ಬಾಂಗ್ಲಾದೇಶ: ಆಡಳಿತ ಪಕ್ಷದ ನಾಯಕ ಅಲ್ತಾಬ್ ಹುಸೇನ್ ಮುಲ್ಲಾ ಅವರ ಪ್ರಚೋದನಾಕಾರಿ ಹೇಳಿಕೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಆಡಳಿತ ಬದಲಾವಣೆಯ ನಂತರ ನಿರ್ಮಾಣವಾಗಿರುವ ಅಸ್ಥಿರತೆಯ ವಾತಾವರಣದಲ್ಲಿ ಈಗ ಅಲ್ಲಿನ ನಾಯಕರಿಂದ ಭಾರತದ ವಿರುದ್ಧ ಬಹಿರಂಗವಾಗಿ ವಿಷ ಕಾರಲಾಗುತ್ತಿದೆ. ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ಯ (‘ಬಿ.ಎನ್.ಪಿ.’ಯ) ನಾಯಕ ಅಲ್ತಾಬ್ ಹುಸೇನ್ ಮುಲ್ಲಾ ಅವರ ಅತ್ಯಂತ ಪ್ರಚೋದನಾಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಭಾರತೀಯ ಮುಸಲ್ಮಾನರಿಗೆ ದೇಶವನ್ನು ವಿಭಜಿಸುವಂತೆ ಅಲ್ತಾಬ್ ಪ್ರಚೋದನೆ ನೀಡಿದ್ದಾರೆ. ಸಭೆಯೊಂದನ್ನು ಉದ್ದೇಶಿಸಿ ಮಾತನಾಡುವಾಗ, ‘ಒಂದು ವೇಳೆ ಭಾರತದ ೨೦ ರಿಂದ ೨೫ ಕೋಟಿ ಮುಸಲ್ಮಾನರು ಒಂದಾದರೆ, ಅವರು ಭಾರತವನ್ನು ತುಂಡು-ತುಂಡು ಮಾಡಬಲ್ಲರು ಮತ್ತು ಅಲ್ಲಿನ ಮುಸ್ಲಿಮರು ಶೀಘ್ರದಲ್ಲೇ ಈ ಮಾರ್ಗವನ್ನು ಅನುಸರಿಸಲಿದ್ದಾರೆ’ ಎಂದು ಅಲ್ತಾಬ್ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ತೀವ್ರ ಆಕ್ರೋಶ
ಈ ವಿಡಿಯೋ ಹೊರಬಂದ ನಂತರ ಭಾರತದಲ್ಲಿ ಆಕ್ರೋಶದ ಅಲೆ ಎದ್ದಿದೆ. ಅನೇಕ ರಕ್ಷಣಾ ತಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಇದನ್ನು ಭಾರತದ ಸಾರ್ವಭೌಮತ್ವಕ್ಕೆ ನೀಡಿದ ನೇರ ಬೆದರಿಕೆ ಎಂದು ಕರೆದಿದ್ದಾರೆ. ಕೇಂದ್ರ ಸರಕಾರ ಮತ್ತು ವಿದೇಶಾಂಗ ಸಚಿವಾಲಯವು ಬಾಂಗ್ಲಾದೇಶ ಸರಕಾರಕ್ಕೆ ಈ ಪ್ರಕರಣದ ಬಗ್ಗೆ ಕಠಿಣ ಶಬ್ದಗಳಲ್ಲಿ ಪ್ರತಿಭಟನೆಯನ್ನು ದಾಖಲಿಸಬೇಕೆಂದು ಅನೇಕರು ಒತ್ತಾಯಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’