ಅನೇಕ ಹಿಂದೂಗಳ ಮತಾಂತರ ಮಾಡಿದ್ದ ದಾವೂದ್
೬ ರಾಜ್ಯಗಳಿಂದ ತಂಡದ ೧೩ ಸದಸ್ಯರ ಬಂಧನ

ಆಗ್ರಾ (ಉತ್ತರ ಪ್ರದೇಶ) – ಆಗ್ರಾದ ಇಬ್ಬರು ಹಿಂದೂ ಸಹೋದರಿಯರನ್ನು ಮತಾಂತರ ಮಾಡಿದ ಮುಸ್ಲಿಮರ ತಂಡದ ಮುಖ್ಯ ಸೂತ್ರಧಾರನ ಮೇಲೆ ಕ್ರಮ ಆರಂಭವಾಗಿದೆ. ಸಯ್ಯದ್ ದಾವೂದ್ ಎಂಬುದು ಈತನ ಹೆಸರಾಗಿದ್ದು, ಮಧ್ಯಪ್ರದೇಶದ ಭೋಪಾಲ್ ನಲ್ಲಿರುವ ಅವನ ಮನೆಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ದಾವೂದ್ ಪ್ರಸ್ತುತ ಕೆನಡಾದಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿರುವುದರಿಂದ ಅವನನ್ನು ಅಲ್ಲಿಂದ ಮರಳಿ ತರಲು ಸಿದ್ಧತೆಗಳು ನಡೆಯುತ್ತಿವೆ. ದಾವೂದ್ ಕೆನಡಾದಿಂದ ಭಾರತದಲ್ಲಿನ ಈ ತಂಡಕ್ಕೆ ಆರ್ಥಿಕ ನೆರವು ಮತ್ತು ಸಂಪನ್ಮೂಲಗಳನ್ನು ಪೂರೈಸುತ್ತಿದ್ದ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
೧. ೨೦೨೫ ರಲ್ಲಿ ಆಗ್ರಾದ ಇಬ್ಬರು ಸಹೋದರಿಯರು ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ತು. ನಂತರ ಆ ಇಬ್ಬರನ್ನೂ ಮತಾಂತರ ಮಾಡಿ ದೊಡ್ಡ ತಂಡವೊಂದರಲ್ಲಿ ಸೇರಿಸಿಕೊಂಡಿರುವುದು ಬೆಳಕಿಗೆ ಬಂದಿತು.
೨. ಒಂದು ದೊಡ್ಡ ಜಾಲವೇ ಈ ಕಾರ್ಯದಲ್ಲಿ ತೊಡಗಿರುವುದು ನಂತರ ತಿಳಿದುಬಂದಿತು. ಇದರ ಬೆನ್ನಲ್ಲೇ ದೆಹಲಿ, ಜೈಪುರ, ಮುಜಫರ್ ನಗರ ಮತ್ತು ಗೋವಾದಿಂದ ಈ ತಂಡದ ೧೩ ಸದಸ್ಯರನ್ನು ಬಂಧಿಸಲಾಯಿತು. ಅಲ್ಲದೆ, ಇಬ್ಬರೂ ಸಹೋದರಿಯರನ್ನು ರಕ್ಷಿಸಿ ಅವರ ಕುಟುಂಬದವರಿಗೆ ಒಪ್ಪಿಸಲಾಯಿತು.
೩. ಮೂಲತಃ ಭೋಪಾಲ್ ನಿವಾಸಿಯಾದ ಸಯ್ಯದ್ ದಾವೂದ್ ಈ ತಂಡಕ್ಕೆ ವಿದೇಶದಿಂದ ಹಣ ಪೂರೈಸುವ ಕೆಲಸ ಮಾಡುತ್ತಿದ್ದನು. ಈತನಿಗೆ ಪಾಕಿಸ್ತಾನದ ಕೆಲವು ವ್ಯಕ್ತಿಗಳೊಂದಿಗೆ ಸಂಪರ್ಕವಿರುವುದು ಕೂಡ ತಿಳಿದುಬಂದಿದೆ. ಈತ ಕೆನಡಾದಲ್ಲಿ ಕುಳಿತು ಈ ತಂಡಕ್ಕೆ ಸೂಚನೆಗಳನ್ನು ನೀಡುತ್ತಿದ್ದನು.
ಕೆನಡಾದಿಂದ ಹಸ್ತಾಂತರಕ್ಕೆ ಸಿದ್ಧತೆ
ಪೊಲೀಸ್ ಉಪಾಧೀಕ್ಷಕ ಆದಿತ್ಯ ಸಿಂಗ್ ಅವರು ಈ ಬಗ್ಗೆ ಮಾತನಾಡಿ, ಸಯ್ಯದ್ ದಾವೂದ್ ಈ ತಂಡದ ಮುಖ್ಯ ಆರ್ಥಿಕ ಸಹಾಯಕನಾಗಿದ್ದು, ಪ್ರಸ್ತುತ ಅವನು ಕೆನಡಾದಲ್ಲಿ ಅಡಗಿದ್ದಾನೆ. ಅವನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ, ಈಗ ರಾಯಭಾರ ಕಚೇರಿಯ ಮೂಲಕ ಅವನನ್ನು ಭಾರತಕ್ಕೆ ತರಲು ಅಗತ್ಯ ಕಾನೂನು ಪ್ರಕ್ರಿಯೆಯನ್ನು ಆರಂಭಿಸಲಾಗುವುದು, ಎಂದು ತಿಳಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!