ಅಲಹಾಬಾದ್ ಉಚ್ಚ ನ್ಯಾಯಾಲಯದ ಮಹತ್ವದ ನಿರೀಕ್ಷಣೆ:
ಉತ್ತರಪ್ರದೇಶ ಸರಕಾರಕ್ಕೆ ೨ ಲಕ್ಷ ರೂಪಾಯಿ ದಂಡ

ಪ್ರಯಾಗರಾಜ್ (ಉತ್ತರಪ್ರದೇಶ) – ಗೋಮಾಂಸವೆಂದು ಖಚಿತಪಡಿಸಿಕೊಳ್ಳದೆಯೇ ವಾಹನವನ್ನು ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಉತ್ತರಪ್ರದೇಶ ಸರಕಾರಕ್ಕೆ ೨ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ. ‘ಉತ್ತರಪ್ರದೇಶ ಗೋವಂಶ ಹತ್ಯೆ ಪ್ರತಿಬಂಧಕ ಕಾಯ್ದೆ’ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಉಚ್ಚ ನ್ಯಾಯಾಲಯವು ಈ ತೀರ್ಪು ನೀಡಿದೆ. ಈ ಕಾಯ್ದೆಯಡಿ ವಾಹನಗಳನ್ನು ಜಪ್ತಿ ಮಾಡುವ ಕುರಿತು ನ್ಯಾಯಾಲಯವು ಸ್ಪಷ್ಟಪಡಿಸಿದ್ದು, ವಶಪಡಿಸಿಕೊಳ್ಳಲಾದ ಮಾಂಸವು ಗೋಮಾಂಸವೇ ಆಗಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗುವವರೆಗೆ ಸಂಬಂಧಿತ ವಾಹನವನ್ನು ಜಪ್ತಿ ಮಾಡುವುದು ಕಾನೂನು ಬಾಹಿರ ಮತ್ತು ಮನಬಂದಂತೆ ವರ್ತಿಸಿದಂತಾಗುತ್ತದೆ ಎಂದು ಹೇಳಿದೆ. ಈ ಅಂಶವನ್ನು ಗಮನಿಸಿದ ನ್ಯಾಯಾಲಯವು ವಾಹನ ಜಪ್ತಿ ಮಾಡುವ ಆಡಳಿತದ ಆದೇಶವನ್ನು ರದ್ದುಗೊಳಿಸಿತು. ಅರ್ಜಿದಾರ ಮಹಮ್ಮದ್ ಚಾಂದ್ ಅವರಿಗಾದ ಹಾನಿಯ ಪರಿಹಾರವಾಗಿ ಸರಕಾರವು ೨ ಲಕ್ಷ ರೂಪಾಯಿ ದಂಡ ಪಾವತಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ನ್ಯಾಯಮೂರ್ತಿ ಸಂದೀಪ ಜೈನ್ ಅವರ ಪೀಠವು ಈ ಆದೇಶ ನೀಡಿದೆ.
ಏನಿದು ಪ್ರಕರಣ?
ಅಕ್ಟೋಬರ್ ೧೮, ೨೦೨೪ ರಂದು ಬಾಗಪತ್ ಜಿಲ್ಲೆಯಲ್ಲಿ ನಿರ್ಬಂಧಿತ ಮಾಂಸವನ್ನು (ಗೋಮಾಂಸ) ಸಾಗಿಸಲು ವಾಹನ ಬಳಸಲಾಗುತ್ತಿದೆ ಎಂಬ ಸಂಶಯದ ಮೇಲೆ ಪೊಲೀಸರು ಅರ್ಜಿದಾರರ ವಾಹನವನ್ನು ಜಪ್ತಿ ಮಾಡಿದ್ದರು.
ಜೂನ್ ೧೬, ೨೦೨೫ ರಂದು ಜಿಲ್ಲಾ ದಂಡಾಧಿಕಾರಿಗಳು ಆ ವಾಹನವನ್ನು ಜಪ್ತಿ (ಖಾಯಂ ಆಗಿ ವಶಕ್ಕೆ ಪಡೆಯುವ) ಮಾಡುವಂತೆ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಮಹಮ್ಮದ್ ಚಾಂದ್ ಅವರು ಜಪ್ತಿ ಆದೇಶದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ವಾಹನವೇ ಅವರ ಜೀವನೋಪಾಯಕ್ಕಿರುವ ಏಕೈಕ ಮಾರ್ಗವಾಗಿದೆ ಎಂಬುದನ್ನು ನ್ಯಾಯಾಲಯವು ಒಪ್ಪಿಕೊಂಡಿದೆ. ಸರಕಾರಿ ಆಡಳಿತವು ಕಳೆದ ೧೮ ತಿಂಗಳುಗಳಿಂದ ಈ ವಾಹನವನ್ನು ಕಾನೂನುಬಾಹಿರವಾಗಿ ವಶದಲ್ಲಿರಿಸಿಕೊಂಡಿದ್ದರಿಂದ ಅರ್ಜಿದಾರರು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಯಿತು. ಆದ್ದರಿಂದ ಮುಂದಿನ ಏಳು ದಿನಗಳಲ್ಲಿ ೨ ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!