
ಕಾನ್ಪುರ (ಉತ್ತರ ಪ್ರದೇಶ) – ‘ಜಾನಿ ಜಾನಿ ಯೆಸ್ ಪಾಪಾ’ ಎಂಬ ಇಂಗ್ಲಿಷ್ ಕವಿತೆ ಎಲ್ಲರಿಗೂ ಪರಿಚಿತವಾಗಿರುತ್ತದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಸಣ್ಣ ಮಕ್ಕಳು ಈ ಕವಿತೆಯನ್ನು ಇಷ್ಟಪಟ್ಟು ಹೇಳುತ್ತಾರೆ; ಆದರೆ ಈ ಕವಿತೆಯು ಮಕ್ಕಳಿಗೆ ಸುಳ್ಳು ಹೇಳುವುದನ್ನು ಕಲಿಸುತ್ತದೆ ಎಂದು ಉತ್ತರ ಪ್ರದೇಶದ ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ ಹೇಳಿದ್ದಾರೆ. ಕಾನ್ಪುರ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಉಪಾಧ್ಯಾಯ ಈ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಾಯ ಅವರು ಯಾವ ಕವಿತೆಗಳನ್ನು ಕೇಳಿ ಹಿಂದಿನ ಪೀಳಿಗೆಗಳು ಬೆಳೆದವೋ, ಅಂತಹ ಉತ್ತಮ ಜೀವನ ಮೌಲ್ಯಗಳನ್ನು ಹೊಂದಿರುವ ಕೆಲವು ಹಿಂದಿ ಕವಿತೆಗಳ ಉದಾಹರಣೆಗಳನ್ನೂ ನೀಡಿದರು. ‘ಶಿಕ್ಷಕರು ಪಠ್ಯಕ್ರಮದ ಜೊತೆಗೆ ಸಂಸ್ಕಾರ ನೀಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು’ ಎಂದು ಅವರು ಕರೆ ನೀಡಿದರು.
🚸 “Johny Johny Yes Papa” Teaches Children to Lie – UP Education Minister Sparks Debate@YogendraUpadhy stated that rhymes like “Johny Johny Yes Papa” teach children to lie through lines such as “Eating sugar? No Papa.”
He said education should impart values, not just language… pic.twitter.com/ZjyL8LtO4K
— Sanatan Prabhat (@SanatanPrabhat) May 7, 2026
ಸಚಿವ ಯೋಗೇಂದ್ರ ಉಪಾಧ್ಯಾಯ ಅವರು,
೧. ಯಾವಾಗ ಶಿಕ್ಷಕರು ಗುರುವಿನ ಪಾತ್ರವನ್ನು ವಹಿಸುತ್ತಾರೋ, ಆಗ ಅವರು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ನೀಡಬಲ್ಲರು. ‘ಜಾನಿ ಜಾನಿ ಯೆಸ್ ಪಾಪಾ’ ಈ ಕವಿತೆಯಲ್ಲಿ ‘ಈಟಿಂಗ್ ಶುಗರ್ ನೋ ಪಾಪಾ’ ಎಂಬ ಸಾಲುಗಳು ಮಕ್ಕಳಿಗೆ ಬಾಲ್ಯದಿಂದಲೇ ಸುಳ್ಳು ಹೇಳುವುದನ್ನು ಕಲಿಸುತ್ತವೆ.
೨. ಪಾಶ್ಚಾತ್ಯ ಸಂಸ್ಕೃತಿ ಇರುವ ಇಂಗ್ಲಿಷ್ ಕವಿತೆಗಳು ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿರುವ ಸಂಸ್ಕಾರಗಳನ್ನು ನೀಡಲು ಸಾಧ್ಯವಿಲ್ಲ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!