
ಲಂಡನ್ (ಬ್ರಿಟನ್) – ಇರಾನ್ ಮೇಲಿನ ದಾಳಿಗಳಿಗೆ ಅಮೆರಿಕ ಮತ್ತು ಇಸ್ರೇಲ್ ತಡೆ ನೀಡಿವೆ; ಆದರೆ ಈ ಯುದ್ಧದಲ್ಲಿ ಇರಾನ್ ಹಾನಿಗೊಳಗಾದಂತೆ, ಅಮೆರಿಕದ ಸೈನಿಕ ತಾಣಗಳಿಗೂ ಭಾರಿ ಹಾನಿಯಾಗಿದೆ. ಈ ಕುರಿತು ‘ಸಿಎನ್ಎನ್’ (ಕೇಬಲ್ ನ್ಯೂಸ್ ನೆಟ್‌ವರ್ಕ್) ಸುದ್ದಿ ಸಂಸ್ಥೆಯು ಉಪಗ್ರಹ ಚಿತ್ರಗಳು ಮತ್ತು ಪ್ರತ್ಯಕ್ಷ ದೃಶ್ಯಗಳನ್ನು ಬಳಸಿ ಪ್ರಸಾರ ಮಾಡಿದ ವರದಿಯ ಪ್ರಕಾರ, ಅಮೆರಿಕದ ಶಸ್ತ್ರಾಸ್ತ್ರಗಳೊಂದಿಗೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಭಾಗಶಃ ಅಥವಾ ಪೂರ್ಣವಾಗಿ ಧ್ವಂಸಗೊಳಿಸುವಲ್ಲಿ ಇರಾನ್ ಯಶಸ್ವಿಯಾಗಿದೆ.
Iran Strikes Back: Heavy Damage to US Bases Across Middle East
CNN report reveals that Iran’s counter-attacks caused significant damage to US military infrastructure across the region.
🚨 16 US bases in 8 countries reportedly hit – including Kuwait, Qatar, Bahrain, Saudi Arabia… pic.twitter.com/nlJYhgJygY
— Sanatan Prabhat (@SanatanPrabhat) May 2, 2026
೧. ಇರಾನ್ ನೆರೆಯ ಅರಬ್ ದೇಶಗಳಲ್ಲಿನ ಅಮೆರಿಕದ ಸೈನಿಕ ತಾಣಗಳನ್ನು ಗುರಿಯಾಗಿಸುವ ನೀತಿಯನ್ನು ಅನುಸರಿಸಿತ್ತು. ಅದರಲ್ಲಿ ಕುವೈತ್, ಕತಾರ್, ಬಹರೈನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ೮ ದೇಶಗಳಲ್ಲಿನ ಕನಿಷ್ಠ ೧೬ ಸೈನಿಕ ತಾಣಗಳಿಗೆ ಭಾರಿ ಹಾನಿಯಾಗಿದೆ.
೨. ಕುವೈತ್‌ನಲ್ಲಿರುವ ‘ಕ್ಯಾಂಪ್ ಬ್ಯುರಿಂಗ್’ ಎಂಬ ಅಮೆರಿಕದ ಸೈನಿಕ ತಾಣವು ಯುದ್ಧ ಆರಂಭವಾಗುವ ಮೊದಲು ಸೈನಿಕರಿಂದ ಮತ್ತು ಅವರ ವಿವಿಧ ಚಟುವಟಿಕೆಗಳಿಂದ ಗಿಜಿಗುಡುತ್ತಿತ್ತು. ಅದು ಈಗ ಶಾಂತವಾಗಿದೆ, ಅಲ್ಲಿ ಯಾರೂ ಇಲ್ಲ.
೩. ಕತಾರ್‌ನಲ್ಲಿರುವ ‘ಅಲ್ ಉದೈದ್’ ವಾಯುಪಡೆಯ ತಾಣದ ಮೇಲೆ ಎರಡು ಬಾರಿ ದಾಳಿ ಮಾಡಲಾಗಿದೆ. ಇಲ್ಲಿನ ಯುದ್ಧ ಕಕ್ಷದಿಂದ ಅಮೆರಿಕವು ೨೯ ದೇಶಗಳೊಂದಿಗೆ ಸಂಪರ್ಕದಲ್ಲಿರುತ್ತಿತ್ತು. ಇರಾನ್‌ನ ಆಕ್ರಮಣದಲ್ಲಿ ಈ ತಾಣಕ್ಕೂ ಗಮನಾರ್ಹ ಹಾನಿಯಾಗಿದೆ. ಈ ಕಕ್ಷವನ್ನು ಈಗ ಸ್ಥಳಾಂತರಿಸಲಾಗಿದೆ.
೪. ಕುವೈತ್‌ನಲ್ಲಿರುವ ‘ಕ್ಯಾಂಪ್ ಅರಿಫಜಾನ್’ ತಾಣದ ಮೇಲೆ ನಡೆದ ಇರಾನ್ ಆಕ್ರಮಣದಲ್ಲಿ ಡೇಟಾ (ಮಾಹಿತಿ) ರವಾನಿಸಲು ಅತ್ಯಗತ್ಯವಾದ ಅನೇಕ ‘ರಡಾರ್ ಡೋಮ್’ಗಳು ಧ್ವಂಸಗೊಂಡಿವೆ. ಇದರಿಂದ ವೈಮಾನಿಕ ರಕ್ಷಣೆಗಾಗಿ ಅಗತ್ಯವಿರುವ ಅತ್ಯಾಧುನಿಕ ರಡಾರ್ ವ್ಯವಸ್ಥೆಗೆ ಭಾರಿ ಹಾನಿಯಾಗಿದೆ.
೫. ಉಪಗ್ರಹ ಚಿತ್ರಗಳ ಪ್ರಕಾರ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮಾಡಿರುವುದು ಕಂಡುಬರುತ್ತಿದೆ. ಅದರಲ್ಲಿ ಅಮೆರಿಕದ ವಾಯುಪಡೆಯ ತಾಣಗಳಲ್ಲಿ ದೊಡ್ಡ ಹೊಂಡಗಳು ಬಿದ್ದಿದ್ದು ಕಟ್ಟಡಗಳಿಗೆ ಹಾನಿಯಾಗಿದೆ. ಯುದ್ಧ ವಿಮಾನಗಳು ಮತ್ತು ಇತರ ಶಸ್ತ್ರಾಸ್ತ್ರ ಸಾಮಗ್ರಿಗಳು ನಾಶವಾಗಿವೆ ಅಥವಾ ಅವುಗಳಿಗೆ ಭಾರಿ ಹಾನಿಯಾಗಿದೆ.
೬. ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ವ್ಯಕ್ತಿಯೊಬ್ಬರು ‘ಸಿಎನ್ಎನ್’ಗೆ ತಿಳಿಸುತ್ತಾ, ನಾನು ಇಂತಹ ಹಾನಿಯನ್ನು ಈ ಮೊದಲು ಎಂದೂ ನೋಡಿಲ್ಲ. ಗುರಿಗಳ ಮೇಲೆ ವೇಗವಾಗಿ ಮತ್ತು ನಿಖರವಾಗಿ ಆಕ್ರಮಣ ಮಾಡಲು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಹೇಳಿದರು.
೭. ಇರಾನ್ ಸೌದಿ ಅರೇಬಿಯಾದ ‘ಪ್ರಿನ್ಸ್ ಸುಲ್ತಾನ್’ ತಾಣದ ಮೇಲೆ ಮಾಡಿದ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ‘ಇ-೩ ಸೆಂಟ್ರಿ ಎಡಬ್ಲ್ಯೂಎಸಿಎಸ್’ ಎಂಬ ಯುದ್ಧ ವಿಮಾನಕ್ಕೆ ಹಾನಿಯಾಗಿದೆ. ಇದರಿಂದ ಅಮೆರಿಕಕ್ಕೆ ೫ ಲಕ್ಷ ಡಾಲರ್ (೪ ಕೋಟಿ ೭೪ ಲಕ್ಷ ೫೫ ಸಾವಿರ ರೂಪಾಯಿಗಳು) ನಷ್ಟವಾಗಿದೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’