ಅಶ್ಲೀಲ ವಿಡಿಯೋ ಮತ್ತು ಸಂದೇಶ ಕಳುಹಿಸಿ ದೈಹಿಕ ಸಂಪರ್ಕಕ್ಕಾಗಿ ಒತ್ತಡ!

ಮುಂಬಯಿ – ಸಂಸ್ಥೆಯೊಂದರಲ್ಲಿ ‘ಟೆಲಿಕಾಲರ್’ (ಗ್ರಾಹಕರ ಸೇವೆಗಾಗಿ ಸಂಸ್ಥೆಯಲ್ಲಿರುವ ಸಂಪರ್ಕ ವ್ಯವಸ್ಥೆ) ಆಗಿ ಕೆಲಸ ಮಾಡುತ್ತಿದ್ದ ಅಶ್ರಫ್ ಸಿದ್ದಿಕಿ (ವಯಸ್ಸು 19 ವರ್ಷ) ತನ್ನ ಸಹೋದ್ಯೋಗಿ ಹಿಂದೂ ಯುವತಿಯ ಮೊಬೈಲ್‌ಗೆ ಅಶ್ಲೀಲ ವಿಡಿಯೋ ಮತ್ತು ಸಂದೇಶಗಳನ್ನು ಕಳುಹಿಸುವ ಮೂಲಕ ದೈಹಿಕ ಸಂಪರ್ಕ ಹೊಂದಲು ಅವಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾನೆ. ಈ ಪ್ರಕರಣದಲ್ಲಿ ಯುವತಿ ನೀಡಿದ ದೂರಿನ ಮೇರೆಗೆ ಅಗ್ರಿಪಾಡಾ ಪೊಲೀಸರು ಅಶ್ರಫ್ ಸಿದ್ದಿಕಿಯನ್ನು ಬಂಧಿಸಿದ್ದಾರೆ. ಆತ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಬಂದಿದ್ದ ಹಿಂದೂ ಯುವತಿಯರ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ ಅವರನ್ನೂ ಬಲೆಗೆ ಬೀಳಿಸಲು ಅಶ್ರಫ್ ಪ್ರಯತ್ನಿಸಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಸಂತ್ರಸ್ತ ಹಿಂದೂ ಯುವತಿ ಮಾಧ್ಯಮಗಳಿಗೆ ನೀಡಿದ ಮಾಹಿತಿಯ ಪ್ರಕಾರ, ಅಶ್ರಫ್ ನಿಯಮಿತವಾಗಿ ಅವಳಿಗೆ ಅಶ್ಲೀಲ ವಿಡಿಯೋ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದನು. ಈ ಸಂದೇಶಗಳಲ್ಲಿ ‘ನನಗೆ ಹಿಂದೂ ಹುಡುಗಿಯರೇ ಇಷ್ಟ’, ‘ಪ್ರಸ್ತುತ ಹಿಂದೂ ಯುವತಿಯರು ಮುಸ್ಲಿಂ ಯುವಕರನ್ನೇ ಇಷ್ಟಪಡುತ್ತಾರೆ’ ಎಂಬಂತಹ ಸಂದೇಶಗಳಿದ್ದವು ಎಂದು ಸಂತ್ರಸ್ತ ಯುವತಿ ಹೇಳಿದ್ದಾಳೆ. ಇದರಿಂದ ಅಶ್ರಫ್ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸುತ್ತಿರುವುದು ಕಂಡುಬರುತ್ತದೆ. ಅಶ್ರಫ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಸಂತ್ರಸ್ತ ಯುವತಿಯು ತನ್ನ ತಂದೆಗೆ ತಿಳಿಸಿದ ನಂತರ, ಅವರು ಪೊಲೀಸರಿಗೆ ದೂರು ನೀಡಿದರು. ಈ ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಅಶ್ರಫ್, ಸಮಾಜವಾದಿ ಪಕ್ಷದ ನಗರಸೇವಕಿ (ಕಾರ್ಪೊರೇಟರ್) ಇರಮ್ ಸಿದ್ದಿಕಿ ಅವರ ಸೋದರಳಿಯನಾಗಿದ್ದಾನೆ. ಭಾಜಪದ ಸ್ಥಳೀಯ ಪದಾಧಿಕಾರಿ ನಿತಿನ್ ಬಂಕರ್ ಅವರು, ನಾಸಿಕ್‌ನಂತೆಯೇ ಇದೂ ಕೂಡ ‘ಕಾರ್ಪೊರೇಟ್ ಜಿಹಾದ್’ನ ಒಂದು ಪ್ರಕಾರವಾಗಿದೆ ಎಂದು ಹೇಳಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ