‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಮಾಧ್ಯಮದಿಂದ ಆಗಿರುವ ಆಧ್ಯಾತ್ಮಿಕ ಲಾಭದ ಬಗ್ಗೆ ಮನಸ್ಸಿನಲ್ಲಿ ಕೃತಜ್ಞತಾಭಾವವನ್ನು ಇಟ್ಟುಕೊಂಡು ಸಾಧನೆಯ ಪ್ರಯತ್ನದ ವೇಗವನ್ನು ಹೆಚ್ಚಿಸಿರಿ !

೨೦೨೫ ನೆಯ ವರ್ಷದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಯೋಜನೆಯನ್ನು ಮಾಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಬಹಳಷ್ಟನ್ನು ನೀಡಿದ್ದಾರೆ. ಆ ಬಗೆಗಿನ ಕೆಲವು ಅಂಶಗಳನ್ನು ಮುಂದೆ ನೀಡಲಾಗಿದೆ. ಆ ಅಂಶಗಳ ಅಧ್ಯಯನ ಮಾಡಿ, ಸಾಧಕರು ಸಾಧನೆಯನ್ನು ತೀವ್ರಗೊಳಿಸುವ ತಳಮಳವನ್ನು ಜಾಗೃತಗೊಳಿಸಿ ಸಾಧನೆಯ ಮುಂದಿನ ಹಂತವನ್ನು ಪ್ರಾಪ್ತಮಾಡಿಕೊಳ್ಳಬೇಕು.

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಸಾಧಕರಿಗೆ ಲಭಿಸಿದ ಅಮೂಲ್ಯ ಸತ್ಸಂಗ !

ಅ. ಸತ್ಸಂಗದ ಶಬ್ದಾತೀತ ಲಾಭ : ವಾರಕ್ಕೊಮ್ಮೆ ಒಂದು ಗಂಟೆ ಸಿಗುವ ಸತ್ಸಂಗದಿಂದ ಸಾಧಕರಿಗೆ ಸಾಧನೆಯ ವೃದ್ಧಿಗಾಗಿ ಸಾಕಷ್ಟು ಲಾಭವಾಗುತ್ತದೆ. ಹೀಗಿರುವಾಗ, ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಆಗಮಿಸಿದ ೨೫ ರಿಂದ ೩೦ ಸಾವಿರ ಜನರ ನಮಗೆ ಪ್ರತಿದಿನ ೧೨ ರಿಂದ ೧೪ ಗಂಟೆಗಳಂತೆ ಸತತ ೩ ದಿನಗಳ ಕಾಲ ಸತ್ಸಂಗ ಲಭಿಸಿತು ಎಂದರೆ, ‘ನಮಗೆ ಎಷ್ಟು ಅಗಾಧ ಪ್ರಮಾಣದಲ್ಲಿ ಲಾಭವಾಗಿರಬಹುದು !’ಎಂಬುದು ಗಮನಕ್ಕೆ ಬರುತ್ತದೆ. ಈ ಸತ್ಸಂಗದ ಲಾಭವು ಶಬ್ದಾತೀತವಾಗಿದೆ.

ಆ. ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿನ ಸತ್ಸಂಗದ ದಿವ್ಯತ್ವ !

೧. ಅಲ್ಲಿ ಸಾಧನೆ ಮಾಡುವ ಸಾವಿರಾರು ಸಾಧಕರು ಉಪಸ್ಥಿತರಿದ್ದರು.

೨. ಶೇ. ೬೦ ರಷ್ಟು ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಕನಿಷ್ಠ ೧ ಸಾವಿರ ಸಾಧಕರು ಅಲ್ಲಿ ಉಪಸ್ಥಿತರಿದ್ದರು.

೩. ‘ಸಂತರ ಸತ್ಸಂಗವು ದುರ್ಲಭವಾಗಿದೆ’ ಎಂಬ ಶಾಸ್ತ್ರ ವಚನವಿದೆ. ಈ ಕಾರ್ಯಕ್ರಮಕ್ಕೆ ಸನಾತನದ ೫೦ ರಿಂದ ೬೦ ಸಂತರು ಮತ್ತು ಸದ್ಗುರುಗಳು ಹಾಗೂ ಇತರ ಸಂಪ್ರದಾಯದವರೂ ಸೇರಿ ಸುಮಾರು ೧೦೦ ಸಂತರು ಉಪಸ್ಥಿತರಿದ್ದರು.

ಇ. ದೇವಿ-ದೇವತೆಗಳ ಸ್ಥೂಲದಿಂದ ಮತ್ತು ಸೂಕ್ಷ್ಮದಿಂದ ಸತ್ಸಂಗ ಲಭಿಸಿತು

೧. ಜೀವನಾಡಿ ಪಟ್ಟಿಯಲ್ಲಿ ಉಲ್ಲೇಖಿಸಿ ರುವಂತೆ ಶ್ರೀ ಮಹಾಲಕ್ಷ್ಮೀಯ ಅವತಾರ ವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀದೇವಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಅಲ್ಲಿ ಪೂರ್ಣ ಸಮಯ ಉಪಸ್ಥಿತರಿದ್ದರು.

೨. ಜೀವನಾಡಿಪಟ್ಟಿಯ ಉಲ್ಲೇಖದಂತೆ ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆಯವರು ಮೊದಲ ದಿನದಿಂದಲೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

೩. ಈ ಕಾರ್ಯಕ್ರಮಕ್ಕೆ ಸೂಕ್ಷ್ಮ ರೂಪದಲ್ಲಿ ಅನೇಕ ದೇವಿ-ದೇವತೆಗಳು, ಋಷಿಮುನಿಗಳು ಮತ್ತು ದಿವ್ಯಾತ್ಮರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ಥಳದಲ್ಲಿ ಶ್ರೀ ಗಣೇಶ, ಶ್ರೀಕೃಷ್ಣ, ಶ್ರೀರಾಮ, ಶ್ರೀ ದುರ್ಗಾದೇವಿ, ಶ್ರೀ ಹನುಮಂತ, ಭಗವಾನ ಶ್ರೀಪರಶುರಾಮ, ಶ್ರೀ ಕಾರ್ತಿಕಸ್ವಾಮಿ, ಶ್ರೀ ಸಾತೇರಿದೇವಿ ಮುಂತಾದ ಅನೇಕ ದೇವತೆಗಳ ತತ್ತ್ವವು ಆವಶ್ಯಕತೆಗನುಸಾರ ಕಾರ್ಯನಿರತವಾಗಿದ್ದವು. ಅದರ ಲಾಭವು ಅಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಆಯಿತು.’

‘ಇಂತಹ ಈ ದಿವ್ಯ ಸತ್ಸಂಗವು ನಮಗೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕೃಪೆಯಿಂದ ಲಭಿಸಿತು’, ಇದಕ್ಕಾಗಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ, ಅದು ಕಡಿಮೆಯೇ ಆಗಿದೆ.

ಸಾಧಕರೇ, ಸಾಧನೆಯ ಮುಂದಿನ ಪ್ರಯತ್ನಗಳನ್ನು ಕೃತಜ್ಞತಾಭಾವದಿಂದ ಮಾಡಿ !

೧. ಸಾಧನೆಯ ವೇಗವನ್ನು ಹೆಚ್ಚಿಸಿ ! :‘ಗುರುದೇವರು ನಮಗೆ ಈ ಕಾರ್ಯಕ್ರಮದಿಂದ ಎಷ್ಟೆಲ್ಲ ಕೊಟ್ಟಿದ್ದಾರೆ ಎಂದರೆ ನಾವು ಅವರ ಚರಣಗಳಲ್ಲಿ ಅಖಂಡ ಕೃತಜ್ಞತಾಭಾವದಲ್ಲಿಯೇ ಇರಬೇಕು’, ಎಂಬುದು ಗಮನಕ್ಕೆ ಬರುತ್ತದೆ. ಈ ಎಲ್ಲವುಗಳಿಂದ ಪ್ರೇರಣೆ ಪಡೆದು ನಾವು ಈಗ ಕೃತಜ್ಞತಾಭಾವದಿಂದ ನಮ್ಮ ಸಾಧನೆಯ ವೇಗವನ್ನು ಹೆಚ್ಚಿಸಬೇಕು.

(ಸದ್ಗುರು) ರಾಜೇಂದ್ರ ಶಿಂದೆ

೨. ವ್ಯಷ್ಟಿ ಸಾಧನೆಯನ್ನು ಗಂಭೀರವಾಗಿ ಮಾಡಿ : ಮಹೋತ್ಸವಕ್ಕೆ ಬಂದ ಸಾಧಕರ ಪೈಕಿ ಕೇವಲ ಶೇ. ೫ ರಷ್ಟು ಸಾಧಕರ ವ್ಯಷ್ಟಿ ಸಾಧನೆ ಗುರುದೇವರಿಗೆ ಅಪೇಕ್ಷಿತ ರೀತಿಯಲ್ಲಿ ನಡೆದಿದೆ. ಇದು ಅತ್ಯಂತ ಗಂಭೀರವಾಗಿದೆ. ಇದರಿಂದ ‘ಪ್ರತಿಯೊಬ್ಬರು ಬಹಳ ಪ್ರಯತ್ನ ಮಾಡಬೇಕು’, ಎಂಬುದು ಗಮನಕ್ಕೆ ಬರುತ್ತದೆ. ವ್ಯಷ್ಟಿ ಸಾಧನೆಯನ್ನು ಸಾಕಷ್ಟು ಮಾಡಿ ತಳಮಳದಿಂದ ಸಮಷ್ಟಿ ಸಾಧನೆಯನ್ನು ಮಾಡೋಣ !

೩. ಆಪತ್ಕಾಲದ ದೃಷ್ಟಿಯಿಂದ ತಮ್ಮಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಪ್ರಯತ್ನಿಸಿ : ಕೇವಲ ಮುಂಬರುವ ಗುರುಪೂರ್ಣಿಮೆಗಾಗಿ ಧ್ಯೇಯವನ್ನಿಟ್ಟುಕೊಳ್ಳದೆ, ‘ಒಟ್ಟಾರೆ ಸಾಧನೆಯು ವೇಗದಿಂದ ಸಾಗಲು ಮುಂದಿನ ದಿನಗಳಲ್ಲಿ ನಾನು ಏನೇನು ಮಾಡಬೇಕಾಗುತ್ತದೆ, ಯಾವುದರ ಮೂಲಕ ನನ್ನಲ್ಲಿ ಅಮೂಲಾಗ್ರ ಬದಲಾವಣೆಯು ಆಗಬಹುದು ?’, ಎಂಬ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ.

೪. ಸಮರೋಪಾದಿಯಲ್ಲಿ ಸಾಧನೆಯ ಪ್ರಯತ್ನಗಳನ್ನು ಮಾಡಿ ! : ಸಾಧನೆಯಲ್ಲಿ ಮುಂದೆ ಹೋಗಲು ಅಡ್ಡಿಯಾಗುವ ಸ್ವಭಾವ ದೋಷಗಳು ಮತ್ತು ಅಹಂನ ಲಕ್ಷಣಗಳನ್ನು ಕಡಿಮೆ ಮಾಡಲು ಈಗ ಕಠಿಣ ಪ್ರಯತ್ನಗಳನ್ನು ಮಾಡಬೇಕು. ಏಕೆಂದರೆ ಸ್ಥೂಲದಲ್ಲಿ ಯುದ್ಧವು ಆರಂಭವಾಗಿರುವುದರ ಶಂಖನಾದವು ಆಗಿದೆ. ಈಗ ನಮ್ಮ ಸಾಧನೆಯ ಪ್ರಯತ್ನಗಳೂ ಸಮರೋಪಾದಿಯಲ್ಲಿ ನಡೆಯಬೇಕು.

ಚೈತನ್ಯ ನೀಡುವ ಪ್ರದರ್ಶನಗಳು !

ಸೊರಟಿ ಸೋಮನಾಥದ ದಿವ್ಯ ಸ್ಫಟಿಕ ಲಿಂಗದ ಪ್ರದರ್ಶನ

 

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಧರಿಸಿದ ವಸ್ತ್ರಾಲಂಕಾರಗಳ ಪ್ರದರ್ಶನ

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಅತ್ಯಂತ ಚೈತನ್ಯ ದಾಯಕ ಮತ್ತು ಪ್ರೇರಣಾದಾಯಕ ಪ್ರದರ್ಶನಗಳಿದ್ದವು.

೧. ೧೪ ಸಂತರು ಮತ್ತು ಗುರುಗಳ ಪಾದುಕೆಗಳ ದಿವ್ಯ ಪ್ರದರ್ಶನ ಹಾಗೂ ಸೋರಟಿ ಸೋಮನಾಥದ ದಿವ್ಯ ಸ್ಪಟಿಕ ಲಿಂಗದ ದರ್ಶನ ನೀಡುವ ಪ್ರದರ್ಶನ

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಬ್ರಹ್ಮೋತ್ಸವಕ್ಕಾಗಿ ಬಳಸಿದ ದಿವ್ಯ ಚೈತನ್ಯದಾಯಕ ರಥದ ಪ್ರದರ್ಶನ

೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಧರಿಸಿದ ವಸ್ತ್ರಾಲಂಕಾರಗಳ ಪ್ರದರ್ಶನ.

ಇದನ್ನು ನೋಡುವ ದಿವ್ಯ ಮತ್ತು ಅಮೂಲ್ಯ ಅವಕಾಶವು ಗುರುಕೃಪೆಯಿಂದ ನಮ್ಮ ಜೀವನದಲ್ಲಿ ಬಂದಿತು. ಈ ಕಾರ್ಯಕ್ರಮದ ನಮಗೆ ಯಾವ ರೀತಿ ಸ್ಥೂಲದಿಂದ ಲಾಭವಾಯಿತೋ, ಅದೇ ರೀತಿ ಸೂಕ್ಷ್ಮದಲ್ಲಿಯೂ ಬಹಳ ಲಾಭವಾಗಿದೆ.

ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬಲ’ವು ಪ್ರಾಪ್ತವಾಗಲೆಂದು ಮಾಡಿದ ‘ಶ್ರೀ ಮಹಾಧನ್ವಂತರಿ ಯಾಗ’ ಮತ್ತು ‘ಶತಚಂಡಿ ಯಾಗ’ !

ಶತಚಂಡಿ ಯಾಗ’ದಲ್ಲಿ ಆಹುತಿಯನ್ನು ನೀಡುತ್ತಿರುವ ಯಜಮಾನ ಮತ್ತು ಪುರೋಹಿತರು

ಪ್ರಸ್ತುತ ಸಮಯದ ಭೀಕರ ಆಪತ್ಕಾಲದಲ್ಲಿ ಶತ್ರುಗಳು ಕೇವಲ ಶಸ್ತ್ರಾಸ್ತ್ರಗಳಿಂದ ಮಾತ್ರವಲ್ಲ, ಆಧುನಿಕ ತಂತ್ರಜ್ಞಾನದ ಮೂಲಕ, ರೋಗಾಣುಗಳ ಮೂಲಕವೂ ನಮ್ಮ ಮೇಲೆ ಆಕ್ರಮಣ ಮಾಡಬಹುದು. ‘ಇಂತಹ ಹೊಸ ಆಪತ್ತುಗಳನ್ನು ಎದುರಿಸಲು ಎಲ್ಲರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬಲವು ಚೆನ್ನಾಗಿರಬೇಕು’, ಎಂಬ ಉದ್ದೇಶದಿಂದ ೧೯.೫.೨೦೨೫ ರಂದು ಕಾರ್ಯಕ್ರಮದ ಸ್ಥಳದಲ್ಲಿ ‘ಶ್ರೀ ಮಹಾಧನ್ವಂತರಿ ಯಾಗ’ವನ್ನು ಆಯೋಜಿಸಲಾಗಿತ್ತು. ಶಂಖನಾದ ಮಹೋತ್ಸವದ ನಂತರ ‘ಶತಚಂಡಿ ಯಾಗ’ವನ್ನು ಮಾಡಲಾಯಿತು. ಈ ಎರಡೂ ಯಾಗಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ, ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ, ಹಾಗೆಯೇ ದೇವಿ-ದೇವತೆಗಳು ಮತ್ತು ಋಷಿಮುನಿಗಳ ಆಶೀರ್ವಾದದಿಂದ ನೆರವೇರಿತು. ಈ ಎರಡೂ ಯಾಗಗಳಿಂದ ಎಲ್ಲರಿಗೂ ಎಲ್ಲ ಸ್ತರಗಳಲ್ಲಿ ದೊರೆತ ಲಾಭವು ಅವರ ಸಾಧನೆಗೆ ಹೋಲಿಸಿದರೆ ಬಹಳಷ್ಟಿದೆ. ‘ಎಲ್ಲ ಸಾಧಕರಿಗೆ ಸಾಧನೆಯನ್ನು ತೀವ್ರ ವೇಗದಿಂದ ಮಾಡುವ ಬುದ್ಧಿ ಬರಲಿ, ಹಾಗೆಯೇ ಆ ಪ್ರಕಾರ ಅವರಿಂದ ಕೃತಿಗಳಾಗಲಿ’, ಎಂದು ನಾನು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.

‘ಇದಂ ನ ಮಮ’ (ಈ ಬರಹ ನನ್ನದಲ್ಲ.)

– (ಸದ್ಗುರು) ರಾಜೇಂದ್ರ ಶಿಂದೆ (ವಯಸ್ಸು ೬೨ ವರ್ಷಗಳು), ಸನಾತನ ಆಶ್ರಮ, ದೇವದ, ಪನವೆಲ. (೬.೬.೨೦೨೫)