ಜಾಮೀನಿನ ಮೊತ್ತ ಪಾವತಿಸಿ ಭಿಕ್ಷುಕರು ೧ ಗಂಟೆಯಲ್ಲಿ ಬಿಡುಗಡೆ ಮತ್ತು ಭಿಕ್ಷಾಟನೆ ದಂಧೆ ಮುಂದುವರಿಕೆ!
ಕಠಿಣ ಶಿಕ್ಷೆ ಮತ್ತು ತೃತೀಯಲಿಂಗಿ ಭಿಕ್ಷುಕರ ಬಗ್ಗೆ ಕಾಯ್ದೆಯಲ್ಲಿ ಯಾವುದೇ ಪ್ರಾವಧಾನಗಳಿಲ್ಲ!

ಮುಂಬಯಿ – ದೇಶದ ಹಲವು ರಾಜ್ಯಗಳಲ್ಲಿ ಇಲ್ಲದ ‘ಭಿಕ್ಷಾಟನೆ ಪ್ರತಿಬಂಧಕ ಕಾಯ್ದೆ’ ಮಹಾರಾಷ್ಟ್ರದಲ್ಲಿದೆ; ಆದರೆ ರಾಜ್ಯದಲ್ಲಿ ಈ ಪ್ರಮುಖ ಕಾಯ್ದೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕಳೆದ ೭೫ ವರ್ಷಗಳಲ್ಲಿ ಈ ಕಾಯ್ದೆಯಲ್ಲಿ ಕಾಲಕ್ಕೆ ತಕ್ಕಂತೆ ಯಾವುದೇ ಸಾಮಾನ್ಯ ಸುಧಾರಣೆಗಳನ್ನೂ ಮಾಡಲಾಗಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಭಿಕ್ಷುಕರನ್ನು ಹಿಡಿದರೂ, ಜಾಮೀನು ಮೊತ್ತ ಮತ್ತು ವಕೀಲರ ಶುಲ್ಕವಾಗಿ ಸಾವಿರಾರು ರೂಪಾಯಿಗಳನ್ನು ಪಾವತಿಸಿ ಭಿಕ್ಷುಕರು ಕೇವಲ ೧ ಗಂಟೆಯಲ್ಲಿ ಬಿಡುಗಡೆಯಾಗಿ ಪುನಃ ಭಿಕ್ಷಾಟನೆಯ ವ್ಯವಹಾರವನ್ನು ಆರಂಭಿಸುತ್ತಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಈ ಕಾಯ್ದೆಯಲ್ಲಿ ಸರಕಾರವು ಕಾಲಕ್ಕೆ ತಕ್ಕಂತೆ ಕೆಲವು ಪ್ರಮುಖ ಸುಧಾರಣೆಗಳನ್ನು ಮಾಡುವುದು ಅತ್ಯಗತ್ಯವಾಗಿದೆ.

ಮುಂಬಯಿ ಸ್ವತಂತ್ರ ರಾಜ್ಯವಾಗಿದ್ದಾಗ ರೂಪಿಸಲಾದ ‘ಮುಂಬಯಿ ಭಿಕ್ಷಾಟನೆ ಪ್ರತಿಬಂಧಕ ಅಧಿನಿಯಮ, ೧೯೫೯ ಕಾಯ್ದೆ’ಯನ್ನು ಮಹಾರಾಷ್ಟ್ರ ರಾಜ್ಯದ ನಿರ್ಮಾಣದ ನಂತರ ಇತರ ಕಾಯ್ದೆಗಳಂತೆಯೇ ಯಥಾವತ್ತಾಗಿ ಸ್ವೀಕರಿಸಲಾಯಿತು. ೨೦೨೫ ರಲ್ಲಿ ಭಿಕ್ಷುಕರ ಸ್ವೀಕಾರ ಕೇಂದ್ರದಲ್ಲಿರುವ ಭಿಕ್ಷುಕರಿಗಾಗಿ ದಿನಕ್ಕೆ ೫ ರೂಪಾಯಿ ಇದ್ದ ಭತ್ಯೆಯನ್ನು ೪೦ ರೂಪಾಯಿಗಳಿಗೆ ಹೆಚ್ಚಿಸಲಾಯಿತು; ಆದರೆ ಅದನ್ನು ಹೊರತುಪಡಿಸಿ ಈ ಕಾಯ್ದೆಯಲ್ಲಿ ಇಂದಿನವರೆಗೂ ಯಾವುದೇ ಸಾಮಾನ್ಯ ಸುಧಾರಣೆಗಳನ್ನು ಮಾಡಲಾಗಿಲ್ಲ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!