ಮೂಲತಃ ಮುಂಬಯಿ ನಿವಾಸಿ

ಇಸ್ತಾಂಬುಲ್ (ತುರ್ಕಿಯೆ)/ಮುಂಬಯಿ – ಕುಖ್ಯಾತ ಭಯೋತ್ಪಾದಕ ಮತ್ತು ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ದಾವೂದ್ ಇಬ್ರಾಹಿಂನ ಆಪ್ತ ಸಹಚರ ಹಾಗೂ ಮಾದಕವಸ್ತು ಕಳ್ಳಸಾಗಾಣಿಕೆದಾರ ಸಲೀಂ ಡೋಲಾನನ್ನು ತುರ್ಕಿಯೆಯಲ್ಲಿ ಬಂಧಿಸಲಾಗಿದೆ. ತುರ್ಕಿಯೆಯ ಗುಪ್ತಚರ ಸಂಸ್ಥೆ ಮತ್ತು ಇಂಟರ್‌ಪೋಲ್ (ಜಾಗತಿಕ ಪೊಲೀಸ್ ಸಂಸ್ಥೆ) ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ಸೆರೆಹಿಡಿಯಲಾಗಿದೆ. ಡೋಲಾ ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ನಕಲಿ ಗುರುತಿನ ಚೀಟಿಯ ಆಧಾರದ ಮೇಲೆ ತುರ್ಕಿಯೆಯಲ್ಲಿ ಅಡಗಿಕೊಂಡಿದ್ದನು. ಈ ಕ್ರಮದಿಂದಾಗಿ ಜಾಗತಿಕ ಮಾದಕವಸ್ತು ಜಾಲಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ.
🚨 Major Crackdown on D-Company! 🚨
Salim Dola, a key associate of Dawood Ibrahim and the suspected kingpin behind a global synthetic drug network, has been arrested in Türkiye.
The Mumbai native was reportedly hiding under a fake UAE identity. A massive blow to the D-Company’s… pic.twitter.com/y4rjJ9NqJ4
— Sanatan Prabhat (@SanatanPrabhat) April 25, 2026
ಸಲೀಂ ಡೋಲಾ ಜಾಗತಿಕ ‘ಸಿಂಥೆಟಿಕ್ ಡ್ರಗ್ಸ್’ (ಪ್ರಯೋಗಾಲಯದಲ್ಲಿ ತಯಾರಿಸಿದ ಮಾದಕವಸ್ತುಗಳು) ಜಾಲದ ಪ್ರಮುಖ ಸಂಚುಕೋರನೆಂದು ಪರಿಗಣಿಸಲಾಗಿದೆ. ಈ ಜಾಲವು ದಾವೂದ್ ಇಬ್ರಾಹಿಂನ ‘ಡಿ-ಕಂಪನಿ’ ಅಪರಾಧಿ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದೆ. ಡೋಲಾ ವಿರುದ್ಧ ಭಾರತದ ‘ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ, 1985’ (NDPS Act) ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಸಲೀಂ ಡೋಲಾ ಮೂಲತಃ ಮುಂಬಯಿ ನಿವಾಸಿಯಾಗಿದ್ದು, ಮುಂಬಯಿ ಕ್ರೈಮ್ ಬ್ರಾಂಚ್ ಈತನನ್ನು ‘ವಾಂಟೆಡ್’ (ತಲೆಮರೆಸಿಕೊಂಡಿರುವ ಅಪರಾಧಿ) ಎಂದು ಘೋಷಿಸಿತ್ತು. ಡೋಲಾ ಒಂದು ಕಾಲದಲ್ಲಿ ದಾವೂದ್‌ನ ಸಹಚರನಾಗಿದ್ದನು, ಅಲ್ಲದೆ ಆತ ಕುಖ್ಯಾತ ಮಾದಕವಸ್ತು ಮಾಫಿಯಾ ಇಕ್ಬಾಲ್ ಮಿರ್ಚಿಗಾಗಿ ಕೂಡ ಕೆಲಸ ಮಾಡುತ್ತಿದ್ದನು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ