
ಒಂಟಾರಿಯೊ (ಕೆನಡಾ) – ವುಡ್ ಸ್ಟಾಕ್ ನಗರದಲ್ಲಿ ವೃದ್ಧ ಸಿಖ್ ವ್ಯಕ್ತಿಯೊಬ್ಬರ ಮೇಲೆ ಜನಾಂಗೀಯ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಯುವಕನನ್ನು ಬಂಧಿಸಿದ್ದಾರೆ. ಈ ಘಟನೆಯು ಏಪ್ರಿಲ್ ೨೨ ರಂದು ನಡೆದಿದೆ. ಸಂಬಂಧಿತ ವೃದ್ಧ ವ್ಯಕ್ತಿಯು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಬುರ್ಖಾಧಾರಿ ಯುವಕನೊಬ್ಬನು ಅವರನ್ನು ತಡೆದಿದ್ದಾನೆ. ಅವನು ವೃದ್ಧರನ್ನು ತಳ್ಳಿ, ‘ನೀನು ನನ್ನ ದೇಶದಲ್ಲಿ ಏನು ಮಾಡುತ್ತಿದ್ದೀಯ?’ ಎಂದು ಪ್ರಶ್ನಿಸಿದ್ದಾನೆ. ಆ ಯುವಕನು ನಿರಂತರವಾಗಿ ಜನಾಂಗೀಯ ನಿಂದನೆ ಮಾಡುತ್ತಿದ್ದನು. ಇಂತಹ ಸಂದರ್ಭದಲ್ಲಿಯೂ ವೃದ್ಧ ವ್ಯಕ್ತಿಯು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದರು ಹಾಗೂ ತಕ್ಷಣವೇ ಪೊಲೀಸರಿಗೆ ದೂರವಾಣಿ ಕರೆ ಮಾಡಿದರು. ಪೊಲೀಸರನ್ನು ನೋಡುತ್ತಿದ್ದಂತೆಯೇ ಆರೋಪಿ ಯುವಕನು ತಪ್ಪಿಸಿಕೊಳ್ಳಲು ಶಾಲೆಯ ಗೋಡೆಯನ್ನು ಹಾರಿ ಒಳಗೆ ಪ್ರವೇಶಿಸಿದನು; ಆದರೆ ಪೊಲೀಸರು ಅವನನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ