
ತೆಹ್ರಾನ್ (ಇರಾನ್) – ಹೋರ್ಮುಜ್ ಜಲಸಂಧಿಯು ಅಮೆರಿಕನ್ ಸೈನ್ಯದ ಪಾಲಿಗೆ ಸ್ಮಶಾನವಾಗಲಿದೆ ಎಂದು ಇರಾನ್‌ನ ಹಿರಿಯ ಅಧಿಕಾರಿ ಮೊಹ್ಸೆನ್ ರಜಾಯಿ ಬೆದರಿಕೆ ಹಾಕಿದ್ದಾರೆ. ಮೊಹ್ಸೆನ್ ರಜಾಯಿ ಈ ಹಿಂದೆ ಇರಾನ್‌ನ ‘ರಿವಲ್ಯೂಷನರಿ ಗಾರ್ಡ್ ಕಾರ್ಪ್ಸ್’ನಲ್ಲಿ ಕಮಾಂಡರ್ ಆಗಿದ್ದರು. ವಿಮಾನವಾಹಕ ನೌಕೆಗಳನ್ನು ಹೊಂದಿರುವ ಅಮೆರಿಕ ವಿಶ್ವದ ಏಕೈಕ ಕಡಲ್ಗಳ್ಳ ರಾಷ್ಟ್ರವೆಂದು ಅವರು ಟೀಕಿಸಿದ್ದಾರೆ.
Hormuz tensions escalate: Senior Iranian official Mohsen Rezai warned that Hormuz could become a “graveyard for the US military.”
US President Donald Trump responded that any misstep by Iran could invite further attacks.
He also said on Truth Social that a 14-point proposal has… pic.twitter.com/FjrAzuf5Tj
— Sanatan Prabhat (@SanatanPrabhat) May 5, 2026
ಮತ್ತೊಂದೆಡೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಏನಾದರೂ ತಪ್ಪು ಮಾಡಿದರೆ ಮತ್ತಷ್ಟು ದಾಳಿಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಪ್ರಸ್ತುತ ಬಲಿಷ್ಠ ಸ್ಥಿತಿಯಲ್ಲಿದೆ, ಆದರೆ ಇರಾನ್ ಒತ್ತಡದಲ್ಲಿದ್ದು ಸಂಧಾನ ಮಾಡಿಕೊಳ್ಳಲು ಬಯಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇದಲ್ಲದೆ, ಟ್ರಂಪ್ ಅವರು ‘ಟ್ರೂತ್ ಸೋಶಿಯಲ್’ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ, ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ ಇರಾನ್‌ನಿಂದ 14 ಅಂಶಗಳ ಪ್ರಸ್ತಾವನೆಯು ಬಂದಿದ್ದು, ಅದರ ವಿವರವಾದ ಕರಡು ಪ್ರತಿಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ನಾವು ಈ ಹೊಸ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಇರಾನ್ ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕದ 9 ಅಂಶಗಳ ಯೋಜನೆಗೆ ಪ್ರತಿಕ್ರಿಯೆಯಾಗಿ ಈ 14 ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಈ ಪ್ರಸ್ತಾವನೆಯಲ್ಲಿ 30 ದಿನಗಳೊಳಗೆ ಎಲ್ಲಾ ಸಮಸ್ಯೆಗಳ ಪರಿಹಾರ, ಭವಿಷ್ಯದ ದಾಳಿಗಳ ವಿರುದ್ಧ ಖಾತರಿ, ಪ್ರದೇಶದಿಂದ ಅಮೆರಿಕನ್ ಸೈನ್ಯದ ಹಿಂತೆಗೆತ, ಮುಟ್ಟುಗೋಲು ಹಾಕಿಕೊಂಡಿರುವ ಇರಾನ್ ಆಸ್ತಿಗಳ ಮರುಪಾವತಿ, ನಿರ್ಬಂಧಗಳ ತೆರವು ಮತ್ತು ಯುದ್ಧದ ಹಾನಿಯ ಪರಿಹಾರ ಇತ್ಯಾದಿ ಅಂಶಗಳನ್ನು ಒಳಗೊಂಡಿದೆ. ಹಾಗೆಯೇ ಹೋರ್ಮುಜ್ ಜಲಸಂಧಿಗಾಗಿ ಹೊಸ ವ್ಯವಸ್ಥೆಯನ್ನು ರೂಪಿಸುವುದು, ಅಮೆರಿಕದ ನೌಕಾ ದಿಗ್ಬಂಧನವನ್ನು ಅಂತ್ಯಗೊಳಿಸುವುದು ಮತ್ತು ಪ್ರಾದೇಶಿಕ ಸಂಘರ್ಷವನ್ನು ಕೊನೆಗೊಳಿಸುವುದು ಮುಂತಾದ ಬೇಡಿಕೆಗಳನ್ನು ಇಡಲಾಗಿದೆ. ಒಪ್ಪಂದದ ನಂತರ ಪರಮಾಣು ಕಾರ್ಯಕ್ರಮದ ಬಗ್ಗೆ ಸ್ವತಂತ್ರ ಮಾತುಕತೆ ನಡೆಸುವ ಪ್ರಸ್ತಾಪವನ್ನೂ ಮುಂದಿಡಲಾಗಿದೆ.
ಹೋರ್ಮುಜ್‌ನಲ್ಲಿ ಸಣ್ಣ ದೋಣಿಗಳಿಂದ ಸರಕು ನೌಕೆಯ ಮೇಲೆ ದಾಳಿ
ಹೋರ್ಮುಜ್ ಜಲಸಂಧಿಯಲ್ಲಿ ದೊಡ್ಡ ಸರಕು ನೌಕೆಯೊಂದರ ಮೇಲೆ ಸಣ್ಣ ದೋಣಿಗಳು ದಾಳಿ ನಡೆಸಿವೆ. ಈ ಘಟನೆಯು ಇರಾನ್ ಕರಾವಳಿಯಿಂದ 11 ಮೈಲಿ ದೂರದಲ್ಲಿ ನಡೆದಿದೆ. ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ. ಇರಾನ್ ಈ ಹಿಂದೆ ಕೂಡ ‘ಸ್ಪೀಡ್ ಬೋಟ್’ಗಳನ್ನು ಬಳಸಿ ಈ ಭಾಗದಲ್ಲಿ ಹಲವಾರು ನೌಕೆಗಳ ಮೇಲೆ ದಾಳಿ ಮಾಡಿದೆ ಮತ್ತು ಕೆಲವು ನೌಕೆಗಳನ್ನು ತನ್ನ ವಶಕ್ಕೆ ಕೂಡ ಪಡೆದಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation