ಯುವತಿ ತನ್ನ ನಿಶ್ಚಿತಾರ್ಥದ ಹಿಂದಿನ ದಿನವೇ ಇಬ್ರಾಹಿಂ ಜೊತೆ ಪರಾರಿ!

ಕುಟುಂಬಸ್ಥರಿಂದ ಲವ್ ಜಿಹಾದ್ ಆರೋಪ

ಹಾವೇರಿ – ಇಲ್ಲಿ ಯುವತಿಯೊಬ್ಬಳು ತನ್ನ ನಿಶ್ಚಿತಾರ್ಥದ ಹಿಂದಿನ ದಿನವೇ ಇಬ್ರಾಹಿಂ ಜೊತೆ ಓಡಿಹೋದ ಘಟನೆ ನಡೆದಿದೆ. ಹುಡುಗಿಯ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಲು ಕುಟುಂಬಸ್ಥರು ಭರ್ಜರಿ ಸಿದ್ಧತೆ ನಡೆಸಿದ್ದರು. ಮೇ ೧೧ ರಂದು ಮದುವೆಯ ದಿನಾಂಕವೂ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ ಹಿಂದಿನ ರಾತ್ರಿಯೇ ಈ ಯುವತಿ ಓಡಿಹೋಗಿದ್ದಾಳೆ. ನರೇಗಲ್ ಗ್ರಾಮದ ನಿವಾಸಿ ಇಬ್ರಾಹಿಂ ನೆಗಳೂರು ಎಂಬಾತನೇ ಅವಳನ್ನು ಅಪಹರಿಸಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಇದು ಲವ್ ಜಿಹಾದ್ ಪ್ರಕರಣ ಎಂದು ಹುಡುಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಹಿಂದುತ್ವವಾದಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಬಂಧ ಅಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಪಾದಕೀಯ ನಿಲುವು

ಹಿಂದೂ ಹುಡುಗಿಯರ ಮುಗ್ಧತೆಯ ದುರುಪಯೋಗ ಪಡೆದುಕೊಂಡೇ ಲವ್ ಜಿಹಾದಿಗಳು ಈ ರೀತಿ ಅವರ ಜೀವನವನ್ನು ನಾಶ ಮಾಡುತ್ತಿದ್ದಾರೆ. ಇಂತಹ ಘಟನೆಗಳನ್ನು ತಡೆಯಬೇಕಾದರೆ, ಲವ್ ಜಿಹಾದಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಅವಕಾಶವಿರುವ ಕಾನೂನೇ ಬೇಕು. ಇಂತಹ ಕಾನೂನು ಕೇವಲ ಹಿಂದೂ ರಾಷ್ಟ್ರದಲ್ಲಿ ಮಾತ್ರ ಸಾಧ್ಯ ಎಂಬುದೂ ಅಷ್ಟೇ ಸತ್ಯ!