ತೃಣಮೂಲ ಕಾಂಗ್ರೆಸ್‌ನ ಗೂಂಡಾ ಸೈಫುದ್ದೀನ್ ಖಾನ್ ಬೆದರಿಕೆ ಹಾಕಿದ್ದನು

ಕೋಲಕಾತಾ (ಬಂಗಾಳ) – ಬಂಗಾಳದ ಪೂರ್ವ ಬರ್ದವಾನ್ ಜಿಲ್ಲೆಯ ಮೆಮಾರಿ ನಗರದಲ್ಲಿ ತೃಣಮೂಲ ಕಾಂಗ್ರೆಸ್‌ನ ಗೂಂಡಾ ಸೈಫುದ್ದೀನ್ ಖಾನ್ ಎಂಬಾತ ಹಿಂದೂಗಳಿಗೆ ಬಲವಂತವಾಗಿ ಗೋಮಾಂಸ ತಿನ್ನಿಸುವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಪತ್ರಕರ್ತ ಸುಭಿ ವಿಶ್ವಕರ್ಮ ಅವರು ‘ಎಕ್ಸ್’ ನಲ್ಲಿ ವಿಡಿಯೋವೊಂದನ್ನು ಪ್ರಸಾರ ಮಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಸ್ಥಳೀಯ ಹಿಂದೂ ವ್ಯಕ್ತಿಯೊಬ್ಬರು, ಮಮತಾ ಬ್ಯಾನರ್ಜಿ ಅವರ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ಗೋಮಾಂಸ ತಿನ್ನಿಸಲಾಗುವುದು ಎಂದು ಸೈಫುದ್ದೀನ್ ಬೆದರಿಕೆ ಹಾಕಿದ್ದನು ಎಂದು ಹೇಳಿದ್ದಾರೆ. (ಭಾರತದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತರಾಗಿದ್ದಾರೆ ಎಂದು ಬೊಬ್ಬೆ ಹೊಡೆಯುವ ಜಾತ್ಯತೀತವಾದಿಗಳು, ಕಮ್ಯುನಿಸ್ಟರು, ಬುದ್ಧಿಜೀವಿಗಳಿಗೆ ಮುಸ್ಲಿಮರ ಈ ಗೂಂಡಾಗಿರಿ ಕಾಣಿಸುತ್ತಿಲ್ಲ ಎಂಬುದನ್ನು ಗಮನಿಸಿ ! – ಸಂಪಾದಕರು)
1. ಸೈಫುದ್ದೀನ್‌ನ ಗೂಂಡಾಗಿರಿಯಿಂದ ತಾವು ಬಹಳ ಕಾಲದಿಂದ ತೊಂದರೆಗೀಡಾಗಿದ್ದೆವು ಎಂದು ಸ್ಥಳೀಯ ಹಿಂದೂಗಳು ಆರೋಪಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸರಕಾರವಿದ್ದಾಗ ಆತ ಅವರಿಗೆ ಕಿರುಕುಳ ನೀಡುತ್ತಿದ್ದನು.
2. ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಸೋಲಿನ ನಂತರ ಸೈಫುದ್ದೀನ್ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
3. ಸೈಫುದ್ದೀನ್ ನನ್ನು ಯಾವುದೇ ಕಾರಣಕ್ಕೂ ಮೆಮಾರಿ ಒಳಗೆ ಬರಲು ಬಿಡಬಾರದು ಎಂದು ಸ್ಥಳೀಯರು ಭಾಜಪದ ವಿಜೇತ ಅಭ್ಯರ್ಥಿ ಮಾನವ್ ಗುಹಾ ಅವರ ಬಳಿ ಒತ್ತಾಯಿಸಿದ್ದಾರೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!