
ವಾರಣಾಸಿ (ಉತ್ತರ ಪ್ರದೇಶ) – ವಾರಣಾಸಿಯಲ್ಲಿ ಶುಕ್ರವಾರದ ನಮಾಜ್‌ಗಿಂತ ಮೊದಲು ಜ್ಞಾನವಾಪಿ ಮತ್ತು ಕಾಶಿ ವಿಶ್ವನಾಥ ದೇವಾಲಯದ ಪ್ರವೇಶ ದ್ವಾರ ಸಂಖ್ಯೆ ೪ ರ ಹೊರಗೆ ಸ್ವಲ್ಪ ಸಮಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜ್ಞಾನವಾಪಿ ಸಮೀಪದ ಗೋಡೆಯೊಂದರ ಮೇಲೆ ಮಧುಬನಿ ಶೈಲಿಯ ಚಿತ್ರವನ್ನು ಬಿಡಿಸಲಾಗಿತ್ತು, ಇದರಿಂದಾಗಿ ಈ ಉದ್ವಿಗ್ನತೆ ಉಂಟಾಯಿತು; ಆದರೆ ಅಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಭೇಟಿಗೂ ಮುನ್ನ ಈ ಚಿತ್ರ ಬಿಡಿಸುವ ಕೆಲಸ ಮಾಡಲಾಗಿತ್ತು. ನಮಾಜ್ ಸಮಯದಲ್ಲಿ ಯಾವುದೇ ವಿರೋಧ ವ್ಯಕ್ತವಾಗದಿದ್ದರೂ ಮತ್ತು ನಮಾಜ್ ಶಾಂತಿಯುತವಾಗಿ ನಡೆದಿದ್ದರೂ, ಈ ಹಿಂದೆ ಇದ್ದ ಸ್ಥಿತಿಯನ್ನು ಬದಲಾಯಿಸುವ ಅಗತ್ಯವಿರಲಿಲ್ಲ ಎಂದು ಕೆಲವು ಜನರು ಹೇಳಿದರು. ಇಂತಹ ಕೆಲಸಗಳಿಂದ ಸಾಮಾಜಿಕ ಸೌಹಾರ್ದತೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಭೂಮಿ ವಕ್ಫ್‌ಗೆ ಸೇರಿದ್ದೆಂದು ದಾವೆ ಮಾಡುತ್ತಾ ದೂರು ದಾಖಲು
ವಾರಣಾಸಿಯ ‘ಮುಫ್ತಿ-ಎ-ಬನಾರಸ್’ ಮೌಲಾನಾ ಅಬ್ದುಲ್ ಬಾತಿನ ನೋಮಾನಿ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಭೂಮಿ ವಕ್ಫ್‌ಗೆ ಸೇರಿದ್ದಾಗಿದ್ದು ಮತ್ತು ಜ್ಞಾನವಾಪಿ ಸಮಿತಿಯ ಅನುಮತಿಯಿಲ್ಲದೆ ಅದರ ಮೇಲೆ ಚಿತ್ರ ಬಿಡಿಸಲಾಗಿದೆ ಎಂದು ಅವರು ಹೇಳಿದರು. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದರೂ ಯಾರೂ ಗಮನ ಹರಿಸಲಿಲ್ಲ. ಮುಫ್ತಿ ಅವರು ಲಿಖಿತ ದೂರನ್ನು ಸಲ್ಲಿಸಿದ್ದು, ಚಿತ್ರವನ್ನು ತೆಗೆದುಹಾಕಲು ಮತ್ತೆ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಪೊಲೀಸ್ ಉಪ ಆಯುಕ್ತ (ಕಾಶಿ) ಗೌರವ್ ಬನ್ಸ್ವಾಲ್ ಮಾತನಾಡಿ, ಈ ಚಿತ್ರದಲ್ಲಿ ಯಾವುದೇ ತಪ್ಪು ಅಥವಾ ಆಕ್ಷೇಪಾರ್ಹ ವಿಷಯವಿಲ್ಲ. ಇದು ಕೇವಲ ಒಂದು ಸಾಂಸ್ಕೃತಿಕ ಚಿತ್ರವಾಗಿದೆ. ಈ ಗೋಡೆಯು ಜ್ಞಾನವಾಪಿಯ ವ್ಯಾಪ್ತಿಗೆ ಬರುವುದಿಲ್ಲ. ಯಾರಾದರೂ ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶ್ರೀರಾಮನ ಮೇಲಿನ ಆಘಾತ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ