
ಟೆಲ್ ಅವಿವ (ಇಸ್ರೇಲ್) – ಇಸ್ರೇಲ್ ಲೆಬನಾನ್ ನಲ್ಲಿರುವ ಹಿಜ್ಬುಲ್ಲಾದ ೨ ಕಿಲೋಮೀಟರ್ ಉದ್ದದ ೨ ಸುರಂಗಗಳನ್ನು ಧ್ವಂಸಗೊಳಿಸಿದೆ. ಲೆಬನಾನ್ ನಲ್ಲಿನ ಉಗ್ರಗಾಮಿ ಸಿದ್ಧಾಂತದ ರಾಜಕೀಯ ಪಕ್ಷವಾದ ಹಿಜ್ಬುಲ್ಲಾ ವು ಇರಾನ್ ನ ಸಹಾಯದಿಂದ ಇಸ್ರೇಲ್ ನ ಗಡಿಯಿಂದ ಕೇವಲ ೧೦ ಕಿಲೋಮೀಟರ್ ದೂರದಲ್ಲಿರುವ ಕಂತಾರಾ ನಗರದಲ್ಲಿ ಈ ಸುರಂಗಗಳನ್ನು ನಿರ್ಮಿಸಿತ್ತು. ಇದಕ್ಕಾಗಿ ಅವರು ಬರೋಬ್ಬರಿ ೧೦ ವರ್ಷಗಳನ್ನು ತೆಗೆದುಕೊಂಡಿದ್ದರು. ಏಪ್ರಿಲ್ ೨೮ ರಂದು ಇಸ್ರೇಲ್ ೪೫೦ ಟನ್ ಸ್ಫೋಟಕಗಳನ್ನು ಬಳಸಿಕೊಂಡು ಈ ಸುರಂಗಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ.
ಇದುವರೆಗೆ ಪತ್ತೆಹಚ್ಚಲಾದ ಸುರಂಗಗಳ ಪೈಕಿ ಇವು ಎಲ್ಲಕ್ಕಿಂತ ಉದ್ದದ ಸುರಂಗಗಳಾಗಿದ್ದವು ಎಂದು ಇಸ್ರೇಲಿ ಸೈನ್ಯವು ಸ್ಪಷ್ಟಪಡಿಸಿದೆ. ಈ ಸುರಂಗಗಳು ೨೫ ಮೀಟರ್ ಆಳದವರೆಗೆ ವಿಸ್ತರಿಸಿದ್ದವು.
ಹಿಜ್ಬುಲ್ಲಾದ ನಾಶವಾದ ಸುರಂಗಗಳ ಮುಖ್ಯ ಉದ್ದೇಶ!
ಹಿಜ್ಬುಲ್ಲಾದ ಒಂದು ವಿಶೇಷ ಪಡೆಯಾದ ‘ರದ್ವಾನ್ ಫೋರ್ಸಸ್’ನ ಉಗ್ರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಡಗಿಸಿಡುವುದು ಮತ್ತು ಅವರಿಗೆ ಶಸ್ತ್ರಾಸ್ತ್ರಗಳು, ಸಂವಹನ ಸಾಧನಗಳು ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಪೂರೈಸುವುದು, ಇದರಿಂದಾಗಿ ಇಸ್ರೇಲ್ ನ ವಿವಿಧ ನಗರಗಳ ಮೇಲೆ ದಾಳಿ ನಡೆಸಲು ಅವರಿಗೆ ಸಾಧ್ಯವಾಗಬೇಕೆಂಬುದು ಈ ಸುರಂಗಗಳನ್ನು ನಿರ್ಮಿಸಿರುವುದರ ಹಿಂದಿನ ಮುಖ್ಯ ಉದ್ದೇಶವಾಗಿತ್ತು ಎಂದು ಇಸ್ರೇಲಿ ಸೇನೆಯು ತಿಳಿಸಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation