
ವಾಷಿಂಗ್ಟನ್ (ಅಮೆರಿಕ) – ಕ್ಯಾಲಿಫೋರ್ನಿಯಾದ ಅರ್ಕೇಡಿಯಾ ನಗರದ ಮೇಯರ್ ಆಗಿದ್ದ ಎಲಿಗ್ ವಾಂಗ್ (58 ವರ್ಷ) ಅವರು ಚೀನಾದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್.ಬಿ.ಐ.) ಫೆಡರಲ್ ನ್ಯಾಯಾಲಯದಲ್ಲಿ ಆರೋಪಿಸಿದೆ. ಈ ಪ್ರಕರಣದಲ್ಲಿ ಅವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
ಎಫ್.ಬಿ.ಐ. ಪ್ರಕಾರ, 2020 ರ ಅಂತ್ಯದಿಂದ 2022 ರವರೆಗೆ ಎಲಿಗ್ ವಾಂಗ್ ಅವರು ಚೀನಾದ ಸರಕಾರಿ ಅಧಿಕಾರಿಗಳ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ಅಮೆರಿಕದಲ್ಲಿ ಚೀನಾದ ಹಿತಾಸಕ್ತಿಗಳನ್ನು ಉತ್ತೇಜಿಸಲು ಅವರು ಹಲವಾರು ಚಟುವಟಿಕೆಗಳನ್ನು ನಡೆಸಿದ್ದರು. ಯುಎಸ್ ನ್ಯೂಸ್ ಸೆಂಟರ್ ಎಂಬ ವೆಬ್‌ಸೈಟ್ ಮೂಲಕ ಅವರು ಅಮೆರಿಕದಲ್ಲಿ ಚೀನಾದ ಪರವಾಗಿ ಪ್ರಚಾರ ಮಾಡುತ್ತಿದ್ದರು. ಈ ವೆಬ್‌ಸೈಟ್ ತನ್ನನ್ನು ಸ್ಥಳೀಯ ಚೀನೀ-ಅಮೆರಿಕನ್ ಸಮುದಾಯದ ಸುದ್ದಿಯ ಮೂಲ ಎಂದು ಹೇಳಿಕೊಳ್ಳುತ್ತಿತ್ತು. ಆದರೆ ವಾಸ್ತವದಲ್ಲಿ, ವಾಂಗ್ ಮತ್ತು ಅವರ ಸಹಚರರು ಚೀನೀ ಅಧಿಕಾರಿಗಳಿಂದ ಸೂಚನೆಗಳನ್ನು ಪಡೆಯುತ್ತಿದ್ದರು ಮತ್ತು ಅವರ ಇಚ್ಛೆಯಂತೆ ವೆಬ್‌ಸೈಟ್‌ನಲ್ಲಿ ವಿಷಯಗಳನ್ನು ಪ್ರಕಟಿಸುತ್ತಿದ್ದರು.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!