ಸನಾತನ ಸಂಸ್ಥೆಯ ಮೇಲೆ ಮಾನಹಾನಿಕರ ಸುಳ್ಳು ಆರೋಪ ಮಾಡುವವರ ವಿರುದ್ಧ ಪೊಲೀಸರಿಗೆ ದೂರು!

ಫೋಂಡಾ (ಗೋವಾ) – ಕಳೆದ ಕೆಲವು ದಿನಗಳಿಂದ ಶ್ರೀ. ಗೌತಮ್ ಖಟ್ಟರ್ ಅವರು ಫ್ರಾನ್ಸಿಸ್ ಕ್ಸೇವಿಯರ್ ಬಗ್ಗೆ ನೀಡಿದ ಹೇಳಿಕೆಯಿಂದ ಗೋವಾದಲ್ಲಿ ಉದ್ದೇಶಪೂರ್ವಕವಾಗಿ ಧಾರ್ಮಿಕ ಉದ್ವಿಗ್ನತೆಯನ್ನು ಸೃಷ್ಟಿಸಲಾಗುತ್ತಿದೆ. ಈ ವಿವಾದದ ಮರೆಯಲ್ಲಿ ಕೆಲವು ಸಮಾಜಘಾತುಕರು ಸನಾತನ ಸಂಸ್ಥೆಯನ್ನು ವಿನಾಕಾರಣ ಗುರಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವದಲ್ಲಿ ಸನಾತನ ಸಂಸ್ಥೆಯು ಒಂದು ಆಧ್ಯಾತ್ಮಿಕ ಸಂಘಟನೆ ಎಂದು ಉಚ್ಚ ನ್ಯಾಯಾಲಯವು ಹೇಳಿದ್ದು, ಸಂಸ್ಥೆಯ ವಿರುದ್ಧ ಯಾವುದೇ ಪುರಾವೆಗಳಿಲ್ಲದ ಕಾರಣ ನಿಷೇಧದ ಬೇಡಿಕೆಯನ್ನೂ ತಿರಸ್ಕರಿಸಿದೆ. ಹೀಗಿದ್ದರೂ ಕೇವಲ ಹಿಂದೂ ಧರ್ಮವನ್ನು ದ್ವೇಷಿಸಲು ಸಂಸ್ಥೆಯ ಮಾನಹಾನಿ ಮಾಡುವುದು ನ್ಯಾಯಾಲಯದ ನಿಂದನೆಯಾಗಿದೆ. ಈ ಭಾರತ ವಿರೋಧಿ ಮಾನಸಿಕತೆಯ ವಿರುದ್ಧ ಸನಾತನ ಸಂಸ್ಥೆಯು ಫೋಂಡಾ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದು, ಸನಾತನ ಸಂಸ್ಥೆಯ ಮಾನಹಾನಿ ಮಾಡುವ ಸಮಾಜಘಾತುಕರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಅವರು ಮಾಹಿತಿ ನೀಡಿದ್ದಾರೆ.
ಫ್ರಾನ್ಸಿಸ್ ಕ್ಸೇವಿಯರ್ ಅವರ ಕಥಿತ ಅವಮಾನ ಪ್ರಕರಣದ ನೆಪದಲ್ಲಿ ಕೆಲವು ವ್ಯಕ್ತಿಗಳು ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹಾಗೂ ವಿಡಿಯೋಗಳ ಮೂಲಕ ಸನಾತನ ಸಂಸ್ಥೆ, ಹಿಂದೂ ಧರ್ಮ, ಸಾಧು-ಸಂತರು ಮತ್ತು ಹಿಂದೂಗಳ ಶ್ರದ್ಧಾಕೇಂದ್ರಗಳ ಮಾನಹಾನಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸನಾತನ ಸಂಸ್ಥೆಯ ಅಧಿಕೃತ ನಿಲುವು ಈ ಕೆಳಗಿನಂತಿದೆ.
1. ಅನೇಕ ವಿಡಿಯೋಗಳು ಮತ್ತು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಲ್ಲಿ ಗೌತಮ್ ಖಟ್ಟರ್ ಅವರ ಕಾರ್ಯಕ್ರಮವನ್ನು ಸನಾತನ ಸಂಸ್ಥೆಯು ಆಯೋಜಿಸಿತ್ತು ಎಂದು ಹೇಳಿಕೊಳ್ಳಲಾಗಿದೆ. ಈ ಹೇಳಿಕೆಯು ಅಸತ್ಯವಾಗಿದೆ. ಆ ಕಾರ್ಯಕ್ರಮವನ್ನು ‘ಸನಾತನ ಧರ್ಮ ರಕ್ಷಾ ಸಮಿತಿ’ ಎಂಬ ಸಂಸ್ಥೆಯು ಆಯೋಜಿಸಿತ್ತು. ಕೇವಲ ದ್ವೇಷದ ಕಾರಣದಿಂದ ಸನಾತನ ಸಂಸ್ಥೆಯ ಹೆಸರನ್ನು ಈ ವಿವಾದಕ್ಕೆ ಎಳೆದು ಸಂಸ್ಥೆಯ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶಪೂರ್ವಕ ಪ್ರಯತ್ನ ಇದಾಗಿದೆ.
2. ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯವು ಎಲ್ಲಾ ಸಾಧಕರನ್ನು ಆರೋಪದಿಂದ ಖುಲಾಸೆಗೊಳಿಸಿದೆ.
3. ಖುದ್ದಾಗಿ ಕೇಂದ್ರ ಸರಕಾರವೇ ಸಂಸ್ಥೆಯ ವಿರುದ್ಧ ಪುರಾವೆಗಳಿಲ್ಲ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಈ ತೀರ್ಪುಗಳನ್ನು ಒಪ್ಪದವರಿಗೆ ಭಾರತೀಯ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದೇ ಹೇಳಬೇಕಾಗುತ್ತದೆ.
‘ವಿವಾ ಪೋರ್ಚುಗಲ್’ ಘೋಷಣೆ ಕೂಗುವ ಭಾರತ ದ್ವೇಷಿಗಳನ್ನು ಸನಾತನ ಸಂಸ್ಥೆಯು ತೀವ್ರವಾಗಿ ಖಂಡಿಸುತ್ತದೆ!
ಒಂದು ವಿಡಿಯೋದಲ್ಲಿ ‘ವಿವಾ ಗೋವಾ, ವಿವಾ ಪೋರ್ಚುಗಲ್’ (ಪೋರ್ಚುಗಲ್‌ಗೆ ಜಯವಾಗಲಿ) ಎಂಬ ಘೋಷಣೆಗಳನ್ನು ಕೂಗುವ ಮೂಲಕ ಪೋರ್ಚುಗೀಸ್ ಪರವಾದ ಮಾನಸಿಕತೆಯನ್ನು ವೈಭವೀಕರಿಸಲಾಗಿದೆ. ಇದರಿಂದ ಸನಾತನ ಸಂಸ್ಥೆಯನ್ನು ಟೀಕಿಸುವ ಇಂತಹ ಪ್ರವೃತ್ತಿಗಳ ನಿಷ್ಠೆಯು ಭರತಮಾತೆಯ ಮೇಲಲ್ಲ, ಬದಲಾಗಿ ವಿದೇಶಿ ಆಡಳಿತದ ಮೇಲಿದೆ ಎಂಬುದು ಸ್ಪಷ್ಟವಾಗುತ್ತದೆ. ಗೋವಾದಲ್ಲಿ ವಾಸಿಸುತ್ತಾ ಪೋರ್ಚುಗಲ್‌ಗೆ ಜೈಕಾರ ಹಾಕುವುದು ಭಾರತೀಯ ಸಾರ್ವಭೌಮತ್ವಕ್ಕೆ ಮಾಡಿದ ಘೋರ ಅಪಮಾನವಾಗಿದೆ.
ಫ್ರಾನ್ಸಿಸ್ ಕ್ಸೇವಿಯರ್ ನೆಪದಲ್ಲಿ ಸನಾತನ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ನಿಲ್ಲಿಸದಿದ್ದರೆ, ಸನಾತನ ಸಂಸ್ಥೆಯು ಅಂತಹ ಜನರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ನಾವು ಫೋಂಡಾ ಪೊಲೀಸ್ ಠಾಣೆಯಲ್ಲಿ ಗೋವಾದ ಸೆಬಿ ವಾಜ್ ಸೇರಿದಂತೆ ಇತರ ದೋಷಿ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದೇವೆ. ಅವರ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ