ಅಧ್ಯಾತ್ಮ ಜಗತ್ತಿನ ದಿವ್ಯ ವಿಭೂತಿ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೆಗೆದುಕೊಂಡ ಬಹಿರಂಗ ಸಭೆಗಳು !

’ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಮ ಕೃಪೆ ಮತ್ತು ಮಾರ್ಗದರ್ಶನದಿಂದ ೧೯೯೯ ರಲ್ಲಿ ’ಸನಾತನ ಸಂಸ್ಥೆ’ಯ ಸ್ಥಾಪನೆಯಾಯಿತು. ಅದಕ್ಕಿಂತ ಮೊದಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ’ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಅಡಿಯಲ್ಲಿ ಸಮಾಜದಲ್ಲಿ ಪ್ರವಚನ, ಅಭ್ಯಾಸವರ್ಗ, ಸತ್ಸಂಗ ಮುಂತಾದ ಮಾಧ್ಯಮಗಳಿಂದ ಅಧ್ಯಾತ್ಮ ಪ್ರಚಾರ ಮಾಡಿದರು. ಅವುಗಳಲ್ಲಿ ಪ್ರಮುಖ ಮಾಧ್ಯಮವೆಂದರೆ ಬಹಿರಂಗ ಸಭೆಗಳು ! ೧೯೯೬ ರಿಂದ ೧೯೯೯ ರ ಅವಧಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳ ಜಿಲ್ಲೆಗಳಲ್ಲಿ ಸುಮಾರು ೨೫೦ ಕ್ಕೂ ಹೆಚ್ಚು ಬಹಿರಂಗ ಸಭೆಗಳನ್ನು ಆಯೋಜಿಸಿದ್ದರು. ಸಾವಿರಾರು ಜನರು ಇದರ ಲಾಭ ಪಡೆದರು. ಇವರಲ್ಲಿ ಅನೇಕರು ಅಂದಿನಿಂದಲೇ ಸಾಧನೆ ಆರಂಭಿಸಿದರು.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಬಹಿರಂಗ ಸಭೆಗಳನ್ನು ಆಯೋಜಿಸುವುದರ ಹಿಂದಿನ ಉದ್ದೇಶ !

‘ಆನಂದಪ್ರಾಪ್ತಿ’ಯು ನಮ್ಮ ಜೀವನದ ಮುಖ್ಯ ಗುರಿ ಆಗಿದೆ. ’ಆನಂದವನ್ನು ಹೇಗೆ ಪಡೆಯಬೇಕು ?’ ಇದನ್ನು ಅಧ್ಯಾತ್ಮಶಾಸ್ತ್ರ ಮಾತ್ರ ಕಲಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳುತ್ತಾರೆ, ”ಅಧ್ಯಾತ್ಮದ ವಿಷಯವು ಇಂದು ಜನರಿಗೆ ಅರ್ಥವಾಗದಿದ್ದರೂ, ಅದು ಬೀಜ ರೂಪದಲ್ಲಿ ಅವರ ಅಂತರ್ಮನವನ್ನು ತಲುಪುತ್ತದೆ. ಇದರ ಪರಿಣಾಮದಿಂದ ಇಂದಲ್ಲದಿದ್ದರೆ ನಾಳೆ, ಈ ಜನ್ಮದಲ್ಲಿ  ಇಲ್ಲದಿದ್ದರೆ ಮುಂದಿನ ಜನ್ಮದಲ್ಲಿ ಇಲ್ಲಿ ಉಪಸ್ಥಿತರಿರುವ ಜನರ ಸಾಧನೆಯು ಆರಂಭವಾಗಿಯೇ ಆಗುತ್ತದೆ.” ಸಭೆಯಲ್ಲಿ ವಿಷಯವನ್ನು ವಿವರಿಸುವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಲ್ಲಿ ನೆರೆದಿದ್ದ ಜನಸಮೂಹದ ಮನಸ್ಸಿನ ಭಾವನೆಯನ್ನು ಅರಿತು ಮಾರ್ಗದರ್ಶನ ಮಾಡುತ್ತಿದ್ದರು. ಇದರಿಂದ ಎಲ್ಲರ ಮನಸ್ಸಿನಲ್ಲಿದ್ದ ಸಾಧನೆಗೆ ಸಂಬಂಧಿಸಿದ ಸಂದೇಹಗಳ ನಿವಾರಣೆಯಾಗುತ್ತಿತ್ತು.  ಇದರ ಫಲವಾಗಿ ಅಂದು ಸಭೆಯಲ್ಲಿ ಉಪಸ್ಥಿತರಿದ್ದ ಅನೇಕ ಜಿಜ್ಞಾಸುಗಳು ಇಂದು ಸಾಧಕರಾಗಿದ್ದಾರೆ. ಇದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನಡೆಸಿದ ಸಭೆಗಳ ಫಲವೇ ಆಗಿದೆ.

ಶ್ರೀ. ಯೊಗೇಶ ಜಲತಾರೆ

೨. ಬಹಿರಂಗ ಸಭೆಗಳ ಪೂರ್ವಸಿದ್ಧತೆ

೨ ಅ. ಬಟ್ಟೆಯ ಫಲಕಗಳನ್ನು ತಯಾರಿಸುವುದು : ಸಭೆಯ ಪ್ರಚಾರದ ಮುಖ್ಯ ಅಂಗವೆಂದರೆ ಅಲ್ಲಲ್ಲಿ ಹಾಕಲಾಗುತ್ತಿದ್ದ ಬಟ್ಟೆಯ ಫಲಕಗಳು (ಬ್ಯಾನರ್). ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಈ ಫಲಕಗಳನ್ನು ಸಾಧಕರಿಂದಲೇ ತಯಾರಿಸಿ ಕೊಳ್ಳುತ್ತಿದ್ದರು. ಈ ಸೇವೆಯು ಮುಂಬಯಿ ಸೇವಾಕೇಂದ್ರದಲ್ಲಿ ನಡೆಯುತ್ತಿತ್ತು.

೨ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಫಲಕಗಳಮೇಲೆ ’ಸ್ಕ್ರೀನ್ ಪ್ರಿಂಟಿಂಗ್’ ಮಾಡುವುದನ್ನು ಕಲಿಸಿದರು :  ಅಧ್ಯಾತ್ಮ ಪ್ರಸಾರದ ಕಾರ್ಯವು ಹೆಚ್ಚಾದ ಮೇಲೆ ಈ ಸೇವೆಯನ್ನು ’ಸ್ಕ್ರೀನ್ ಪ್ರಿಂಟಿಂಗ್’ ಮೂಲಕ ಮಾಡಲು ನಿರ್ಧರಿಸಲಾಯಿತು. ಈ ಸೇವೆಯು ಸಾಧಕರಿಗೆ ಸಂಪೂರ್ಣ ಹೊಸದಾಗಿತ್ತು. ’ಫಲಕಕ್ಕಾಗಿ ಯಾವ ರೀತಿಯ ಬಟ್ಟೆಯನ್ನು ಆರಿಸಬೇಕು ? ಅದರ ಬಣ್ಣ ಯಾವುದು ಇರಬೇಕು ? ಅದರ ಮೇಲೆ ಬರೆಯಲು ಯಾವ ಬಣ್ಣದ ಮಸಿಯನ್ನು ಬಳಸಬೇಕು ?’ಎಂಬ ಈ ವಿಷಯಗಳನ್ನು ಗುರುದೇವರು ಕಲಿಸಿಕೊಟ್ಟರು. ಫಲಕದಲ್ಲಿ ಬರೆಯುವ ಬರಹಕ್ಕಾಗಿ ಮೊದಲು ಒಂದು ’ಸ್ಟೆನ್ಸಿಲ್’ ತಯಾರಿಸ ಬೇಕಾಗುತ್ತಿತ್ತು. ನಂತರ ಆ ’ಸ್ಟೆನ್ಸಿಲ್’ಅನ್ನು ಮರದ ಚೌಕಟ್ಟಿನಲ್ಲಿ ಅಳವಡಿಸಲಾಗುತ್ತಿತ್ತು. ಬಳಿಕ ಅದನ್ನು ’ಡಾರ್ಕ್ ರೂಮ್’ನಲ್ಲಿ ’ಡೆವಲಪ್’ ಮಾಡಬೇಕಾಗುತ್ತಿತ್ತು. ’ಸ್ಕ್ರೀನ್ ಪ್ರಿಂಟಿಂಗ್’ನ ಸಂಪೂರ್ಣ ಸೇವೆಯಲ್ಲಿ ಇದು ಅತ್ಯಂತ ಕಠಿಣ ಸೇವೆಯಾಗಿತ್ತು. ಮುದ್ರಣದ (ಪ್ರಿಂಟಿಂಗ್) ಸಮಯದಲ್ಲಿ ಬಟ್ಟೆಯ ಮೇಲೆ ಬೇರೆಲ್ಲೂ ಬಣ್ಣ ತಾಗದಂತೆ ಬಹಳ ಎಚ್ಚರಿಕೆ ವಹಿಸಬೇಕಾಗಿತ್ತು; ಏಕೆಂದರೆ ಫಲಕದ ಮೇಲೆ ಬಣ್ಣದ ಒಂದು ಕಲೆ ಬಿದ್ದರೂ ಆ ಫಲಕವನ್ನು ಬಳಸಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ಈ ಸೇವೆಯನ್ನು ಸಂಪೂರ್ಣ ಸೂಕ್ಷ್ಮತೆಯಿಂದ ಮಾಡಬೇಕಾಗುತ್ತಿತ್ತು.

೨ ಇ. ಇಡೀ ರಾತ್ರಿ ಫಲಕ ಮುದ್ರಣದ ಸೇವೆಯನ್ನು ಮಾಡಿದರೂ ಸಾಧಕರಿಗೆ ಆಯಾಸವಾಗುತ್ತಿರಲಿಲ್ಲ : ಫಲಕಗಳ ಮುದ್ರಣದ ಮಾಧ್ಯಮದಿಂದ ’ಸೇವೆಯನ್ನು ಪರಿಪೂರ್ಣ ಮತ್ತು ಉತ್ಕೃಷ್ಟವಾಗಿ ಮಾಡುವುದು ಹೇಗೆ’ ಎಂಬುದನ್ನು ಗುರುದೇವರು ನಮಗೆ ಕಲಿಸಿದರು. ಇದರಿಂದ ನಮ್ಮಲ್ಲಿ ಏಕಾಗ್ರತೆ ಮತ್ತು ಸಾಧನೆಯ ತಳಮಳ ನಿರ್ಮಾಣವಾಯಿತು. ಸುಮಾರು ೩ ವರ್ಷಗಳ ಕಾಲ ಅನೇಕ ಸಾಧಕರು ಹಗಲಿನಲ್ಲಿ ಕೆಲಸ (ನೌಕರಿ) ಮತ್ತು ಇಡೀ ರಾತ್ರಿ ಫಲಕಗಳ ಮುದ್ರಣದ ಸೇವೆಯನ್ನು ಮಾಡುತ್ತಿದ್ದರು, ಆದರೂ ಅವರಿಗೆ ಎಂದಿಗೂ ಸುಸ್ತು ಅಥವಾ ಆಯಾಸವಾಗುತ್ತಿರಲಿಲ್ಲ. ಇದರಿಂದ ಅರ್ಥವೆಂದರೆ, ’ಗುರುದೇವರೇ ನಮಗೆ ಸೇವೆಯನ್ನು ಕಲಿಸುತ್ತಿದ್ದರು ಮತ್ತು ಆ ಸೇವೆ ಮಾಡಲು ನಮಗೆ ಶಕ್ತಿ ಹಾಗೂ ಚೈತನ್ಯವನ್ನೂ ಅವರೇ ನೀಡುತ್ತಿದ್ದರು’. ಗುರುದೇವರು ನಮ್ಮ ಮೇಲೆ ಮಾಡಿರುವ ಕೃಪೆಯನ್ನು ಶಬ್ದಗಳಲ್ಲಿ ವರ್ಣಿಸುವುದು ಕಠಿಣವಾಗಿದೆ.

೩. ಬಹಿರಂಗ ಸಭೆಯ ಪ್ರಚಾರದ ಕೌಶಲ್ಯಪೂರ್ಣ ನಿಯೋಜನೆ !

ಪ್ರತಿಯೊಂದು ಜಿಲ್ಲೆಯಲ್ಲಿ ಬಹಿರಂಗ ಸಭೆಯ ಕೆಲವು ತಿಂಗಳ ಮೊದಲೇ ಸಭೆಯ ನಿಯೋಜನೆ ಆರಂಭವಾಗುತ್ತಿತ್ತು. ಯಾವುದಾದರೂ ಜಿಲ್ಲೆಯಲ್ಲಿ ಸಾಧಕರ ಸಂಖ್ಯೆ ಕಡಿಮೆಯಿದ್ದರೆ, ಪಕ್ಕದ ಜಿಲ್ಲೆಯ ಸಾಧಕರು ಆ ಜಿಲ್ಲೆಗೆ ಬಂದು ಸೇವೆಯನ್ನು ಮಾಡುತ್ತಿದ್ದರು. ಈ ಮಾಧ್ಯಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಲ್ಲಿ ’ಸಂಘಟಿತಭಾವ ಮತ್ತು ಕುಟುಂಬ ಭಾವನೆಯನ್ನು’ ಹೆಚ್ಚಿಸಿದರು.

೩ ಅ. ಸಭೆಯ ಪ್ರಚಾರಕ್ಕಾಗಿ ಬಳಸಿದ ಇತರ ಮಾಧ್ಯಮಗಳು

೧. ಆಮಂತ್ರಣ ಪತ್ರಿಕೆಯನ್ನು ನೀಡುವ ಮೂಲಕವೂ ಜನರನ್ನು ಬಹಿರಂಗ ಸಭೆಗೆ ಆಹ್ವಾನಿಸಲಾಗುತ್ತಿತ್ತು. ಈ ಆಮಂತ್ರಣ ಪತ್ರಿಕೆಯಲ್ಲಿ ಮುಂದೆ ನಿಗದಿಯಾಗಿರುವ ಕೆಲವು ಬಹಿರಂಗ ಸಭೆಗಳ ಮಾಹಿತಿಯನ್ನು ನೀಡಲಾಗುತ್ತಿತ್ತು. ಇದರಿಂದ ಜನರು ತಮ್ಮ ಪರಿಚಿತರಿಗೆ ಸಭೆಯ ಬಗ್ಗೆ ತಿಳಿಸಲು ಸಾಧ್ಯವಾಗುತ್ತಿತ್ತು.

೨. ವಿವಿಧ ಸ್ಥಳಗಳಲ್ಲಿ ಭಿತ್ತಿಪತ್ರ ಅಂಟಿಸುವುದು

೩. ಸಾಧಕರ ಮನೆಯ ತಡೆಗೋಡೆಗಳ(ಕಂಪೌಂಡ) ಮೇಲೆ ಮತ್ತು ರಸ್ತೆಬದಿಯ ಸೇತುವೆಗಳ ಮೇಲೆ ಸಭೆಯ ಮಾಹಿತಿ ಬರೆಯುವುದು.

೪. ಸ್ಥಳೀಯ ದಿನಪತ್ರಿಕೆಗಳಲ್ಲಿ ಬಹಿರಂಗ ಸಭೆಯ ಆಮಂತ್ರಣ ಪ್ರಕಟಿಸಿ ಅದರ ಮೂಲಕ ಜಿಜ್ಞಾಸುಗಳನ್ನು ಆಹ್ವಾನಿಸುವುದು.

೫. ಇಡೀ ಊರಲ್ಲಿ ಧ್ವನಿವರ್ಧಕಗಳ ಮೂಲಕ ಸಭೆಯ ಪ್ರಸಾರ ಮಾಡುವುದು.

೬. ಸಾಧಕ ಮೆರವಣಿಗೆ ಆಯೋಜಿಸಿ ಅದರ ಮೂಲಕವೂ ಬಹಿರಂಗ ಸಭೆಯ ಪ್ರಚಾರವನ್ನು ಮಾಡಲಾಗುತ್ತಿತ್ತು. ಮೆರವಣಿಗೆಯಿಂದ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಗೆ  ಯಾವುದೇ ತೊಂದರೆಯಾಗದಂತೆ ಸಂಪೂರ್ಣ ಎಚ್ಚರಿಕೆ ವಹಿಸಲಾಗುತ್ತಿತ್ತು. ಸಭೆಯ ದಿನದಂದು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಮೆರವಣಿಗೆಯನ್ನೂ ನಡೆಸಲಾಗುತ್ತಿತ್ತು. ಈ ಮೆರವಣಿಗೆಗಳಿಂದ ಸಂಚಾರಕ್ಕೆ ಎಂದಿಗೂ ಅಡ್ಡಿಯಾಗುತ್ತಿರಲಿಲ್ಲ. ಇದರಿಂದ ’ಬಹಿರಂಗ ಸಭೆಗೆ ಜಿಜ್ಞಾಸುಗಳನ್ನು ಆಹ್ವಾನಿಸಲು ಎಷ್ಟು ಕಷ್ಟಪಡಲಾಗುತ್ತಿತ್ತು’ ಎಂಬುದು ತಿಳಿಯುತ್ತದೆ. ಇಂದು ಸಾಮಾಜಿಕ ಮಾಧ್ಯಮಗಳ (ಸೋಶಿಯಲ್ ಮೀಡಿಯಾ) ಮೂಲಕ ನಾವು ಈ ಪ್ರಚಾರವನ್ನು ಸುಲಭವಾಗಿ ಮಾಡಬಹುದು; ಆದರೆ ೨೫ ವರ್ಷಗಳ ಹಿಂದೆ ಆಧುನಿಕ ಸೌಲಭ್ಯಗಳ ಕೊರತೆಯಿದ್ದರೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಭೆಯನ್ನು ಆಯೋಜಿಸಿದ ಮತ್ತು ಪ್ರಚಾರ ಮಾಡಿದ ರೀತಿ ಅವರ ಆಯೋಜನಾ ಕೌಶಲ್ಯವನ್ನು ತೋರಿಸುತ್ತದೆ.

– ಶ್ರೀ. ಯೋಗೇಶ ಜಲತಾರೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೫.೨೦೨೪)