೨೬ ವರ್ಷಗಳ ಹಿಂದಿನ ಘರ್ಷಣೆಯ ಸೇಡು

ಮುಂಬಯಿ – ೧೯೯೯ರ ಎನ್ ಕೌಂಟರ್ ನಲ್ಲಿ ಹತನಾದ ಕುಖ್ಯಾತ ಗೂಂಡಾ ಸಾಧಿಕ್ ಕಾಲಿಯಾ ಸೋದರಳಿಯ ಸಾಧಿಕ್ ಜವಾರ್ (೨೯ ವರ್ಷ), ‘ನನ್ನ ಚಿಕ್ಕಪ್ಪನನ್ನು ಪೊಲೀಸರು ಕೊಂದರು, ಅದರಲ್ಲಿ ಇಕ್ಬಾಲ್ ಇಬ್ರಾಹಿಂ ಸೇಲಿಯಾ (೭೮ ವರ್ಷ) ಎಂಬುವವರ ಕೈವಾಡವಿತ್ತು’ ಎಂಬ ಕೋಪವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದನು. ಇದರ ಸೇಡಿಗಾಗಿ ಸಾಧಿಕ್ ಜವಾರ್, ಇಕ್ಬಾಲ್ ಇಬ್ರಾಹಿಂ ಸೇಲಿಯಾ ಎಂಬ ವೃದ್ಧನನ್ನು ಹತ್ಯೆ ಮಾಡಿದ್ದಾನೆ. ಪೊಲೀಸರು ಸಾದಿಕ್ ಜವಾರ್ ಮತ್ತು ಆತನ ಸಹಚರ ನೌಶಾದ್ ಮಿಥಾನಿ (೨೨ ವರ್ಷ) ಎಂಬುವವರನ್ನು ನಾಗಪುರದಲ್ಲಿ ಬಂಧಿಸಿದ್ದಾರೆ.
೧. ಇಕ್ಬಾಲ್ ಇಬ್ರಾಹಿಂ ಸೇಲಿಯಾ ಅವರು ತಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಕುಟುಂಬದ ಇತರ ಸದಸ್ಯರು ಹೊರಗಡೆ ಹೋಗಿರುವುದನ್ನು ಗಮನಿಸಿ ಅವಕಾಶ ಪಡೆದ ಇಬ್ಬರು ಯುವಕರು ಮನೆಯೊಳಗೆ ನುಗ್ಗಿದರು. ಹರಿತವಾದ ಆಯುಧದಿಂದ ಸೇಲಿಯಾ ಅವರ ಮೇಲೆ ಮನಬಂದಂತೆ ಇರಿದರು. ಇದರಿಂದ ಸೇಲಿಯಾ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಕೊಲೆಯ ನಂತರ ಆರೋಪಿಗಳು ಪರಾರಿಯಾದರು.
೨. ಇಕ್ಬಾಲ್ ಸೇಲಿಯಾ ಅವರು ಪೊಲೀಸರ ಮಾಹಿತಿದಾರರಾಗಿದ್ದರು ಎಂಬುದು ಸಾದಿಕ್ ಜವಾರ್ ನ ದೃಢ ನಂಬಿಕೆಯಾಗಿತ್ತು. ಅವರ ಮಾಹಿತಿಯಿಂದಲೇ ೧೯೯೯ರಲ್ಲಿ ಸಾದಿಕ್ ಕಾಲಿಯಾ ಘರ್ಷಣೆಯಲ್ಲಿ ಹತನಾಗಿದ್ದನು. ಹಲವು ವರ್ಷಗಳಿಂದ ಈ ಸೇಡನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಜವಾರ್, ಸೇಲಿಯಾ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದನು.
೩. ಸಾದಿಕ್ ಕಾಲಿಯಾ ೯೦ರ ದಶಕದಲ್ಲಿ ಮುಂಬಯಿಯ ಕಾಲಾಚೌಕಿ ಪ್ರದೇಶದ ಪಾದಚಾರಿ ಮಾರ್ಗದಲ್ಲಿ ಬೂಟುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದನು. ಸುಲಿಗೆಯ ವಿವಾದದಿಂದ ಆತ ಚೋಟಾ ಶಕೀಲ್ ಗ್ಯಾಂಗ್ ನ ಸಂಪರ್ಕಕ್ಕೆ ಬಂದನು ಮತ್ತು ಅಪರಾಧ ಜಗತ್ತಿನಲ್ಲಿ ಸಕ್ರಿಯನಾದನು. ನವೆಂಬರ್ ೧೯೯೯ರಲ್ಲಿ ಒಂದು ದೊಡ್ಡ ಅಪರಾಧ ಮಾಡಲು ಸಿದ್ಧತೆಯಲ್ಲಿದ್ದಾಗ ಪೊಲೀಸರು ಆತನನ್ನು ಘರ್ಷಣೆಯಲ್ಲಿ ಹೊಡೆದುರುಳಿಸಿದ್ದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!