ಆಳಂದಿ (ಪುಣೆ)ಯಲ್ಲಿ ಶ್ಯಾಮ್ ಮಹಾರಾಜ್ ರಾಠೋಡ್ ಸೇರಿದಂತೆ 7 ಜನರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಮಹಿಳೆಯ ಆರೋಪ!
ಲವಾಂಡೆ ಪ್ರಕರಣದಿಂದಾಗಿ ಈ ಆರೋಪ ಮಾಡಲಾಗಿದೆ ಎಂದು ಶ್ಯಾಮ್ ಮಹಾರಾಜ್ ಹೇಳಿಕೆ!

ಪುಣೆ – “ನನ್ನ ಮೇಲೆ ಮಾಡಲಾದ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ನಾನು ಅದನ್ನು ಖಂಡಿಸುತ್ತೇನೆ. ಪ್ರಥಮ ಮಾಹಿತಿ ವರದಿಯಲ್ಲಿ (ಎಫ್.ಐ.ಆರ್.) ನನ್ನ ಹೆಸರಿಲ್ಲ, ಹಾಗೆಯೇ ಘಟನೆ ನಡೆದ ಬಗ್ಗೆ ಯಾವುದೇ ನಿರ್ದಿಷ್ಟ ಸಮಯ ಅಥವಾ ಕಾಲದ ಉಲ್ಲೇಖವಿಲ್ಲ. ಲವಾಂಡೆ ಪ್ರಕರಣದ ಹಿನ್ನೆಲೆಯಲ್ಲಿ ನನ್ನ ಮೇಲೆ ಈ ಆರೋಪಗಳನ್ನು ಮಾಡಲಾಗುತ್ತಿದೆ. ನಾನು ಮಾಡುತ್ತಿರುವ ಧರ್ಮಕಾರ್ಯ ಕೆಲವರಿಗೆ ಇಷ್ಟವಾಗದ ಕಾರಣ ನನ್ನ ವಿರುದ್ಧ ಈ ಪಿತೂರಿ ರೂಪಿಸಲಾಗುತ್ತಿದೆ,” ಎಂದು ಹ.ಭ.ಪ. ಶ್ಯಾಮ್ ಮಹಾರಾಜ್ ರಾಠೋಡ್ ಹೇಳಿದ್ದಾರೆ. ಪಿಂಪ್ರಿ-ಚಿಂಚವಡ್‌ನ ದಿಘಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನೀಡಿದ ಸಾಮೂಹಿಕ ಅತ್ಯಾಚಾರದ ದೂರಿನ ನಂತರ ಶ್ಯಾಮ್ ಮಹಾರಾಜ್ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಮಹಾರಾಜ್ ಅವರು ಮುಂದೆ ಮಾತನಾಡುತ್ತಾ, “ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಲಿ ಮತ್ತು ಎಲ್ಲಾ ಜನರ ಸಿ.ಡಿ.ಆರ್. (ಕಾಲ್ ಡಿಟೇಲ್ ರೆಕಾರ್ಡ್ಸ್) ಪರಿಶೀಲಿಸಲಿ. ನಾನೊಬ್ಬ ಸನ್ಯಾಸಿಯಾಗಿದ್ದು, ಧರ್ಮದ ಕೆಲಸ ಮಾಡುತ್ತಿದ್ದೇನೆ. ಕೆಲವು ಸುಪಾರಿ ಪತ್ರಕರ್ತರು ಮತ್ತು ಧರ್ಮ ವಿರೋಧಿಗಳು ಸುಳ್ಳು ಸುದ್ದಿಗಳ ಆಧಾರದ ಮೇಲೆ ಆಸುರಿ ಆನಂದ ಪಡೆಯುತ್ತಿದ್ದಾರೆ. ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆಯಿದೆ,” ಎಂದು ಮಹಾರಾಜ್ ಹೇಳಿದರು. ಪಿಂಪ್ರಿ-ಚಿಂಚವಡ್‌ನ ದಿಘಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ಯಾಮ್ ಮಹಾರಾಜ್ ರಾಠೋಡ್ ಸೇರಿದಂತೆ 7 ಜನರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆಂದು ಮಹಿಳೆಯೊಬ್ಬರು ಆರೋಪಿಸಿದ್ದು, ಶ್ಯಾಮ್ ಮಹಾರಾಜ್ ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !