ಪಾಕಿಸ್ತಾನಿ ಗೂಂಡಾಗಳ ಸಂಪರ್ಕದಲ್ಲಿದ್ದ ಉಗ್ರರು
ಸಂವೇದನಾಶೀಲ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ದಾನಿಯಾನ್ ಅಶ್ರಫ್ ಮತ್ತು ಕೃಷ್ಣ ಮಿಶ್ರಾ ಎಂಬ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಬಂಧಿತರಿಂದ ಒಂದು ದೇಶಿ ಪಿಸ್ತೂಲ್, ಒಂದು ನಾಡ ಪಿಸ್ತೂಲ್, ೬ ಜೀವಂತ ಗುಂಡುಗಳು ಮತ್ತು ೨ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಭಯೋತ್ಪಾದಕರು ದೇಶದ ಸಂವೇದನಾಶೀಲ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟ ಮತ್ತು ಪೊಲೀಸ್ ತಂಡಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಬಂಧಿತರು ಪಾಕಿಸ್ತಾನಿ ಗೂಂಡಾಗಳಾದ ಶಹಜಾದ್ ಭಟ್ಟಿ, ಆಬಿದ್ ಜಟ್ ಮತ್ತು ಹಮ್ಮಾದ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ವಿಚಾರಣೆಯ ವೇಳೆ ಈ ಭಯೋತ್ಪಾದಕರು, ‘ನಾನು ಹೇಳಿದಂತೆ ಕೆಲಸ ಮಾಡಿದರೆ ನಿಮ್ಮನ್ನು ಭಾರತದಲ್ಲಿ ಹೀರೋ ಮಾಡುತ್ತೇನೆ ಎಂದು ಶಹಜಾದ್ ಭಟ್ಟಿ ಹೇಳಿದ್ದ, ಎಂದು ತಿಳಿಸಿದ್ದಾರೆ.
ಗೂಂಡಾಗಳಾದ ಶಹಜಾದ್ ಭಟ್ಟಿ, ಆಬಿದ್ ಜಟ್ ಮತ್ತು ಹಮ್ಮಾದ್ ಅವರ ನಿರ್ದೇಶನದಂತೆ ಈ ಯುವಕರಿಗೆ ಶ್ರೀಮಂತರಾಗುವ ಆಮಿಷ ತೋರಿಸಿ ಕಟ್ಟರವಾದಿಗಳನ್ನಾಗಿ ಮಾಡಲಾಗುತ್ತಿತ್ತು. ಸಂವೇದನಾಶೀಲ ಸಂಸ್ಥೆಗಳು, ಪೊಲೀಸ್ ಠಾಣೆಗಳು, ಚೌಕಿಗಳು ಮತ್ತು ಪೊಲೀಸರ ಮೇಲೆ ದಾಳಿ ಮಾಡುವ ಮೂಲಕ ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವುದೇ ಇವರ ಉದ್ದೇಶವಾಗಿತ್ತು.
ಸಾಮಾಜಿಕ ಮಾಧ್ಯಮಗಳ ಮೂಲಕ ಭಯೋತ್ಪಾದಕರನ್ನು ಸೃಷ್ಟಿಸುವ ಸಂಚು
ಭಯೋತ್ಪಾದನಾ ನಿರೋಧಕ ದಳದ ವಕ್ತಾರರು ಈ ಕುರಿತು ಮಾತನಾಡಿ, ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳನ್ನು, ವಿಶೇಷವಾಗಿ ಇನ್ ಸ್ಟಾಗ್ರಾಮ್ ಬಳಸಿ ಭಾರತೀಯ ಯುವಕರನ್ನು ‘ಫುಟ್ ಸೋಲ್ಜರ್’ (ಯೋಜನೆಯನ್ನು ಪ್ರತ್ಯಕ್ಷವಾಗಿ ಇಳಿದು ಜಾರಿಗೊಳಿಸುವ ವ್ಯಕ್ತಿಗಳು; ಯಾವುದೇ ಸಂಘಟನೆ ಅಥವಾ ಕಾರ್ಯಾಚರಣೆಯ ಕೆಳ ಮಟ್ಟದಲ್ಲಿ ಕೆಲಸ ಮಾಡುವ ಸಕ್ರಿಯ ಕಾರ್ಯಕರ್ತರು) ಮತ್ತು ‘ಸ್ಲೀಪರ್ ಸೆಲ್’ (ರಹಸ್ಯವಾಗಿ ಭಯೋತ್ಪಾದಕರಿಗೆ ನೆರವಾಗುವ ಸ್ಥಳೀಯ ಮತಾಂಧರ ಗುಂಪುಗಳು) ಎಂಬಂತೆ ನೇಮಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು ಎಂದಿದ್ದಾರೆ.
ವಿಚಾರಣೆಯಲ್ಲಿ ಆರೋಪಿಗಳಾದ ದಾನಿಯಾಲ ಮತ್ತು ಕೃಷ್ಣ ಅವರು ಪಾಕಿಸ್ತಾನಿ ‘ಹ್ಯಾಂಡ್ಲರ್ಸ್’ (ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ನಿಯಂತ್ರಣ ಮತ್ತು ಕಾರ್ಯಾಚರಣೆ ಮಾಡುವ ವ್ಯಕ್ತಿಗಳ) ಸಂಪರ್ಕದಲ್ಲಿದ್ದರು. ಅವರ ಮೊಬೈಲ್ ಫೋನ್ ಗಳಲ್ಲಿ ಶಹಜಾದ್ ಭಟ್ಟಿ, ಆಬಿದ್ ಜಟ್ ಮತ್ತು ಹಮ್ಮಾದ್ ಅವರ ಸಂಪರ್ಕ ಸಂಖ್ಯೆಗಳಿದ್ದವು. ವಿಡಿಯೋ ಕಾಲ್, ವಾಯ್ಸ್ ನೋಟ್ಸ್, ವಾಟ್ಸ ಆ್ಯಪ್ ಚಾಟ್ ಮತ್ತು ದೇಶವಿರೋಧಿ ಸಂಭಾಷಣೆಗಳ ಪುರಾವೆಗಳು ದೊರೆತಿವೆ.
ದಾನಿಯಾಲ್ ನಿಂದ ಬಂದೂಕಿಗೆ ಬೇಡಿಕೆ, ಕೃಷ್ಣನಿಗೆ ಕೊಲೆ ಮಾಡುವ ಕೆಲಸ
ದಾನಿಯಾಲ್ ಅಶ್ರಫ್ ಒಂದು ರಾಜ್ಯದ ಪೊಲೀಸ್ ಠಾಣೆಯ ವಿಡಿಯೋ ಮಾಡಿ ಹ್ಯಾಂಡ್ಲರ್‌ಗಳಿಗೆ ಕಳುಹಿಸಿದ್ದನು. ಆತ ದಾಳಿಗಾಗಿ ಹಣ ಮತ್ತು ಶಸ್ತ್ರಾಸ್ತ್ರಗಳ (ಬಂದೂಕು) ಬೇಡಿಕೆಯನ್ನೂ ಮಾಡಿದ್ದನು. ಹಮ್ಮಾದ್ ಎಂಬಾತ ಆಬಿದ್ ಜಟ್ ನ ‘ಪಾಕಿಸ್ತಾನಿ ಡಾನ್’ ಎಂದು ಬರೆದಿರುವ ಭಾವಚಿತ್ರವನ್ನು ಕಳುಹಿಸಿದ್ದು, ಅದರ ೫೦ ಪ್ರತಿಗಳನ್ನು ಮುದ್ರಿಸಿ ಪ್ರಮುಖ ಸ್ಥಳಗಳಲ್ಲಿ ಅಂಟಿಸಲು ತಿಳಿಸಿದ್ದನು. ಕೃಷ್ಣ ಮಿಶ್ರಾ ಅವನ ಮೊಬೈಲ್ ನಲ್ಲಿ ಶಹಜಾದ್ ಭಟ್ಟಿ ಮತ್ತು ಆಬಿದ್ ಜಟ್ ನ ವಿಡಿಯೋಗಳು ಸಿಕ್ಕಿದ್ದು, ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದು ವಿಡಿಯೋ ಕಳುಹಿಸುವ ಕೆಲಸ ನೀಡಲಾಗಿತ್ತು.
೨ ತಿಂಗಳಲ್ಲಿ ೧೨ ಭಯೋತ್ಪಾದಕರ ಬಂಧನ
ಕಳೆದ ಎರಡು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ೧೨ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಏಪ್ರಿಲ್ ೪ ರಂದು ಲಕ್ಷ್ಮಣಪುರಿಯಲ್ಲಿ ೪ ಜನರನ್ನು ಬಂಧಿಸಲಾಗಿತ್ತು. ನೀವು ಭಯೋತ್ಪಾದನೆ ಹರಡಿ, ನೀವು ಎಷ್ಟು ಭಯ ಹರಡುತ್ತೀರೋ ಅಷ್ಟು ಹಣ ನಿಮಗೆ ಸಿಗುತ್ತದೆ, ಎಂದು ಪಾಕಿಸ್ತಾನದಿಂದ ಹೇಳಲಾಗಿತ್ತು. ದೊಡ್ಡ ಸ್ಫೋಟದ ಸಿದ್ಧತೆಯ ಭಾಗವಾಗಿ ಈ ನಾಲ್ವರು ಭಯೋತ್ಪಾದಕರು ಪಿಕಪ್ ವಾಹನ ಮತ್ತು ಮೋಟಾರ್ ಸೈಕಲ್ ಗೆ ಬೆಂಕಿ ಹಚ್ಚಿ ಅಭ್ಯಾಸ ನಡೆಸಿದ್ದರು. ಇದರ ವಿಡಿಯೋ ಪಾಕಿಸ್ತಾನಿ ಹ್ಯಾಂಡ್ಲರ್ ಅಬೂ ಬಕರ್ ಎಂಬಾತನಿಗೆ ಕಳುಹಿಸಿದ್ದರು. ಅದಕ್ಕೆ ಬದಲಾಗಿ ಅವರಿಗೆ ಬೆಂಕಿ ಹಚ್ಚುವ ಪ್ರತಿಯೊಂದು ಕೃತ್ಯಕ್ಕೂ ೧೨ ಸಾವಿರ ರೂಪಾಯಿಗಳು ಸಿಗುತ್ತಿದ್ದವು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein