ಇರಾನ್ ನಿಂದ ವಿಶ್ವಸಂಸ್ಥೆಯಲ್ಲಿ ದೂರು

ಟೆಹರಾನ್/ವಾಷಿಂಗ್ಟನ್ – ಇರಾನ್ ಅಮೆರಿಕದ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ನೀಡಿದೆ. ‘ಟೆಹರಾನ್ ಟೈಮ್ಸ್’ ವರದಿಯ ಪ್ರಕಾರ, ಇರಾನ್ ಅಧಿಕೃತ ಪತ್ರದ ಮೂಲಕ ಅಮೆರಿಕದ ಮೇಲೆ ಅನೇಕ ಗಂಭೀರ ಆರೋಪಗಳನ್ನು ಮಾಡಿದೆ. ಇರಾನಿ ನೌಕೆಗಳನ್ನು ಜಪ್ತಿ ಮಾಡುವ ಮೂಲಕ ಅಮೆರಿಕ ‘ಕಡಲ್ಗಳ್ಳತನ’ ಮಾಡಿದೆ ಎಂದು ಇರಾನ್ ಆರೋಪಿಸಿದೆ. ಅಮೆರಿಕದ ಈ ಕೃತ್ಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಖಂಡಿಸಬೇಕು ಮತ್ತು ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇರಾನ್ ಆಗ್ರಹಿಸಿದೆ.
ವಿಶ್ವಸಂಸ್ಥೆಯಲ್ಲಿನ ಇರಾನ್ ರಾಯಭಾರಿ ಅಮೀರ್ ಸಯೀದ್ ಇರವಾನಿ ಮಾತನಾಡಿ, ಅಮೆರಿಕ ‘ಮೆಜೆಸ್ಟಿಕ್’ ಮತ್ತು ‘ಟಿಫಾನಿ’ ಎಂಬ ಎರಡು ನೌಕೆಗಳನ್ನು ವಶಪಡಿಸಿಕೊಂಡಿದೆ. ಇದರ ಜೊತೆಗೆ ಇರಾನ್ ನ ಸುಮಾರು ೩೮ ಲಕ್ಷ ಬ್ಯಾರೆಲ್ ತೈಲವನ್ನೂ ಜಪ್ತಿ ಮಾಡಿದೆ. ಈ ಕ್ರಮವು ಅಕ್ರಮವಾಗಿದ್ದು, ಇದು ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಮಾಡಿದ ಹಸ್ತಕ್ಷೇಪವಾಗಿದೆ. ಅಮೆರಿಕದ ಈ ವರ್ತನೆಯು ವಿಶ್ವಸಂಸ್ಥೆಯ ಸನ್ನದು, ಅಂತರಾಷ್ಟ್ರೀಯ ಕಾನೂನುಗಳು ಮತ್ತು ಸಮುದ್ರ ಕಾನೂನುಗಳ ಉಲ್ಲಂಘನೆಯಾಗಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕದಿದ್ದರೆ, ಇದು ಅಪಾಯಕಾರಿ ಮುನ್ಸೂಚನೆಯಾಗಲಿದ್ದು, ಜಾಗತಿಕ ಮಟ್ಟದಲ್ಲಿ ಕಾನೂನು ದುರ್ಬಲಗೊಳ್ಳಲಿದೆ ಎಂದು ಇರವಾನಿ ಎಚ್ಚರಿಸಿದ್ದಾರೆ.
ಇರಾನ್ ನ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಟ್ರಂಪ್!
ಇರಾನ್ ನ ಅಣು ಕಾರ್ಯಕ್ರಮದ ಮೇಲಿನ ನಿರ್ಬಂಧವನ್ನು ಕೈಬಿಟ್ಟರೆ, ಹಾರ್ಮುಜ್ ಜಲಸಂಧಿಯನ್ನು ಮತ್ತೆ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಇರಾನ್ ಅಮೆರಿಕಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅಧ್ಯಕ್ಷ ಟ್ರಂಪ್ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman