
ಕೊಲೊಂಬೊ (ಶ್ರೀಲಂಕಾ) – ದೇಶದ ಹಿರಿಯ ಮತ್ತು ಅತ್ಯಂತ ಪ್ರಭಾವಿ ಬೌದ್ಧ ಭಿಕ್ಕುವನ್ನು ಬಂಧಿಸಲಾಗಿದೆ. ೭೧ ವರ್ಷದ ಬೌದ್ಧ ಭಿಕ್ಕು ಪಲಲೆಗಾಮಾ ಹೇಮಾರಥಾನಾ ಅವರ ವಿರುದ್ಧ ೧೧ ವರ್ಷದ ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪ ಕೇಳಿಬಂದಿದೆ. ಪೊಲೀಸರು ಆರೋಪಿ ಭಿಕ್ಕುವನ್ನು ಕೊಲೊಂಬೊದ ಖಾಸಗಿ ಆಸ್ಪತ್ರೆಯಿಂದ ಬಂಧಿಸಿದ್ದಾರೆ. ಬಾಲಕಿಯ ಲೈಂಗಿಕ ಶೋಷಣೆಯ ಘಟನೆಯು ಅನುರಾಧಾಪುರದ ಬೌದ್ಧ ಮಂದಿರದಲ್ಲಿ ನಡೆದಿದ್ದು, ಹೇಮಾರಥಾನಾ ಅಲ್ಲಿನ ಮುಖ್ಯ ಅರ್ಚಕರಾಗಿದ್ದಾರೆ.
೧. ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯ ತಾಯಿಯನ್ನೂ ಬಂಧಿಸಲಾಗಿದೆ. ಪ್ರಕರಣವನ್ನು ಮುಚ್ಚಿಹಾಕಲು ಆಕೆ ಆರೋಪಿ ಭಿಕ್ಕುವಿಗೆ ಸಹಕರಿಸಿದ್ದಾಳೆ ಎಂಬ ಆರೋಪವಿದೆ. ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ನ್ಯಾಯಾಲಯವು ಈಗಾಗಲೇ ಆರೋಪಿ ಭಿಕ್ಕುವಿನ ವಿದೇಶ ಪ್ರವಾಸದ ಮೇಲೆ ನಿಷೇಧ ಹೇರಿತ್ತು. ಮುಂದಿನ ಕ್ರಮವನ್ನು ನ್ಯಾಯಾಲಯದ ನಿರ್ದೇಶನದಂತೆ ತೆಗೆದುಕೊಳ್ಳಲಾಗುವುದು ಮತ್ತು ಆರೋಪಿಯನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
೨. ಪಲಲೆಗಾಮಾ ಹೇಮಾರಥಾನಾ ಶ್ರೀಲಂಕಾದ ಅತ್ಯಂತ ಪ್ರಭಾವಿ ಬೌದ್ಧ ಭಿಕ್ಕುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಭಾರತದ ಗಯಾದಲ್ಲಿರುವ ಬೋಧಿ ವೃಕ್ಷದ ಕೊಂಬೆಯಿಂದ ಶ್ರೀಲಂಕಾದಲ್ಲಿ ಒಂದು ಪವಿತ್ರ ವೃಕ್ಷವು ಬೆಳೆದಿದೆ ಎಂಬುದು ಅಲ್ಲಿನ ಜನರ ನಂಬಿಕೆಯಾಗಿದೆ. ಅವರು ಈ ಪವಿತ್ರ ವೃಕ್ಷದ ಮುಖ್ಯ ಸಂರಕ್ಷಕರಾಗಿದ್ದಾರೆ. ಇದೇ ಬೋಧಿ ವೃಕ್ಷದ ಅಡಿಯಲ್ಲಿ ಭಗವಾನ್ ಬುದ್ಧನಿಗೆ ಜ್ಞಾನೋದಯವಾಗಿತ್ತು ಎಂಬುದು ಬೌದ್ಧ ಅನುಯಾಯಿಗಳ ಶ್ರದ್ಧೆಯಾಗಿದೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !