ಅಲಹಾಬಾದ್ ಉಚ್ಚ ನ್ಯಾಯಾಲಯದ ಮಹತ್ವದ ತೀರ್ಪು

ಪ್ರಯಾಗರಾಜ (ಉತ್ತರ ಪ್ರದೇಶ) – ಸಾರ್ವಜನಿಕ ಭೂಮಿಯನ್ನು ಯಾವುದೇ ಧಾರ್ಮಿಕ ಚಟುವಟಿಕೆಗಳಿಗಾಗಿ ಬಳಸುವಂತಿಲ್ಲ ಎಂದು ಹೇಳಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು, ಸಾರ್ವಜನಿಕ ಭೂಮಿಯಲ್ಲಿ ನಮಾಜ್ ಮಾಡುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
Allahabad High Court: Public land cannot be used “as a matter of right” for namaz or large religious gatherings.
Religious freedom is subject to public order & rights of others.
Court dismissed plea to offer namaz on public land in Sambhal (UP).
PC: @TheStatesmanLtd pic.twitter.com/ctyRO0cUea
— Sanatan Prabhat (@SanatanPrabhat) May 3, 2026
ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಇಕೌನಾ ನಿವಾಸಿ ಅಸೀನ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು ಈ ಕೆಳಗಿನ ಅಂಶಗಳನ್ನು ಸ್ಪಷ್ಟಪಡಿಸಿದೆ’
೧. ಸಾರ್ವಜನಿಕ ಭೂಮಿಯ ಮೇಲೆ ಎಲ್ಲರಿಗೂ ಸಮಾನ ಹಕ್ಕಿರುತ್ತದೆ. ಅದರ ಏಕಪಕ್ಷೀಯ ಬಳಕೆಯನ್ನು ಕಾನೂನು ಒಪ್ಪುವುದಿಲ್ಲ.
೨. ಈ ಹಿಂದಿನ ಮುನಾಜಿರ್ ಖಾನ್ ವಿರುದ್ಧ ಉತ್ತರ ಪ್ರದೇಶ ರಾಜ್ಯ ಮತ್ತು ಇತರ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯವು ಖಾಸಗಿ ಆವರಣದೊಳಗೆ ಸದ್ಭಾವನೆಯಿಂದ ಪ್ರಾರ್ಥನೆ ಮಾಡುವುದನ್ನು ರಕ್ಷಿಸುವಾಗ, ವೈಯಕ್ತಿಕ ಧಾರ್ಮಿಕ ಆಚರಣೆಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವಂತಿಲ್ಲವೆಂದು ಅಭಿಪ್ರಾಯಪಟ್ಟಿತ್ತು; ಆದರೆ, ಆ ತೀರ್ಪನ್ನು ಖಾಸಗಿ ಆವರಣದಲ್ಲಿ ಸಂಘಟಿತ ಅಥವಾ ನಿಯಮಿತ ಸಾಮೂಹಿಕ ಚಟುವಟಿಕೆಗಳಿಗೆ ಸಂಪೂರ್ಣ ವಿನಾಯಿತಿ ಇದೆ ಎಂದು ಅರ್ಥೈಸಲಾಗದು.
೩. ಧರ್ಮವನ್ನು ಪಾಲಿಸುವ ಹಕ್ಕು ಸಾರ್ವಜನಿಕ ವ್ಯವಸ್ಥೆಗೆ ಒಳಪಟ್ಟಿದ್ದು, ಇತರರ ಹಕ್ಕುಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಅದನ್ನು ಚಲಾಯಿಸುವಂತಿಲ್ಲ.
೪. ಒಂದು ವೇಳೆ ಆ ಭೂಮಿಯನ್ನು ಖಾಸಗಿ ಎಂದು ಪರಿಗಣಿಸಿದರೂ ಸಹ ಅರ್ಜಿದಾರನು ಕೇಳಿರುವ ರಿಯಾಯಿತಿಗೆ ಅರ್ಹನಲ್ಲ. ಲಭ್ಯವಿರುವ ದಾಖಲೆಗಳ ಪ್ರಕಾರ, ಅವನು ಯಾವುದೇ ಅಸ್ತಿತ್ವದಲ್ಲಿರುವ ಸಂಪ್ರದಾಯವನ್ನು ರಕ್ಷಿಸುತ್ತಿಲ್ಲ, ಬದಲಾಗಿ ಗ್ರಾಮದ ಮತ್ತು ಹೊರಗಿನ ವ್ಯಕ್ತಿಗಳನ್ನು ಸೇರಿಸಿಕೊಂಡು ನಿಯಮಿತವಾಗಿ ಸಾಮೂಹಿಕ ಸಭೆಗಳನ್ನು ನಡೆಸಲು ಅನುಮತಿ ಕೋರುತ್ತಿದ್ದಾನೆ.
೫. ಒಂದು ವೇಳೆ ಸಾರ್ವಜನಿಕ ಭೂಮಿಯನ್ನು ತಪ್ಪಾದ ರೀತಿಯಲ್ಲಿ ಹಸ್ತಾಂತರಿಸಿ, ಅಲ್ಲಿ ಜನಸಮೂಹವನ್ನು ಸೇರಿಸಿ ನಮಾಜ್ ಮಾಡಲು ಅನುಮತಿ ಕೋರುತ್ತಿದ್ದರೆ, ಅಂತಹ ಹಸ್ತಾಂತರವನ್ನು ಅಕ್ರಮ ಎಂದು ಪರಿಗಣಿಸಲಾಗುವುದು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”