ಮಂಗಳೂರು – ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ (ಪಿ.ಯು.ಸಿ.) ಶಿವಮೊಗ್ಗದ ಯುವಸಾಧಕಿ ಕು. ವಿ.ಎಸ್. ಸಾಧನಾ ಇವರು ವಾಣಿಜ್ಯ ಶಾಖೆಯಲ್ಲಿ ಶೇ. ೯೫.೩೩ ಹಾಗೂ ಉಡುಪಿಯ ಶ್ರೀ. ಸ್ವರೂಪ ನಾಯಕ್ ಇವರು ವಿಜ್ಞಾನ ಶಾಖೆಯಲ್ಲಿ ಶೇ. ೯೫.೩ ರಷ್ಟು ಅಂಕವನ್ನು ಪಡೆದಿದ್ದಾರೆ.

ಸನಾತನದ ಸಾಧಕರಾದ ಶ್ರೀ. ವೇಲು ಸ್ವಾಮಿ ಮತ್ತು ಸೌ. ಸೆಲ್ವಿ ವೇಲು ಸ್ವಾಮಿ ಇವರ ಮಗಳಾದ ‘ಕು. ವಿ.ಎಸ್. ಸಾಧನಾ ಇವಳು ‘ಬಿಸಿನೆಸ್ ಸ್ಟಡೀಸ್, ಎಕಾನಾಮಿಕ್ಸ್’ ಮತ್ತು ‘ಸ್ಟ್ಯಾಟಿಸ್ಟಿಕ್ಸ್’ ೧೦೦ ಕ್ಕೆ ನೂರು ಅಂಕ ಪಡೆದಿದ್ದಾಳೆ. ‘ತಾನು ಪ್ರತಿದಿನ ೧ ಗಂಟೆ ‘ಶ್ರೀಗುರುದೇವ ದತ್ತ’ ಈ ನಾಮವನ್ನು ಜಪಿಸುತ್ತಿದ್ದೆನು. ಅಲ್ಲದೇ ಪ್ರಾಸಂಗಿಕ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದೆನು. ಅದೇ ರೀತಿ ನಾನು ಓದಿದ್ದನ್ನೆಲ್ಲಾ ಶ್ರೀಕೃಷ್ಣ ಮತ್ತು ಶ್ರೀರಾಮನಿಗೆ, ತನ್ನ ಅತ್ಯಂತ ಆಪ್ತ ಸ್ನೇಹಿತರಿಗೆ ಹೇಳುತ್ತಿದ್ದೆನು. ಇದರಿಂದ ನನ್ನ ಗ್ರಹಣ ಶಕ್ತಿ ಹೆಚ್ಚಾಯಿತು’ ಎಂದು ಅವಳು ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ.

ಶ್ರೀ. ಬಾಲಕೃಷ್ಣ ನಾಯಕ್ ಮತ್ತು ಸೌ. ಅಶ್ವಿನಿ ನಾಯಕ್ ನವರ ಪುತ್ರ ಉಡುಪಿಯ ಶ್ರೀ. ಸ್ವರೂಪ ನಾಯಕ್ ಇವನ ಯಶಸ್ಸಿನ ಬಗ್ಗೆ ಮಾತನಾಡುತ್ತಾ ಉಡುಪಿಯ ಸನಾತನದ ಸಾಧಕಿ ಸೌ. ಅಶ್ವಿನಿ ನಾಯಕ್ ಇವರು, ‘ಸ್ವರೂಪ ಇವನಿಗೆ ಸಾಧನೆಯಲ್ಲಿ ಜಿಜ್ಞಾಸೆಯಿದೆ. ಪರೀಕ್ಷೆ ಸಂದರ್ಭದಲ್ಲಿ ಗಡಿಬಿಡಿ ಅಥವಾ ಒತ್ತಡ ಮಾಡಿಕೊಳ್ಳದೇ ಸಹಜ ಸ್ಥಿತಿಯಲ್ಲಿ ಪರೀಕ್ಷೆ ಬರೆದು ಬರುತ್ತಿದ್ದ. ಪರೀಕ್ಷೆಗೆ ಓದಲು ರಜೆ ಇದ್ದಾಗ ಕೆಲವೊಮ್ಮೆ ಸತ್ಸಂಗಕ್ಕೂ ಜೋಡಣೆ ಆಗುತ್ತಿದ್ದನು. ಕೇವಲ ಗುರುಗಳ ಕೃಪೆಯಿಂದ ಈ ಅಂಕಗಳು ಸಿಗಲು ಸಾಧ್ಯವಾಯಿತು, ಎಂಬ ಶ್ರದ್ಧೆ ಅವನಲ್ಲಿದೆ’, ಎಂದು ಹೇಳಿದರು.
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಡಾ. ನರೇಂದ್ರ ದಾತೆ ಅವರಿಂದ ಹಂತಹಂತವಾಗಿ ಸಾಧನೆಯನ್ನು ಮಾಡಿಸಿಕೊಂಡ ಪ.ಪೂ ಭಕ್ತರಾಜ ಮಹಾರಾಜರು !
ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿವಿಧ ಪ್ರವಚನಗಳು ಮತ್ತು ಗ್ರಂಥ ಪ್ರದರ್ಶನಗಳಿಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ !
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಂಗಳೂರಿನಲ್ಲಿ ಭಾವಪೂರ್ಣ ವಾತಾವರಣದಲ್ಲಿ ಜರುಗಿದ ‘ಈಶ್ವರಪ್ರಾಪ್ತಿಗಾಗಿ ಸಂಗೀತ-ಸಾಧನಾ ಶಿಬಿರ’ !