುದಿಲ್ಲವೇ?’ ಎಂದು. ನಾನು ಹೇಳುತ್ತೇನೆ, ‘ಖಂಡಿತಾ ಇಲ್ಲ.’
೨. ರಸ್ತೆಗಳು ನಡೆಯುವುದಕ್ಕಾಗಿಯೇ ಅಥವಾ ಯಾರಾದರೂ ಬಂದು ಗಲಾಟೆ ಮಾಡುವುದಕ್ಕಾಗಿಯೇ? ರಸ್ತೆ ತಡೆಯಲು ಏನು ಅಧಿಕಾರವಿದೆ? ಯಾರ ಪ್ರಾರ್ಥನಾ ಸ್ಥಳ ಎಲ್ಲಿದೆಯೋ ಅಲ್ಲಿಗೆ ಹೋಗಿ ಅವರು ಅದನ್ನು ಮಾಡಬೇಕು. ಅವರು (ಮುಸಲ್ಮಾನರು) ಕೇಳಿದರು, ‘ಇದು ಹೇಗೆ ಸಾಧ್ಯ?, ನಮ್ಮ ಸಂಖ್ಯೆ ಹೆಚ್ಚಿದೆ?’
೩. ಅದಕ್ಕೆ ನಾವು ಹೇಳಿದೆವು, ‘ನಮಾಜ್ ಮಾಡುವುದು ಅವಶ್ಯಕವಾಗಿದ್ದರೆ, ನೀವು ಶಿಫ್ಟ್ ಗಳಲ್ಲಿ (ಪಾಳಿಗಳಲ್ಲಿ) ಮಾಡಿ, ನಾವು ಅದನ್ನು ತಡೆಯುವುದಿಲ್ಲ; ಆದರೆ ರಸ್ತೆಯ ಮೇಲಲ್ಲ. ರಸ್ತೆಗಳು ನಡೆಯುವುದಕ್ಕಾಗಿ ಇವೆ. ನಾವು ರಸ್ತೆಗಳಿಗೆ ಅಡಚಣೆಯಾಗಲು ಬಿಡುವುದಿಲ್ಲ. ಸರಕಾರದ ನಿಯಮ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ.
೪. ರಸ್ತೆಗಳಲ್ಲಿ ಅರಾಜಕತೆಯನ್ನು ಮುಂದುವರೆಯಲು ಬಿಡುವುದಿಲ್ಲ ಎಂದು ನಾವು ಎಲ್ಲರಿಗೂ ಹೇಳಿದ್ದೇವೆ. ಪ್ರೀತಿಯಿಂದ ಕೇಳಿದರೆ ಸರಿ, ಇಲ್ಲದಿದ್ದರೆ ಬೇರೆ ಮಾರ್ಗವನ್ನು ಅನುಸರಿಸಲಾಗುವುದು. ನಮ್ಮ ಕೆಲಸ ಮಾತುಕತೆ ನಡೆಸುವುದು. ನೀವು ಮಾತುಕತೆಯಿಂದ ಕೇಳಿದರೆ ಮಾತುಕತೆಯಿಂದ… ಇಲ್ಲದಿದ್ದರೆ ಸಂಘರ್ಷವನ್ನೂ ನೋಡಿಕೊಳ್ಳಿ. ಬರೇಲಿಯಲ್ಲಿ ಜನರು ಪ್ರಯತ್ನಿಸಿ ನೋಡಿದರು, ಅವರಿಗೆ ಶಕ್ತಿ ಕಂಡಿದೆ. ಅದಕ್ಕಾಗಿಯೇ ಸರಕಾರವು ಇಡೀ ವ್ಯವಸ್ಥೆಯನ್ನು ನಿಯಮಗಳೊಂದಿಗೆ ಜೋಡಿಸಲು ಬಯಸುತ್ತದೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!