ಮತಾಂತರ, ಬುರ್ಖಾ ಮತ್ತು ನಮಾಜ್‌ಗೆ ಒತ್ತಾಯ!

ಜಾಲನಾ – ಜಿಲ್ಲೆಯ ಭೋಕರ್ದನ್ ತಾಲ್ಲೂಕಿನ ವಾಲಸಾವಂಗಿ ಗ್ರಾಮದಲ್ಲಿ ಶೇಖ್ ಇಮ್ರಾನ್ ಶೇಖ್ ಹಬೀಬ್ ಎಂಬಾತನು ಹಿಂದೂ ಯುವತಿಯೊಬ್ಬಳ ಅಶ್ಲೀಲ ಫೋಟೊಗಳನ್ನು ತೆಗೆದು, ಅವಳನ್ನು ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಈ ಪ್ರಕರಣದಲ್ಲಿ ನಾಲ್ವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಮುಖ್ಯ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿ ಶೇಖ್ ಮೊದಲು ಸಂತ್ರಸ್ತ ಯುವತಿಯೊಂದಿಗೆ ಪರಿಚಯ ಬೆಳೆಸಿಕೊಂಡು ಅವಳ ನಂಬಿಕೆ ಗಳಿಸಿದ್ದನು. ನಂತರ ವಿವಿಧ ಸ್ಥಳಗಳಿಗೆ ಕರೆದೊಯ್ದು ಅವಳ ಅಶ್ಲೀಲ ಚಿತ್ರಗಳನ್ನು ತೆಗೆದಿದ್ದನು. ಈ ಚಿತ್ರಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿ ಆರೋಪಿಯು ಯುವತಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಮತ್ತು ಆತನ ಕುಟುಂಬದವರು ಯುವತಿಯ ಮೇಲೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ. ಅವಳಿಗೆ ನಮಾಜ್ ಮಾಡಲು ಮತ್ತು ಬುರ್ಖಾ ಧರಿಸಲು ಒತ್ತಾಯಿಸಲಾಗಿದೆ. ಈ ಘಟನೆಯಿಂದಾಗಿ ಯುವತಿ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು