ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳ ಪ್ರತಿರೋಧದ ಪರಿಣಾಮ !
ಭಕ್ತಿಗೀತೆಯಲ್ಲಿ ಅಲ್ಲಾಹನ ಉಲ್ಲೇಖ!
ವಿಡಂಬನಾತ್ಮಕ ಹಾಡಿಗೆ ಹಿಂದೂಗಳ ನೃತ್ಯ!

ಡೊಂಬಿವಲಿ (ಠಾಣೆ) – ಇಲ್ಲಿನ ಹಿಂದೂ ಕುಟುಂಬವೊಂದರ ಅರಿಶಿನ ಶಾಸ್ತ್ರದ ಕಾರ್ಯಕ್ರಮದಲ್ಲಿ ಗಾಯಕ ಸನ್ನಿ ಸಂತೆ ಎಂಬಾತ ಶ್ರೀ ಏಕವೀರಾ ದೇವಿಯ ಪ್ರಸಿದ್ಧ ಭಕ್ತಿಗೀತೆಯನ್ನು ವಿಡಂಬನೆ ಮಾಡಿದ್ದಾನೆ. ದೇವಿಯ ಹಾಡಿನ ಮೂಲ ಪದಗಳನ್ನು ಬದಲಾಯಿಸಿ, ಅದರಲ್ಲಿ ‘ಅಲ್ಲಾ ಮಾಝಾ ಕೋಣಾಲಾ ಪಾವಲಾ? ಪಾವಲಾ ರಫೀಕ್ ಯೇ, ರಫೀಕ್ ಯೇ ಮಾಂಡವಾಲಾ, ಪಾವಲಾ ಮಹಮ್ಮದ್ ಯೇ, ಮಹಮ್ಮದ್ ಯೇ ಮಾಂಡವಾಲಾ’ (ನನ್ನ ಅಲ್ಲಾ ಯಾರಿಗೆ ಒಲಿದ? ರಫೀಕ್ ಬಂದ, ಮಂಟಪಕ್ಕೆ ರಫೀಕ್ ಬಂದ; ಮಹಮ್ಮದ್ ಬಂದ, ಮಂಟಪಕ್ಕೆ ಮಹಮ್ಮದ್ ಬಂದ) ಎಂಬ ಪದಗಳನ್ನು ತುರಿಸಿದ್ದಾನೆ. ಹಾಡಿನ ಮಧ್ಯೆ ಆತ ಕೆಟ್ಟ ಭಾಷೆಯನ್ನು ಕೂಡ ಬಳಸಿದ್ದಾನೆ. ಈ ಹಾಡಿಗೆ ಕುಣಿಯುತ್ತಿದ್ದವರು ಕೂಡ ಹಿಂದೂಗಳೇ ಆಗಿದ್ದರು; ಆದರೆ ಯಾರೊಬ್ಬರೂ ಇದನ್ನು ವಿರೋಧಿಸಲಿಲ್ಲ. ಈ ಘಟನೆಯ ವಿರುದ್ಧ ‘ಆಗ್ರಿ-ಕೋಳಿ ಹಿಂದುತ್ವನಿಷ್ಠ ಸಂಘಟನೆಗಳು’ ಆಕ್ರಮಣಕಾರಿ ನಿಲುವು ತಳೆದ ನಂತರ ಗಾಯಕ ಕ್ಷಮೆಯಾಚಿಸಿದ್ದಾನೆ. “ಮುಂದೆ ನನ್ನಿಂದ ಇಂತಹ ತಪ್ಪು ಆಗುವುದಿಲ್ಲ. ನಾನು ಕ್ಷಮೆ ಕೇಳುತ್ತೇನೆ. ಯಾರಾದರೂ ಇಂತಹ ಹಾಡು ಹಾಡಲು ಬೇಡಿಕೆ ಇಟ್ಟರೂ ನಾನು ಹಾಡುವುದಿಲ್ಲ. ನನ್ನ ‘ಆರ್ಕೆಸ್ಟ್ರಾ’ ಬಂದ್ ಆದರೂ ಪರವಾಗಿಲ್ಲ” ಎಂದು ಆತ ಹೇಳಿದ್ದಾನೆ.
Singer Sunny Sante forced to apologise after parodying a devotional song of Shri Ekvira Devi – after strong objections by VHP and Bajrang Dal.
🚨 Reference to “Allah” added in a devotional song
🚨 Hindus seen dancing to the parody
How long will “apologise later” culture… pic.twitter.com/Y6KL5JwZUF
— Sanatan Prabhat (@SanatanPrabhat) May 3, 2026
ಈ ವಿಡಂಬನೆಯ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಚಾರ ಪ್ರಮುಖ್ ಮತ್ತು ಅಂಬರನಾಥ್ ಬಜರಂಗದಳದ ಸಹ-ಸಂಯೋಜಕ ಶುಭಂ ಸಾಳುಂಖೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ವ್ಯಕ್ತಿ ನನ್ನ ಕೈಗೆ ಸಿಕ್ಕರೆ ನಾನು ಅವನ ತಲೆ ಒಡೆಯುತ್ತೇನೆ; ಒಂದು ವೇಳೆ ಬೇರೆ ಯಾರಾದರೂ ಅವನನ್ನು ಹಿಡಿದು ತಲೆ ಒಡೆದರೆ, ಅವರ ಜಾಮೀನಿನ ಖರ್ಚನ್ನು ನಾನು ಭರಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
‘ಇದೆಲ್ಲವೂ ಕೇವಲ ಮೋಜು ಮಸ್ತಿಗಾಗಿ ನಡೆಯುತ್ತಿದೆ !(ಅಂತೆ)’ – ಗಾಯಕ ಸನ್ನಿ ಸಂತೆ
ಹಾಡನ್ನು ಹಾಡುವಾಗ ಗಾಯಕ ಸನ್ನಿ ಸಂತೆ ಎಲ್ಲರಲ್ಲೂ ವಿನಂತಿಸುತ್ತಿದ್ದ, “ಇದೆಲ್ಲವೂ ಮೋಜು ಮಸ್ತಿಗಾಗಿ ನಡೆಯುತ್ತಿದೆ. ಯಾರೂ ಇದರ ವಿಡಿಯೋ ಮಾಡಬೇಡಿ. ಇಲ್ಲದಿದ್ದರೆ ರಾದ್ಧಾಂತವಾಗುತ್ತದೆ, ನಮ್ಮ ಕಾರ್ಯಕ್ರಮ ನಿಂತು ಹೋಗುತ್ತದೆ.” (ಒಬ್ಬನೇ ಒಬ್ಬ ಹಿಂದೂ ಕೂಡ ಆ ಸಮಯದಲ್ಲಿ ಇದನ್ನು ಏಕೆ ವಿರೋಧಿಸಲಿಲ್ಲ? – ಸಂಪಾದಕರು)
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !