(ಕಾರಿಡಾರ್ ಎಂದರೆ ಸುಸಜ್ಜಿತ ಮತ್ತು ವಿಶಾಲವಾದ ಮಾರ್ಗ)

ಮುಂಬಯಿ – ರಾಜ್ಯ ಮಂತ್ರಿಮಂಡಲದ ಶಿಖರ ಸಮಿತಿಯ ಸಭೆಯಲ್ಲಿ ಪಂಢರಪುರದ ಮಹತ್ವಾಕಾಂಕ್ಷಿ ಕಾರಿಡಾರ್ (ಸುಸಜ್ಜಿತ ಮತ್ತು ವಿಶಾಲವಾದ ಮಾರ್ಗ) ಯೋಜನೆ ಮತ್ತು ಅಭಿವೃದ್ಧಿ ನೀಲನಕ್ಷೆಯನ್ನು ಸಮ್ಮತಿಸಲಾಗಿದೆ. ಈ ಯೋಜನೆಯಡಿಯಲ್ಲಿ ಚಂದ್ರಭಾಗಾ ನದಿಯ ಘಾಟ್ ಪರಿಸರ, ಪ್ರದಕ್ಷಿಣಾ ಮಾರ್ಗ ಮತ್ತು ದೇವಸ್ಥಾನ ಪರಿಸರದ ಸೌಂದರ್ಯೀಕರಣವನ್ನು ಮಾಡಲಾಗುವುದು. ಇದು ೪ ಸಾವಿರ ಕೋಟಿ ರೂಪಾಯಿಗಳ ಯೋಜನೆಯಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ ಅವರ ಅಧ್ಯಕ್ಷತೆಯಲ್ಲಿ ಈ ಸಭೆಯು ಜರುಗಿತು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಸುನೇತ್ರಾ ಪವಾರ, ಗ್ರಾಮವಿಕಾಸ ಸಚಿವ ಜಯಕುಮಾರ ಗೋರೆ, ಅರಣ್ಯ ಸಚಿವ ಗಣೇಶ ನಾಯಕ, ಶಾಸಕ ಸಮಾಧಾನ ಆವತಾಡೆ ಅವರೊಂದಿಗೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
೧. ಈ ಯೋಜನೆಯಡಿಯಲ್ಲಿ ಚಂದ್ರಭಾಗಾ ನದಿಯ ಸ್ವಚ್ಛತೆ ಮಾಡಿ ಘಾಟ್ ಗಳನ್ನು ಸುಶೋಭಿತಗೊಳಿಸುವುದು, ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಗಳನ್ನು ಅಗಲೀಕರಣಗೊಳಿಸುವುದು, ಭಕ್ತ ನಿವಾಸಗಳನ್ನು ಅಧುನೀಕರಣಗೊಳಿಸುವುದು, ದರ್ಶನದ ಸಾಲಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಮತ್ತು ವಿಶ್ರಾಂತಿಯ ವ್ಯವಸ್ಥೆ ಮುಂತಾದ ಕಾರ್ಯಗಳನ್ನು ಮಾಡಲಾಗುವುದು.
೨. ಭಕ್ತಾದಿಗಳಿಗೆ ದರ್ಶನಕ್ಕಾಗಿ ತಗಲುವ ಕೆಲವು ಗಂಟೆಗಳ ಸಮಯವನ್ನು ಕಡಿಮೆ ಮಾಡಲು, ದರ್ಶನದ ಸಾಲನ್ನು ಮತ್ತಷ್ಟು ಸುಲಭಗೊಳಿಸಲಾಗುವುದು.
೩. ಈ ಯೋಜನೆಯಲ್ಲಿ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ ಪರಿಸರದ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು.
೪. ಭಕ್ತರಿಗಾಗಿ ವಿಶಾಲ ಮತ್ತು ಸುರಕ್ಷಿತ ದರ್ಶನ ಮಾರ್ಗ, ಜನದಟ್ಟಣೆಯ ನಿರ್ವಹಣೆಗಾಗಿ ವಿಶೇಷ ಕಾರಿಡಾರ, ಆಧುನಿಕ ಸೌಲಭ್ಯಗಳು, ಸ್ವಚ್ಛತಾ ವ್ಯವಸ್ಥೆ, ವಾಹನ ನಿಲುಗಡೆ, ವಸತಿ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು.
೫. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ ಅವರು ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಆಗಸ್ಟ್ ೧ ರೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ.
‘ಈ ಕಾರಿಡಾರನಿಂದ ದೇವಸ್ಥಾನದ ಸಮೀಪವಿರುವ ಕೆಲವು ಅಂಗಡಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಆದ್ದರಿಂದ ಕೆಲವು ವ್ಯಾಪಾರಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಂಗಡಿಗಳು ಮತ್ತು ಮನೆಗಳ ಯೋಗ್ಯ ಪುನರ್ವಸತಿ ಮಾಡಲಾಗುವುದು, ಹಾಗೆಯೇ ಅಭಿವೃದ್ಧಿ ಮಾಡುವಾಗ ಧಾರ್ಮಿಕತೆಯನ್ನು ಕಾಪಾಡಲಾಗುವುದು’, ಎಂಬ ನಿಲುವನ್ನು ಸರಕಾರವು ತಳೆದಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!