ಅಮೆರಿಕನ್ ಕಾಂಗ್ರೆಸ್ ನಲ್ಲಿ ಹಿಂದೂ ದೇವಾಲಯಗಳು ಮತ್ತು ಇತರ ಪ್ರಾರ್ಥನಾ ಮಂದಿರಗಳ ರಕ್ಷಣೆಗಾಗಿ ಮಸೂದೆ ಮಂಡನೆ!

ವಾಷಿಂಗ್ಟನ್ (ಅಮೆರಿಕ) – ಅಮೆರಿಕದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ, ಅಮೆರಿಕದ ಸಂಸತ್ತಿನಲ್ಲಿ ಹೊಸ ಮಸೂದೆಯನ್ನು ಮಂಡಿಸಲಾಗಿದೆ. ‘ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಅಡ್ಡಿಯಾಗದಂತೆ ರಕ್ಷಣೆ ನೀಡುವ ಕಾಯಿದೆ’ ಎಂದು ಈ ಮಸೂದೆಯ ಹೆಸರಾಗಿದ್ದು, ಹಿಂದೂ ದೇವಾಲಯಗಳು ಮತ್ತು ಇತರ ಪ್ರಾರ್ಥನಾ ಮಂದಿರಗಳನ್ನು ದಾಳಿಗಳಿಂದ ರಕ್ಷಿಸುವುದು, ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ. ಈ ಕಾನೂನಿನ ಅಡಿಯಲ್ಲಿ, ಯಾವುದೇ ಪ್ರಾರ್ಥನಾ ಮಂದಿರದ ೧೦೦ ಅಡಿಗಳ ಸುತ್ತಳತೆಯಲ್ಲಿರುವ ವ್ಯಕ್ತಿಗಳಿಗೆ ಬೆದರಿಕೆ ಹಾಕುವುದು, ಅವರ ಕೆಲಸಕ್ಕೆ ಅಡ್ಡಿಪಡಿಸುವುದು ಅಥವಾ ಕಿರುಕುಳ ನೀಡುವುದು, ಇದನ್ನು ಸಂಘಟಿತ ಅಪರಾಧವೆಂದು ಪರಿಗಣಿಸಲಾಗುವುದು. (ಭಾರತದಲ್ಲೂ ಇಂತಹ ಕಾನೂನನ್ನು ಜಾರಿಗೆ ತರಬೇಕು! – ಸಂಪಾದಕರು)
ಈ ಮಸೂದೆಯನ್ನು ಟಾಮ್ ಸುಯೋಜಿ ಅವರು ಮಂಡಿಸಿದ್ದು, ಮ್ಯಾಕ್ಸ್ ಮಿಲ್ಲರ್ ಅವರು ಇದನ್ನು ಬೆಂಬಲಿಸಿದ್ದಾರೆ. ‘ಹಿಂದೂ ಅಮೆರಿಕನ್ ಫೌಂಡೇಶನ್’ ಹೇಳುವ ಪ್ರಕಾರ, ಇಡೀ ಅಮೆರಿಕಾದಲ್ಲಿ ಹಿಂದೂ ದೇವಾಲಯಗಳನ್ನು ಗುರಿಯಾಗಿಸುವುದು, ಅವುಗಳನ್ನು ಅಪವಿತ್ರಗೊಳಿಸುವುದು ಮುಂತಾದ ಘಟನೆಗಳಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ. ಈ ಘಟನೆಗಳಿಂದಾಗಿ ಹಿಂದೂ ಭಕ್ತರಲ್ಲಿ ಅಸುರಕ್ಷತೆಯ ಭಾವನೆ ಮೂಡಿದೆ. ಈ ಮಸೂದೆಯು ಸಂತ್ರಸ್ತರಿಗೆ ಸಿವಿಲ್ ಮೊಕದ್ದಮೆಗಳನ್ನು ಹೂಡುವ ಅಧಿಕಾರವನ್ನೂ ನೀಡುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಅಮೆರಿಕದಲ್ಲಿ ದ್ವೇಷಪೂರಿತ ಅಪರಾಧಗಳು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿವೆ. ಹಿಂದೂ, ಯಹೂದಿ, ಮುಸಲ್ಮಾನ ಮತ್ತು ಸಿಖ್ ಮುಂತಾದ ಧಾರ್ಮಿಕ ಸಮುದಾಯಗಳು ತಮ್ಮ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿವೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation