
ನವ ದೆಹಲಿ – ದ್ವೇಷ ಭಾಷಣದ (‘ಹೇಟ್ ಸ್ಪೀಚ್’) ಪ್ರಕರಣಗಳ ಕುರಿತು ಮಹತ್ವದ ವೀಕ್ಷಣೆಯನ್ನು ದಾಖಲಿಸಿದ ಸುಪ್ರೀಂ ಕೋರ್ಟ್, ಯಾವುದೇ ಅಪರಾಧಕ್ಕೆ ಶಿಕ್ಷೆಯನ್ನು ನಿಗದಿಪಡಿಸುವುದು ಸಂಪೂರ್ಣವಾಗಿ ಶಾಸಕಾಂಗದ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ. ದ್ವೇಷ ಭಾಷಣದ ಘಟನೆಗಳನ್ನು ತಡೆಯಲು ದೇಶದಲ್ಲಿ ಈಗಾಗಲೇ ಇರುವ ಕಾನೂನುಗಳು ಸಾಕಷ್ಟಿವೆ ಮತ್ತು ಯಾವುದೇ ಕಾನೂನಿನ ಕೊರತೆಯಿಲ್ಲ, ಹೀಗಾಗಿ ನ್ಯಾಯಾಂಗದ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಸಂವಿಧಾನದಲ್ಲಿ ಅಳವಡಿಸಲಾಗಿರುವ ‘ಅಧಿಕಾರ ವಿಭಜನೆ’ ತತ್ವದ ಪ್ರಕಾರ ನ್ಯಾಯಾಂಗವು ತನ್ನ ಮಿತಿಗಳಲ್ಲೇ ಉಳಿದು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂಬ ಸ್ಪಷ್ಟನೆಯನ್ನೂ ನ್ಯಾಯಾಲಯ ನೀಡಿದೆ.
ನ್ಯಾಯಮೂರ್ತಿ ವಿಕ್ರಮ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ ಮೆಹ್ತಾ ಅವರ ಪೀಠವು,
1. ಯಾವುದೇ ಅಪರಾಧವನ್ನು ವ್ಯಾಖ್ಯಾನಿಸುವುದು ಮತ್ತು ಅದಕ್ಕೆ ಶಿಕ್ಷೆಯನ್ನು ವಿಧಿಸುವುದು ಸಂಪೂರ್ಣವಾಗಿ ಶಾಸಕಾಂಗದ ಅಧಿಕಾರ ವ್ಯಾಪ್ತಿಗೆ ಬರುತ್ತದೆ.
2. ನ್ಯಾಯಾಲಯಗಳಿಗೆ ಕೇವಲ ಕಾನೂನನ್ನು ವ್ಯಾಖ್ಯಾನಿಸುವ ಅಧಿಕಾರ ಮಾತ್ರ ಇದೆ; ಅವು ಸ್ವತಃ ಹೊಸ ಕಾನೂನುಗಳನ್ನು ಮಾಡಲು ಸಾಧ್ಯವಿಲ್ಲ, ಹಾಗೆಯೇ ಕಾನೂನು ಮಾಡುವಂತೆ ಶಾಸಕಾಂಗವನ್ನು ಒತ್ತಾಯಿಸಲೂ ಸಾಧ್ಯವಿಲ್ಲ.
3. ಭವಿಷ್ಯದಲ್ಲಿ ಒಂದು ವೇಳೆ ಹೊಸ ನೀತಿ ಅಥವಾ ಕಾನೂನಿನ ಅಗತ್ಯ ಉದ್ಭವಿಸಿದರೆ, ಅಂತಹ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರವು ಸಂಪೂರ್ಣವಾಗಿ ಶಾಸಕಾಂಗದ ವಿವೇಚನೆಗೆ ಬಿಟ್ಟಿದ್ದಾಗಿರುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!