ಅನೇಕರಿಗೆ ಓದಿದ ಬರಹಗಳಿಂದ ಮಹತ್ವದ ಅಂಶಗಳನ್ನು ಆಯ್ದು ತೆಗೆಯುವ ಮತ್ತು ಪತ್ರಿಕಾ ಬರಹಗಳನ್ನು ಕತ್ತರಿಸಿ ಆಧಾರಕ್ಕಾಗಿ ಜಾಗರೂಕತೆಯಿಂದ ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಅವುಗಳ ಮೂಲಕ ಅವರ ಗುಣಗಳೂ ಪ್ರಕಟವಾಗುತ್ತವೆ; ಆದರೆ ಅವುಗಳಿಂದ ಇತರರಿಗೆ ಅನುಭೂತಿಯನ್ನು ಕೇವಲ ಈಶ್ವರ ಮಾತ್ರ ನೀಡಬಲ್ಲನು. ಈ ಸೇವೆಯ ಮಾಧ್ಯಮದಿಂದ ಇತರರಲ್ಲಿ ಗುಣವೃದ್ಧಿ ಮಾಡುವುದು ಮತ್ತು ಅವರಿಗೆ ಚೈತನ್ಯವನ್ನು ಒದಗಿಸುವವರು ಕೇವಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಒಬ್ಬರೇ ಆಗಿದ್ದಾರೆ.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಓದಿದ ನೂರಾರು ಗ್ರಂಥಗಳು
ಅಧ್ಯಾತ್ಮಶಾಸ್ತ್ರದ ಸಂದರ್ಭದಲ್ಲಿರುವ ಜಿಜ್ಞಾಸೆಯಿಂದಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇದು ವರೆಗೆ ಆ ಸಂದರ್ಭದಲ್ಲಿನ ನೂರಾರು ಗ್ರಂಥಗಳನ್ನು ಓದಿದ್ದಾರೆ. ಅದರೊಂದಿಗೆ ‘ಈ ಜ್ಞಾನವು ಎಲ್ಲಾ ಸಾಧಕರಿಗೂ ಸಿಗಲಿ. ಸಾಧಕರಿಗೆ ಇಂತಹ ಗ್ರಂಥಗಳನ್ನು ಓದುವುದರಲ್ಲಿ ಸಮಯ ವ್ಯರ್ಥವಾಗಬಾರದು, ಸಾಧಕರಿಗೆ ಪ್ರತಿಯೊಂದು ವಿಷಯದ ಜ್ಞಾನವು ಒಂದೇ ಸ್ಥಳದಲ್ಲಿ ಲಭ್ಯವಾಗಲಿ’ ಎಂಬ ಉದ್ದೇಶದಿಂದ ಅವರು ಪ್ರತಿಯೊಂದು ಗ್ರಂಥದಲ್ಲಿನ ಮಹತ್ವದ ಬರಹವನ್ನು ಗುರುತು ಮಾಡಿ ಆಯ್ಕೆ ಮಾಡಿದರು ಮತ್ತು ಸನಾತನದ ಗ್ರಂಥಗಳ ಮೂಲಕ ಪ್ರಕಟಿಸಿದರು. ಈಗಲೂ ಅವರ ಈ ಕಾರ್ಯವು ಮುಂದುವರಿದಿದೆ. ಅವರು ಓದಿದ ಗ್ರಂಥಗಳ ವಿವರವು ಈ ಮುಂದಿನಂತಿದೆ.
ಓದಿದ ಮಾಸಿಕಗಳು (ಪಾಕ್ಷಿಕ+ಮಾಸಿಕ+ತ್ರೈಮಾಸಿಕ) : ೫೩೫೬
ದಿನಪತ್ರಿಕೆಗಳು (ದೈನಿಕ+ಸಾಪ್ತಾಹಿಕ) : ೨೯೦
ಪುಸ್ತಕಗಳು : ೯೭೦ (ಇದರಲ್ಲಿ ಸಣ್ಣ, ಮಧ್ಯಮ, ದೊಡ್ಡ ಮತ್ತು ವಿಶೇಷಾಂಕಗಳ ಸಂಖ್ಯೆಯನ್ನು ಸೇರಿಸಲಾಗಿದೆ)
೨. ಸಾಧಕರ ವಿಚಾರ ಮಾಡುವುದು
೨ ಅ. ಎಲ್ಲರ ಸಮಯ ಉಳಿತಾಯ ಮಾಡುವುದು : ಇತರ ಗ್ರಂಥಗಳನ್ನು ಓದುವಾಗ ಅವರು ಯಾವಾಗಲೂ ಮಾಸಿಕಗಳಿಗೆ ಆದ್ಯತೆ ನೀಡಿದರು. ಏಕೆಂದರೆ, ಮಾಸಿಕಕ್ಕಾಗಿ ಬರಹಗಳನ್ನು ಬರೆಯುವಾಗ ಲೇಖಕನು ಅನೇಕ ಸಂದರ್ಭಗಳನ್ನು ಬಳಸಿ ಮತ್ತು ಸ್ಥಳದ ಮಿತಿಯಿಂದಾಗಿ ತನ್ನಲ್ಲಿರುವ ಜ್ಞಾನವನ್ನು ಕನಿಷ್ಠ ಶಬ್ದಗಳಲ್ಲಿ ಮಂಡಿಸುತ್ತಾನೆ. ಇದರಿಂದ ನಮಗೆ ಅನೇಕ ದೊಡ್ಡ ಗ್ರಂಥಗಳನ್ನು ಓದಬೇಕಾಗುವುದಿಲ್ಲ. ಅಗತ್ಯವಿರುವ ಮತ್ತು ಅಂಶಗಳಿಗನುಸಾರವಾದ ಬರಹವು ಆ ಮಾಸಿಕದಿಂದ ಸಿಗುತ್ತದೆಯೆಂದು ಅವರು ಹೇಳುತ್ತಾರೆ.

(ಪ.ಪೂ. ಡಾಕ್ರಸಸ ಹಸ್ತಾಕ್ಷರದ ಸಾಲು ಕನ್ನಡದಲ್ಲಿ – ಸ್ಥೂಲದೇಹಕ್ಕಿಹುದು ಸ್ಥಳಕಾಲಗಳ ಪರಿಮಿತಿ | ಹೇಗಿರಲಿ ಸದಾ ಎಲ್ಲ ಕಡೆಗಳಲ್ಲಿ || ಸನಾತನ ಧರ್ಮವಿಹುದು ನನ್ನ ನಿತ್ಯರೂಪ | ಆ ರೂಪದಲ್ಲಿರೆವೆ ಎಲ್ಲ ಕಡೆಗಳಲ್ಲಿ ಸದಾ ||)
೨ ಆ. ಗುರುತು ಮಾಡುವ ಪದ್ಧತಿಯಿಂದಲೂ ಇತರರ ವಿಚಾರ ಮಾಡುವುದು : ಗುರುತು ಮಾಡುವಾಗ ಅವರು ಮುಂದೆ ಬೆರಳಚ್ಚು ಮಾಡುವವರು, ಸಂಕಲನ ಮಾಡುವವರು ಮತ್ತು ಸಂಕೇತಾಂಕ ನೀಡುವವರ ಸಮಯ ಉಳಿಯಲಿ ಎಂದು ವಿಚಾರ ಮಾಡುತ್ತಾರೆ.
೧. ಬರಹದಲ್ಲಿ ಅಗತ್ಯವಿರುವ ಲೇಖನಕ್ಕೆ ಮಾತ್ರ ಅವರು ಕಂಸ ಹಾಕುತ್ತಾರೆ. ಮಧ್ಯದ ಕೆಲವು ಶಬ್ದಗಳು ಅಥವಾ ಸಾಲುಗಳು ಅನಗತ್ಯವೆನಿಸಿದರೆ ಅವುಗಳ ಮೇಲೆ ಗೆರೆ ಎಳೆಯುತ್ತಾರೆ.
೨. ಮುದ್ರಿತ ಬರಹದಲ್ಲಿ ವ್ಯಾಕರಣದ ತಪ್ಪುಗಳಿದ್ದರೆ ಅವುಗಳ ಮೇಲೆಯೂ ಸರಿಯಾದದ್ದು ಏನು ಎಂಬುದನ್ನು ಗುರುತು ಮಾಡಿರುತ್ತಾರೆ. ಇದರಿಂದಾಗಿ ಬೆರಳಚ್ಚು ಮಾಡುವವರು ‘ಸರಿಯಾದದ್ದು ಏನು ? ಎಂದು ಹುಡುಕಬೇಕಾಗಿ ಬರುವುದಿಲ್ಲ.
೩. ಮುದ್ರಿತ ಶೀರ್ಷಿಕೆಯನ್ನೂ ನೀಡಿರುತ್ತಾರೆ. ಅದರಿಂದ ಸಂಕಲನಕಾರರಿಗೆ ‘ಆ ಬರಹದ ದಿಶೆಯು ನಮ್ಮ ನಿಯತಕಾಲಿಕೆಗಳ ಅಥವಾ ಗ್ರಂಥಗಳ ದೃಷ್ಟಿಯಿಂದ ಹೇಗಿರಬೇಕು ?’ ಎಂಬುದು ತಿಳಿಯುತ್ತದೆ.
೪. ಬರಹವನ್ನು ದೈನಿಕದಲ್ಲಿ ತೆಗೆದುಕೊಳ್ಳಬೇಕೆ, ಗ್ರಂಥದಲ್ಲಿ ತೆಗೆದುಕೊಳ್ಳಬೇಕೆ ಅಥವಾ ಕೇವಲ ಸಂಗ್ರಹಕ್ಕಾಗಿ ಇಡಬೇಕೆ ಎಂಬುದರ ಬಗ್ಗೆಯೂ ಟಿಪ್ಪಣಿ ಇರುತ್ತದೆ. ಇದರಿಂದಲೂ ಬರಹದ ಸಂಕಲನ ಹೇಗೆ ಮಾಡಬೇಕು ? ಎಂದು ಸಂಕಲನಕಾರರ ಗಮನಕ್ಕೆ ಬರುತ್ತದೆ.
೫. ಈ ಬರಹವು ಯಾವ ವಿಷಯಕ್ಕೆ ಸಂಬಂಧಪಟ್ಟಿದೆ ಎಂಬುದರ ಸಂಕೇತಾಂಕವನ್ನೂ ಅವರು ಅದರ ಮೇಲೆ ಬರೆದುಕೊಡುತ್ತಾರೆ. ಇದರಿಂದ ಸಂಕೇತಾಂಕ ನೀಡುವವರಿಗೆ ಅದರ ವರ್ಗೀಕರಣ ಮಾಡುವುದು ಸುಲಭವಾಗುತ್ತದೆ.
೩. ಸಾಧಕರಲ್ಲಿ ಗುಣವೃದ್ಧಿ ಮಾಡುವುದು
ಬೆರಳಚ್ಚು ಮಾಡುವುದು, ಗುರುತುಗಳ ಪ್ರಕಾರ ಎಲ್ಲಾ ಬರಹ ಬಂದಿದೆಯೇ ಎಂದು ಪರಿಶೀಲಿಸುವುದು, ಸಂಕಲನ ಮಾಡುವುದು ಹೀಗೆ ಅನೇಕ ಹಂತಗಳಿರುತ್ತವೆ. ಪ್ರತಿಯೊಂದು ಹಂತದ ಸಾಧಕನು ತನಗಿಂತ ಮೊದಲು ಸೇವೆ ಮಾಡಿದ ಸಾಧಕರಿಗೆ ಆ ಬರಹವನ್ನು ಅಭ್ಯಾಸಕ್ಕಾಗಿ ನೀಡುವ ಪದ್ಧತಿಯನ್ನು ಅವರು ಹಾಕಿಕೊಟ್ಟಿದ್ದಾರೆ. ಇದರಿಂದ ತನ್ನ ತಪ್ಪು ಎಲ್ಲಿದೆ ಎಂಬುದನ್ನು ಹುಡುಕಿ ಮುಂದಿನ ಬರಹವನ್ನು ಇನ್ನಷ್ಟು ಉತ್ತಮವಾಗಿ ಮಾಡುವ ಅಭ್ಯಾಸವು ಸಾಧಕರಲ್ಲಿ ಬೆಳೆಯುತ್ತದೆ. ಇದರಿಂದಲೇ ಮುಂದೆ ಬೆರಳಚ್ಚು ಮಾಡುವ ಸಾಧಕರು ಅಭ್ಯಾಸ ಮಾಡುತ್ತಾ ಮುಂದೆ ಸಂಕಲನ ಮಾಡುವ ಹಂತಕ್ಕೆ ಬರುತ್ತಾರೆ.
೪. ಇತರ ಲೇಖಕರನ್ನು ಪ್ರಶಂಸೆ ಮಾಡುವುದು
ಗ್ರಂಥ ಓದುವಾಗ ಅವರಿಗೆ ಯಾವುದಾದರೂ ವಾಕ್ಯ ಇಷ್ಟವಾದರೆ ಕೂಡಲೇ ಜೊತೆಯಲ್ಲಿರುವವರಿಗೆ ಆ ವಾಕ್ಯವನ್ನು ಓದಿ ಹೇಳುತ್ತಾರೆ ಮತ್ತು ‘ನಮಗೆ ಹೀಗೆ ಹೊಳೆಯುವುದಿಲ್ಲವಲ್ಲ’ ಎನ್ನುತ್ತಾರೆ. ಅಂತಹ ಗ್ರಂಥಗಳನ್ನು ಓದಿ, ಅದರಲ್ಲಿ ಕೇವಲ ಆವಶ್ಯಕವಿರುವಷ್ಟು ಜ್ಞಾನವನ್ನು ತೆಗೆದುಕೊಂಡ ನಂತರ ಜ್ಞಾನ ನೀಡಿದ ಲೇಖಕರಿಗೆ ಪತ್ರವನ್ನು ಕಳುಹಿಸಿ ‘ಲೇಖನವು ತುಂಬಾ ಇಷ್ಟವಾಯಿತು’ ಎಂದೂ ತಿಳಿಸುತ್ತಾರೆ. ಅದು ಯಾವುದಾದರೂ ಮಾಸಿಕದ ಲೇಖಕರಿರಲಿ ಅಥವಾ ಸಂತರ ಮಾರ್ಗದರ್ಶನವಿರಲಿ, ಪ್ರತಿಯೊಬ್ಬರಿಗೂ ಅಷ್ಟೇ ಆಪ್ತತೆಯಿಂದ ಅವರು ಪತ್ರವನ್ನು ಕಳುಹಿಸಿದ್ದಾರೆ. ಅವರು ಪ್ರಶಂಸೆ ಮಾಡಿರುವ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ.
ಅ. ತಾವು ಬರೆದಿರುವ ಗ್ರಂಥದಲ್ಲಿನ ಪ್ರತಿಯೊಂದು ವಾಕ್ಯವಷ್ಟೇ ಅಲ್ಲ, ಬದಲಾಗಿ ಪ್ರತಿಯೊಂದು ಶಬ್ದವೂ ಮಹತ್ವದ್ದಾಗಿದೆ. ಇದರಲ್ಲಿನ ಎಲ್ಲಾ ಜ್ಞಾನವೂ ಅದ್ವಿತೀಯವಾಗಿದೆ.
ಆ. ಶಿಕ್ಷಣ ಕ್ಷೇತ್ರದಲ್ಲಿನ ನಿಮ್ಮ ಈ ಕಾರ್ಯವನ್ನು ನೋಡಿ ನೀವು ಮುಂಬರುವ ಹಿಂದೂ ರಾಷ್ಟ್ರದಲ್ಲಿನ ಶಿಕ್ಷಣ ಕ್ಷೇತ್ರದ ಹೊಣೆಗಾರಿಕೆಯನ್ನು ಸ್ವೀಕರಿಸಬೇಕು ಎಂದು ನಿಮಗೆ ವಿನಂತಿ.
ಲೇಖಕರ ಈ ಜ್ಞಾನವು ಹೆಚ್ಚು ಹೆಚ್ಚು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಅವರ ಬಳಿ ಆ ಬರಹವನ್ನು ‘ಸನಾತನ ಪ್ರಭಾತ’ ನಿಯತಕಾಲಿಕೆಗಳು ಮತ್ತು ಸನಾತನದ ಗ್ರಂಥಗಳ ಮೂಲಕ ಪ್ರಕಟಿಸಲು ಅನುಮತಿಯನ್ನೂ ಕೇಳುವಂತೆ ಹೇಳುತ್ತಾರೆ. ಆ ಪತ್ರದಲ್ಲಿ ಬರಹವನ್ನು ಪ್ರಕಟಿಸುವಾಗ ಆ ಲೇಖಕರಿಗೆ ‘ಗೌರವಧನ ಅಥವಾ ಪ್ರಕಟವಾದ ದೈನಿಕದ ಪ್ರತಿಗಳು ಬೇಕಿವೆಯೇ ?’, ಅಥವಾ ಈ ಕುರಿತು ಏನಾದರೂ ಅಪೇಕ್ಷೆಗಳಿವೆಯೇ ಎಂದು ವಿಚಾರಿಸಲು ಹೇಳುತ್ತಾರೆ ಮತ್ತು ಅವರ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸನಾತನ ಪ್ರಭಾತ ಹಾಗೂ ಸನಾತನದ ಗ್ರಂಥಗಳ ವೇದಿಕೆಯನ್ನೂ ಒದಗಿಸಿಕೊಡುತ್ತಾರೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ