‘ಮನುಷ್ಯನ ಜನ್ಮವು ಸಾರ್ಥಕ ಆಗಬೇಕು ಮತ್ತು ಧರ್ಮಗ್ಲಾನಿ ದೂರ ಆಗಬೇಕು ಎಂಬ ಉದ್ದೇಶದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ವಿವಿಧ ಮಾಧ್ಯಮಗಳ ಮೂಲಕ ‘ಅಧ್ಯಾತ್ಮಪ್ರಸಾರ, ಧರ್ಮಪ್ರಸಾರ, ಧರ್ಮಜಾಗೃತಿ, ಸಮಾಜಸಹಾಯ, ರಾಷ್ಟ್ರರಕ್ಷಣೆ ಮತ್ತು ಹಿಂದೂಸಂಘಟನೆ’ ಮುಂತಾದ ಕಾರ್ಯಗಳನ್ನು ಮಾಡಿದ್ದಾರೆ ಹಾಗೂ ಅವರು ಇಂದಿಗೂ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ಈ ಕಾರ್ಯದ ಮಾಹಿತಿಯನ್ನು ನಾವು ಈ ಲೇಖನದಿಂದ ತಿಳಿದುಕೊಳ್ಳೋಣ.’

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವೈದ್ಯಕೀಯ ವ್ಯವಸಾಯದ ಕಡೆಯಿಂದ ಅಧ್ಯಾತ್ಮ ಪ್ರಸಾರದ ಕಾರ್ಯದ ಕಡೆಗೆ ಆಗಿರುವ ಮಾರ್ಗಕ್ರಮಣ !
ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿದೇಶಕ್ಕೆ ಹೋದರು. ಅಲ್ಲಿ ಅವರು ವೈದ್ಯಕೀಯ ವ್ಯವಸಾಯವನ್ನು ಆರಂಭಿಸಿದರು. ಮುಂದೆ ‘ಮಾತೃಭೂಮಿಯ ಸೇವೆಯನ್ನು ಮಾಡಬೇಕು’ ಎಂಬ ಹಂಬಲದಿಂದ ಅವರು ಭಾರತಕ್ಕೆ ಮರಳಿದರು. ಭಾರತಕ್ಕೆ ಬಂದ ನಂತರ ಅವರು ವೈದ್ಯಕೀಯ ವ್ಯವಸಾಯವನ್ನು ಪ್ರಾರಂಭಿಸಿದರು. ತಮ್ಮ ಬಳಿಗೆ ಬರುವ ರೋಗಿಗಳ ಸಮಸ್ಯೆಗಳ ಬಗ್ಗೆ ಆಳವಾಗಿ ಅಭ್ಯಾಸ ಮಾಡಿದಾಗ, ‘ಅಧ್ಯಾತ್ಮಶಾಸ್ತ್ರವು ವಿಜ್ಞಾನಕ್ಕಿಂತ ಹೆಚ್ಚು ಶ್ರೇಷ್ಠವಾಗಿದೆ’ ಎಂಬ ವಿಷಯವು ಅವರ ಗಮನಕ್ಕೆ ಬಂದಿತು. ಅನಂತರ ಅವರು ವೈದ್ಯಕೀಯ ವ್ಯವಸಾಯವನ್ನು ಮಾಡುತ್ತಿರುವಾಗಲೇ ಅಧ್ಯಾತ್ಮಶಾಸ್ತ್ರವನ್ನು ತಿಳಿದುಕೊಳ್ಳಲು ಅನೇಕ ಸಂತರನ್ನು ಭೇಟಿಯಾದರು. ಸಂತರ ಕೃಪೆಯಿಂದ ದೊರೆತ ಆಧ್ಯಾತ್ಮಿಕ ಜ್ಞಾನದ ಲಾಭವನ್ನು ಅವರು ತಮ್ಮ ರೋಗಿಗಳಿಗೆ ನೀಡಲು ಆರಂಭಿಸಿದರು. ಇದರಿಂದ ‘ರೋಗಿಗಳಲ್ಲಿ ಉತ್ತಮ ಬದಲಾವಣೆಗಳು ಆಗುತ್ತಿವೆ’ ಎಂಬುದು ಅವರ ಗಮನಕ್ಕೆ ಬಂದಿತು. ಇದರ ಮೂಲಕ ಅವರು ‘ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ’ ಎಂಬುದನ್ನು ಸ್ವತಃ ತಮ್ಮ ಕೃತಿಯಿಂದ ತೋರಿಸಿಕೊಟ್ಟರು. ಕ್ರಮೇಣ ಅವರು ತಮ್ಮನ್ನು ಪೂರ್ಣವಾಗಿ ಅಧ್ಯಾತ್ಮ ಪ್ರಸಾರದ ಕಾರ್ಯಕ್ಕೆ ಅರ್ಪಿಸಿಕೊಂಡರು.

೨. ಸಂತರ ಮತ್ತು ಗುರುಗಳಿಂದ ಸಂದೇಹ ನಿವಾರಣೆಯನ್ನು ಮಾಡಿಸಿಕೊಂಡು ಗುರುಸೇವೆ ಮಾಡಲು ಆರಂಭಿಸಿದರು
ಡಾ. ಆಠವಲೆಯವರು ತಮ್ಮ ಮನಸ್ಸಿನಲ್ಲಿನ ಎಲ್ಲ ಸಂದೇಹಗಳ ಬಗ್ಗೆ ಪ.ಪೂ. ಭಕ್ತರಾಜ ಮಹಾರಾಜರು ಮತ್ತು ಇತರ ಸಂತರಿಂದ ನಿವಾರಣೆ ಮಾಡಿಕೊಂಡರು. ಪ.ಪೂ. ಭಕ್ತರಾಜ ಮಹಾರಾಜರು ಡಾ. ಆಠವಲೆಯವರನ್ನು ‘ತಮ್ಮ ‘ಶಿಷ್ಯ’ನೆಂದು ಸ್ವೀಕರಿಸಿದ ನಂತರ ಅವರು ಗುರುಗಳ ಸಗುಣ ರೂಪದ ಸೇವೆ ಮಾಡಲು ಆರಂಭಿಸಿದರು.
೩. ಹಿಂದೂ ರಾಷ್ಟ್ರದ ಹರಿಕಾರರು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ೧೯೯೮ ರಲ್ಲಿ ‘ಈಶ್ವರೀ ರಾಜ್ಯದ ಸ್ಥಾಪನೆ’ ಎಂಬ ಒಂದು ಗ್ರಂಥವನ್ನು ಬರೆದರು. ಈ ಗ್ರಂಥದಲ್ಲಿ ಅವರು ಭಾರತದ ಅಂದಿನ ಸ್ಥಿತಿಗತಿಗಳನ್ನು ವರ್ಣಿಸಿದ್ದಾರೆ. ಇದೇ ಗ್ರಂಥದಲ್ಲಿ ಅವರು ೨೦೨೫ ರಿಂದ ೨೦೩೦ ರ ಅವಧಿಯಲ್ಲಿ ‘ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ’ ಎಂಬ ಭವಿಷ್ಯವನ್ನು ಬರೆದಿದ್ದಾರೆ. ಇಂದು ಕೆಲವು ಹಿಂದೂ ಸಂಘಟನೆಗಳು ಮತ್ತು ಕೆಲವು ರಾಜಕೀಯ ಘಟನೆಗಳು ಹಿಂದೂ ರಾಷ್ಟ್ರದ ದಿಕ್ಕಿನಲ್ಲಿ ಸಾಗುವುದನ್ನು ನೋಡಿದರೆ, ‘ಈ ಭವಿಷ್ಯವು ನಿಜವಾಗುತ್ತಿದೆ’ ಎಂಬುದು ಗಮನಕ್ಕೆ ಬರುತ್ತದೆ.
೪. ವಿವಿಧ ಮಾರ್ಗಗಳ ಮೂಲಕ ಮಾಡಿದ ಅಧ್ಯಾತ್ಮ ಪ್ರಸಾರ
೪ ಅ. ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಸ್ಥಾಪನೆ : ಡಾ. ಆಠವಲೆಯವರು ಪ.ಪೂ. ಭಕ್ತರಾಜ ಮಹಾರಾಜರ ಆಜ್ಞೆಯಂತೆ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯನ್ನು ಸ್ಥಾಪಿಸಿದರು. ಕಾಲಕ್ರಮೇಣ ಅವರು ಈ ಸಂಸ್ಥೆಯ ಹೆಸರನ್ನು ಬದಲಾಯಿಸಿ ‘ಸನಾತನ ಸಂಸ್ಥೆ’ ಎಂದು ನಾಮಕರಣ ಮಾಡಿದರು. ಈ ಸಂಸ್ಥೆಯು ದೇಶ-ವಿದೇಶಗಳಲ್ಲಿ ವೈಜ್ಞಾನಿಕ ಭಾಷೆಯಲ್ಲಿ ಅಧ್ಯಾತ್ಮದ ಪ್ರಸಾರ ಮತ್ತು ಪ್ರಚಾರವನ್ನು ಮಾಡುತ್ತಿದೆ.
೪ ಆ. ಅನೇಕ ಊರುಗಳಿಗೆ ಹೋಗಿ ಉಚಿತ ಪ್ರವಚನ ಮತ್ತು ಅಭ್ಯಾಸವರ್ಗಗಳನ್ನು ನಡೆಸುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ಊರುಗಳಿಗೆ ಭೇಟಿ ನೀಡಿ ‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ’ ಎಂಬ ಕುರಿತು ಉಚಿತ ಪ್ರವಚನಗಳನ್ನು ನೀಡಿದರು. ಜಿಜ್ಞಾಸುಗಳ ಸಂದೇಹಗಳನ್ನು ಪರಿಹರಿಸಲು ಅವರು ಉಚಿತ ಅಭ್ಯಾಸ ವರ್ಗಗಳನ್ನು ನಡೆಸಿದರು. ಅಧ್ಯಾತ್ಮಕ್ಕೆ ಸಂಬಂಧಿಸಿದ ಇಂತಹ ವಿಷಯಗಳ ಕುರಿತು ಅವರು ಒಂದು ಛಾಯಾಂಕಿತ (ಸೈಕ್ಲೋಸ್ಟೈಲ್ಡ್) ಗ್ರಂಥವನ್ನು ಬರೆದರು.
೪ ಇ. ಸಾಧಕರ ನಿರ್ಮಿತಿಯ ಪರಿಣಾಮಕಾರಿ ಮಾಧ್ಯಮ – ಸತ್ಸಂಗ
೪ ಇ ೧. ಸಾಪ್ತಾಹಿಕ ಸತ್ಸಂಗ : ‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ’ ಈ ವಿಷಯದ ಪ್ರವಚನ ನಡೆದ ನಂತರ, ಅದೇ ಭಾಗದಲ್ಲಿ ಸಾಪ್ತಾಹಿಕ ಸತ್ಸಂಗವನ್ನು ಪ್ರಾರಂಭಿಸಲಾಗುತ್ತಿತ್ತು. ಸತ್ಸಂಗದ ಮೂಲಕ ಇಂದಿಗೂ ಜಿಜ್ಞಾಸುಗಳಿಗೆ ಅಧ್ಯಾತ್ಮಶಾಸ್ತ್ರದ ವಿವಿಧ ಆಯಾಮಗಳ ಮಾಹಿತಿಯನ್ನು ನೀಡಲಾಗುತ್ತಿದೆ. ‘ಸತ್ಸಂಗ’ವು ಸಾಧಕರನ್ನು ರೂಪಿಸುವಲ್ಲಿ ಪರಿಣಾಮಕಾರಿ ಮಾಧ್ಯಮವಾಗಿದೆ.
೪ ಇ ೨. ಯುವ ಸತ್ಸಂಗ : ೧೫ ರಿಂದ ೨೧ ವರ್ಷ ವಯೋಮಿತಿಯ ಯುವಕ-ಯುವತಿಯರಿಗಾಗಿ ಯುವ ಸತ್ಸಂಗಗಳನ್ನು ನಡೆಸಲಾಗುತ್ತದೆ.
೪ ಇ ೩. ಸಮಾಜದ ವಿವಿಧ ಘಟಕಗಳಿಗಾಗಿ ಸತ್ಸಂಗ : ಸಮಾಜದಲ್ಲಿನ ಆಧುನಿಕ ವೈದ್ಯರು (ಡಾಕ್ಟರ್), ನ್ಯಾಯವಾದಿಗಳು, ಉದ್ಯಮಿಗಳು ಮತ್ತು ಶಿಕ್ಷಕರಿಗಾಗಿ ಸತ್ಸಂಗಗಳನ್ನು ನಡೆಸಲಾಗುತ್ತದೆ.
೪ ಇ ೪. ‘ಆನ್‌ಲೈನ್’ ಸತ್ಸಂಗ : ಕೊರೊನಾ ಮಹಾಮಾರಿಯ ಕಾಲದಲ್ಲಿ ಸಾಧಕರು ಮತ್ತು ಸಮಾಜದ ಜಿಜ್ಞಾಸುಗಳಿಗಾಗಿ ‘ಆನ್‌ಲೈನ್ ಸತ್ಸಂಗ’ಗಳನ್ನು ಪ್ರಾರಂಭಿಸಲಾಯಿತು.
೪ ಈ. ಬಾಲಸಂಸ್ಕಾರ ವರ್ಗ : ‘ಅಧ್ಯಾತ್ಮದ ಮಾಧ್ಯಮದಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಮೂಡಿಸಬಹುದು’, ಎಂಬುದನ್ನು ಅರಿತು ಸಮಾಜದ ೬ ರಿಂದ ೧೦ ವರ್ಷ ವಯಸ್ಸಿನ ಮಕ್ಕಳಿಗಾಗಿ ‘ಬಾಲಸಂಸ್ಕಾರ ವರ್ಗ’ಗಳನ್ನು ನಡೆಸಲಾಗುತ್ತಿದೆ.
೪. ಉ. ಸುಸಂಸ್ಕಾರ ವರ್ಗ : ೧೧ ರಿಂದ ೧೪ ವರ್ಷದ ಹುಡುಗ-ಹುಡುಗಿಯರಿಗಾಗಿ ‘ಸುಸಂಸ್ಕಾರ ವರ್ಗ’ಗಳನ್ನು ನಡೆಸಲಾಗುತ್ತದೆ.
೪ ಊ. ಸನಾತನವು ಪ್ರಕಟಿಸಿದ ಅಮೂಲ್ಯ ಗ್ರಂಥ ಸಂಪತ್ತು ! : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆರಂಭದ ಕಾಲದಲ್ಲಿ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’, ‘ಶಿಷ್ಯ’, ‘ಗುರು ಕೃಪಾಯೋಗಾನುಸಾರ ಸಾಧನೆ’, ‘ಪರಮೇಶ್ವರ ಮತ್ತು ಈಶ್ವರ’, ‘ಧಾರ್ಮಿಕ ಉತ್ಸವಗಳು ಮತ್ತು ವ್ರತಗಳ ಹಿಂದಿನ ಶಾಸ್ತ್ರ’ ಮುಂತಾದ ಗ್ರಂಥಗಳನ್ನು ಬರೆದು ಸಾಧನೆಯ ಮಹತ್ವ ತಿಳಿಸಿದರು. ಅವರು ಹಿಂದೂಗಳ ಪ್ರಮುಖ ದೇವತೆಗಳಾದ ‘ಶಿವ, ಶ್ರೀವಿಷ್ಣು, ದತ್ತ, ಶ್ರೀರಾಮ ಮತ್ತು ಶ್ರೀಕೃಷ್ಣ’ ಈ ದೇವತೆಗಳ ಕುರಿತು ಬೇರೆಲ್ಲೂ ಲಭ್ಯವಿಲ್ಲದ ಮಾಹಿತಿಯನ್ನು ನೀಡುವ ಗ್ರಂಥ ಹಾಗೂ ಕಿರುಗ್ರಂಥಗಳನ್ನು ರಚಿಸಿದರು. ಅವರು ನಿರಂತರವಾಗಿ ಗ್ರಂಥ ಬರವಣಿಗೆಯನ್ನು ಮಾಡುತ್ತಿದ್ದಾರೆ. ಮಾರ್ಚ ೨೦೨೬ ರ ವರೆಗೆ ೩೭೦ ಗ್ರಂಥಗಳ ೧೩ ಭಾಷೆಗಳಲ್ಲಿ ೧ ಕೋಟಿ ೨ ಲಕ್ಷ ೪೬ ಸಾವಿರ ಪ್ರತಿಗಳು ಪ್ರಸಿದ್ಧವಾಗಿವೆ ಮತ್ತು ಇನ್ನು ೫ ಸಾವಿರ ಗ್ರಂಥಗಳು ಪ್ರಕಟವಾಗುವಷ್ಟು ಅವರು ಬರವಣಿಗೆಯ ಸಂಗ್ರಹವನ್ನು ಮಾಡಿಟ್ಟಿದ್ದಾರೆ.
೪ ಎ. ಕಲೆಗಳ ಮಾಧ್ಯಮದಿಂದ ಈಶ್ವರಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು’, ಎಂಬುದರ ಬಗ್ಗೆ ಮಾರ್ಗದರ್ಶನ ಮಾಡುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಮಾಜಕ್ಕೆ ಮತ್ತು ಸಾಧಕರಿಗೆ, ‘೧೪ ವಿದ್ಯೆ ಮತ್ತು ೬೪ ಕಲೆಗಳ ಮಾಧ್ಯಮಗಳಿಂದಲೂ ಈಶ್ವರಪ್ರಾಪ್ತಿಯನ್ನು ಮಾಡಿ ಕೊಳ್ಳಬಹುದು’, ಎಂದು ಹೇಳಿದರು. ಅವರು ಸಾಧಕರಿಗೆ ‘ದೇವತೆಗಳ ಸಾತ್ತ್ವಿಕ ಚಿತ್ರಗಳು, ಸಾತ್ತ್ವಿಕ ರಂಗೋಲಿಗಳು, ಗಾಯನ, ನೃತ್ಯ ಎಂದರೆ ಏನು ?’ ಎಂಬುದನ್ನು ತಿಳಿಸಿ ಅವುಗಳನ್ನು ನಿರ್ಮಿಸಲು ಪ್ರೋತ್ಸಾಹ ನೀಡಿದರು. ಇಂದು ಅನೇಕ ಸಾಧಕರು ಈ ಮಾಧ್ಯಮಗಳ ಮೂಲಕ ಸಾಧನೆಯನ್ನು ಮಾಡುತ್ತಿದ್ದಾರೆ.
೪ ಐ. ನಾಮಮೆರವಣಿಗೆ : ಗುರುದೇವರು ಸಾಧಕರಿಗೆ ದೇವತೆಗಳ ನಾಮಜಪ ಮಾಡುತ್ತಾ ನಗರದ ವಿವಿಧ ಭಾಗಗಳಲ್ಲಿ ನಾಮದಿಂಡಿಗಳನ್ನು (ಮೆರವಣಿಗೆ) ಮಾಡಲು ಹೇಳಿದರು. ಇದರಿಂದ ವಾತಾವರಣವು ಸಾತ್ತ್ವಿಕವಾಯಿತು ಮತ್ತು ಸಾಧಕರಿಗೆ ಸಮಾಜಕ್ಕೆ ನಾಮಜಪದ ಮಹತ್ವ ತಿಳಿಸಲು ಸಾಧ್ಯವಾಯಿತು.
– (ಪೂ.) ಶ್ರೀ. ಅಶೋಕ ಪಾತ್ರಿಕರ (ಸನಾತನದ ೪೨ ನೇ ಸಂತರು, ವಯಸ್ಸು ೭೫ ವರ್ಷ), ಅಮರಾವತಿ
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !