ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಘಟನೆಯ ನ್ಯಾಯಾಂಗ ಹೋರಾಟಕ್ಕೆ ಜಯ!

ಢಾಕಾ (ಬಾಂಗ್ಲಾದೇಶ) – ಇಲ್ಲಿನ ಸಹ-ಜಿಲ್ಲಾ ನ್ಯಾಯಾಧೀಶರು ಧಾಮರಾಯಿ ಉಪಜಿಲ್ಲೆಯ ಪೀಡಿತ ಹಿಂದೂಗಳನ್ನು ಇತ್ತೀಚೆಗೆ ಸುಳ್ಳು ಪ್ರಕರಣದಲ್ಲಿ ಖುಲಾಸೆ ಮಾಡಿದ್ದಾರೆ. ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ನ ಕಾನೂನು ಹೋರಾಟಕ್ಕೆ ಜಯ ಲಭಿಸಿದೆ ಎಂದು ಸಂಘಟನೆಯ ಸಂಸ್ಥಾಪಕ ಪೂ. ನ್ಯಾಯವಾದಿ ರವೀಂದ್ರ ಘೋಷ್ ಅವರು ಮಾಹಿತಿ ನೀಡಿದ್ದಾರೆ. ಜೀವನ ಪಾಲ್, ಕಾರ್ತಿಕ ಹಲದರ ಮತ್ತು ರೂಪಾ ಹಲದರ ಎಂಬುವವರೇ ಈ ಮೂವರು ಪೀಡಿತ ಹಿಂದೂಗಳಾಗಿದ್ದಾರೆ.
೧. ಖುಲಾಸೆಗೊಂಡ ಪೀಡಿತ ಹಿಂದೂಗಳು ಒಂದು ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಅವರಿಗೆ ನ್ಯಾಯ ನೀಡುವ ಬದಲಿಗೆ, ಢಾಕಾ ಪೊಲೀಸರ ಅಪರಾಧ ಶಾಖೆಯು ಮಾನವ ಹಕ್ಕುಗಳ ಉಲ್ಲಂಘನೆಯ ಹಳೆಯ ಪ್ರಕರಣವೊಂದರಲ್ಲಿ ದೂರುದಾರ ಹಿಂದೂಗಳ ವಿರುದ್ಧವೇ ಪ್ರಕರಣಗಳನ್ನು ದಾಖಲಿಸಿ ಅವರನ್ನು ಆರೋಪಿಗಳನ್ನಾಗಿ ಮಾಡಿತು.
೨. ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಘಟನೆಯು ಘಟನಾ ಸ್ಥಳಕ್ಕೆ ಹೋಗಿ ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸಿದಾಗ ಜೀವನ ಪಾಲ್, ಕಾರ್ತಿಕ ಹಲದರ ಮತ್ತು ರೂಪಾ ಹಲದರ ಅವರಿಗೆ ನೀಡಿದ ಕಿರುಕುಳಕ್ಕೆ ಪೊಲೀಸರೇ ಕಾರಣರೆಂದು ಕಂಡುಬಂದಿತು.
೩. ಪೂ. ನ್ಯಾಯವಾದಿ ರವೀಂದ್ರ ಘೋಷ್ ಅವರು ೨೧ ಏಪ್ರಿಲ್ ೨೦೨೬ ರಂದು ಢಾಕಾ ನ್ಯಾಯಾಲಯದ ಸಹ-ಜಿಲ್ಲಾ ನ್ಯಾಯಾಧೀಶರ ಮುಂದೆ ಪೀಡಿತ ಹಿಂದೂಗಳ ಪರವಾಗಿ ವಾದ ಮಂಡಿಸಿದರು. ಪೊಲೀಸರು ದೂರುದಾರರ ಮೇಲೆ ಒತ್ತಡ ಹೇರಿ ಮತ್ತು ಬೆದರಿಕೆ ಹಾಕಿ ಬಲವಂತವಾಗಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂಬ ಅಂಶವನ್ನು ನ್ಯಾಯವಾದಿ ಘೋಷ್ ಅವರು ನ್ಯಾಯಾಧೀಶರ ಗಮನಕ್ಕೆ ತಂದರು.
೪. ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದ ನಂತರ ಹಿಂದೂ ಪೀಡಿತರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ.
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers