
ವಾಷಿಂಗ್ಟನ್ (ಅಮೆರಿಕ) – ಅಮೆರಿಕ ಮತ್ತು ಇರಾನ್ ಯುದ್ಧ ಸಮಾಪ್ತಿಯ ದಿಕ್ಕಿನಲ್ಲಿ ಸಾಗುತ್ತಿವೆ ಎಂಬ ಸುಳಿವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯ ಮೂಲಕ (೨ ದೊಡ್ಡ ಜಲರಾಶಿಗಳನ್ನು ಜೋಡಿಸುವ ಕಿರಿದಾದ ಜಲಮಾರ್ಗ) ನೌಕೆಗಳಿಗೆ ರಕ್ಷಣೆ ನೀಡಲು ಅಮೆರಿಕ ‘ಪ್ರಾಜೆಕ್ಟ್ ಫ್ರೀಡಂ’ ಎಂಬ ಯೋಜನೆಯನ್ನು ಜಾರಿಗೊಳಿಸಿತ್ತು. ಇದನ್ನು ಟ್ರಂಪ್ ಈಗ ಸ್ಥಗಿತಗೊಳಿಸಿದ್ದಾರೆ. ಟ್ರಂಪ್ ಅವರು ‘ಟ್ರುತ್ ಸೋಶಿಯಲ್’ ನಲ್ಲಿ ಮಾಹಿತಿ ನೀಡುತ್ತಾ, ಇರಾನ್ ಪ್ರತಿನಿಧಿಗಳೊಂದಿಗೆ ಅಂತಿಮ ಒಪ್ಪಂದದ ದಿಕ್ಕಿನಲ್ಲಿ ಪ್ರಗತಿಯಾಗಿದೆ ಎಂದು ಸೂಚಿಸಿದ್ದಾರೆ.
ಟ್ರಂಪ್ ಅವರು, ಪಾಕಿಸ್ತಾನ ಮತ್ತು ಇತರ ದೇಶಗಳಿಂದಾಗಿ ಇರಾನ್ ವಿರುದ್ಧದ ನಮ್ಮ ಸೈನಿಕ ಪ್ರಯತ್ನಗಳಿಗೆ ಯಶಸ್ಸು ಸಿಕ್ಕಿದೆ. ಅಂತಿಮ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಇರಾನ್ ಪ್ರತಿನಿಧಿಗಳೊಂದಿಗೆ ನಡೆಯುತ್ತಿರುವ ಚರ್ಚೆಯು ಮುಂದುವರಿದಿದೆ. ಅಂತಿಮ ಒಪ್ಪಂದಕ್ಕೆ ಸಹಿ ಹಾಕುವವರೆಗೆ, ಹಾರ್ಮುಜ್ ಜಲಸಂಧಿಯಲ್ಲಿ ನೌಕೆಗಳಿಗೆ ರಕ್ಷಣೆ ನೀಡುವ ಅಮೆರಿಕದ ಪ್ರಾಜೆಕ್ಟ್ ಫ್ರೀಡಂ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ’, ಎಂದು ಹೇಳಿದ್ದಾರೆ.
ಇರಾನ್ ನ ಸೈನಿಕ ಶಕ್ತಿಯ ಬೆನ್ನೆಲುಬು ಮುರಿದಿದೆ ಎಂದು ಅಮೆರಿಕದ ದಾವೆ !
ಇರಾನ್ ನ ಕ್ಷಿಪಣಿಗಳು, ಡ್ರೋನ್ ಮತ್ತು ರಾಕೆಟ್ ಗಳ ಸಾಂಪ್ರದಾಯಿಕ ರಕ್ಷಣಾ ಕವಚ ಹಾಗೂ ವಾಯುಪಡೆಯು ಧ್ವಂಸಗೊಂಡಿದೆ. ಇರಾನ್ ಗೆ ತನ್ನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸಲು ಅಗತ್ಯವಿರುವ ರಕ್ಷಣಾ ಕವಚವು ಸಂಪೂರ್ಣವಾಗಿ ನಾಶವಾಗಿದೆ. ಆಪರೇಷನ್ ಎಪಿಕ್ ಫ್ಯೂರಿಯ ಉದ್ದೇಶವೇ ಇದಾಗಿತ್ತು ಮತ್ತು ಅದು ಸಾಧ್ಯವಾಗಿದೆ. ಆದ್ದರಿಂದ ಈ ಕಾರ್ಯಾಚರಣೆಯು ಮುಕ್ತಾಯಗೊಂಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara