ಇರಾನ್-ಅಮೆರಿಕ ಸಂಘರ್ಷ; ಮಧ್ಯಸ್ಥಿಕೆ ವಹಿಸಲು ಮುಂದಾದ ಪಾಕಿಸ್ತಾನಕ್ಕೆ ಇರಾನ್ ವಿದೇಶಾಂಗ ಸಚಿವರ ತಿರುಗೇಟು!

ತೆಹ್ರಾನ್ (ಇರಾನ್) – ಪಾಕಿಸ್ತಾನಕ್ಕೆ ಆಸಕ್ತಿಯಿದ್ದರೆ, ಅಫ್ಘಾನಿಸ್ತಾನದೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ಇರಾನ್ ಮಧ್ಯಸ್ಥಿಕೆ ವಹಿಸಿ ಸಹಾಯ ಮಾಡಬಹುದು ಎಂದು ಇರಾನ್, ಪಾಕಿಸ್ತಾನಕ್ಕೆ ತಪರಾಕಿ ನೀಡಿದೆ.
🔥 Diplomatic Reverse Swing: Iran Trolls Pakistan
Iranian FM Abbas Araghchi took a sharp jibe at Pakistan after its comments on the Iran-US issue.
“If Pakistan wishes, we can facilitate talks with Afghanistan!”
Araghchi turned Islamabad’s own rhetoric back on them, saying… pic.twitter.com/7iSeJVeaH5
— Sanatan Prabhat (@SanatanPrabhat) April 24, 2026
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘಚಿ ಅವರು ಮಾತನಾಡಿ, “ಒಂದು ವೇಳೆ ಎರಡೂ ದೇಶಗಳು (ಪಾಕ್-ಅಫ್ಘಾನಿಸ್ತಾನ) ಬಯಸಿದರೆ, ಅವುಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಇರಾನ್ ಸಹಾಯ ಮಾಡಲು ಸಿದ್ಧವಿದೆ” ಎಂದು ಹೇಳಿದ್ದಾರೆ. ಪಾಕಿಸ್ತಾನದ ಮಾತನ್ನೇ ಅವರಿಗೆ ತಿರುಗೇಟು ನೀಡುತ್ತಾ ಅರಘಚಿ ಅವರು, “ಯಾವುದೇ ಸಮಸ್ಯೆಯ ಪರಿಹಾರಕ್ಕೆ ಚರ್ಚೆ ಮತ್ತು ಪ್ರಾದೇಶಿಕ ಸಹಕಾರವೇ ಏಕೈಕ ಮಾರ್ಗವಾಗಿದೆ. ಉದ್ವಿಗ್ನತೆ ಹೆಚ್ಚಾಗದಂತೆ ತಡೆಯಲು ಎರಡೂ ದೇಶಗಳು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಬೇಕು” ಎಂದಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಹದಗೆಟ್ಟ ಸಂಬಂಧಗಳು!
2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಪಾಕಿಸ್ತಾನದೊಂದಿಗಿನ ಅದರ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನಕ್ಕೆ ತಾಲಿಬಾನ್ ಅನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡು ಭಾರತದ ವಿರುದ್ಧ ಬಳಸಿಕೊಳ್ಳುವ ಉದ್ದೇಶವಿತ್ತು; ಆದರೆ ತಾಲಿಬಾನ್ ಅವರ ಬಲೆಗೆ ಬೀಳದೆ ತನ್ನದೇ ಆದ ಸ್ವತಂತ್ರ ನೀತಿಯನ್ನು ಅನುಸರಿಸಲು ಪ್ರಾರಂಭಿಸಿತು. ಇದರಿಂದ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿತು. ಅಫ್ಘಾನಿಸ್ತಾನ ಸರಕಾರವು (ತಾಲಿಬಾನ್) ತನ್ನಲ್ಲಿ ಸಕ್ರಿಯವಾಗಿರುವ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (TTP) ಎಂಬ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಪಾಕಿಸ್ತಾನವು ಆಗಾಗ್ಗೆ ಅಫ್ಘಾನಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಇದರಿಂದ ಅಫ್ಘಾನಿಸ್ತಾನವನ್ನು ಆಳುತ್ತಿರುವ ತಾಲಿಬಾನ್ ಜೊತೆ ಪಾಕಿಸ್ತಾನದ ಹಗೆತನ ಇನ್ನಷ್ಟು ಹೆಚ್ಚಾಗಿದೆ. ಈ ವಿಚಾರವಾಗಿ ಉಭಯ ದೇಶಗಳ ಗಡಿಯಲ್ಲಿ ಆಗಾಗ್ಗೆ ಗುಂಡಿನ ಚಕಮಕಿ ನಡೆಯುತ್ತಿರುತ್ತದೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !